Advertisement

ಯೋಧ ಅಭಿನಂದನ್‌ಗೆ ಅನಾರೋಗ್ಯ ರಜೆ

12:30 AM Mar 15, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನ ಸೇನೆ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ರ ವೈದ್ಯಕೀಯ ಹಾಗೂ ಇತರ ಪರೀಕ್ಷೆಗಳು ಪೂರ್ಣಗೊಂಡಿದ್ದು, ವೈದ್ಯರ ಸಲಹೆಯ ಮೇರೆಗೆ ಕೆಲವು ವಾರಗಳವರೆಗೆ ಅವರು ರಜೆಯ ಮೇಲೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ಪರೀಕ್ಷೆಯ ಜೊತೆಗೆ ವಿವಿಧ ತನಿಖಾ ಸಂಸ್ಥೆಗಳು ಅವರ ವಿಚಾರಣೆಯನ್ನೂ ನಡೆಸಿವೆ. ಅಲ್ಲದೆ ಇನ್ನೂ ಕೆಲವು ದಿನಗಳ ನಂತರ ಪುನಃ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಆಗ ಅವರು ವಿಮಾನ ಹಾರಾಟ ನಡೆಸಲು ಮೊದಲಿನಂತೆ ಸಿದ್ಧವಾಗಿದ್ದಾರೆಯೇ ಎಂಬುದನ್ನು ನಿರ್ಧರಿಸಲಾಗುತ್ತದೆ.

Advertisement

ಮಾರ್ಚ್‌ 3 ರಂದು ಅಭಿನಂದನ್‌ ಎಂಆರ್‌ಐ ಸ್ಕ್ಯಾನ್‌ ಮಾಡ ಲಾಗಿದ್ದು, ಇದರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಆದರೆ ಮಣಿಕಟ್ಟಿನ ಕೆಳಭಾಗದಲ್ಲಿ ಸಮಸ್ಯೆ ಇರು ವುದು ಕಂಡುಬಂದಿತ್ತು. ಫೆಬ್ರವರಿ 27 ರಂದು ಅವರು ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರು ಳಿಸಿದ ನಂತರ, ಮಿಗ್‌ 21 ವಿಮಾನ ಅಪಘಾತಗೊಂಡಿದ್ದರಿಂದ ಪಾಕ್‌ ಸೇನೆ ಕೈಗೆ ಸಿಕ್ಕಿಹಾಕಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next