Advertisement

ವೈಇಪಿಗೆ ಅರ್ಹತೆ ಪಡೆದ ಎನ್‌ಸಿಸಿಯ ಶ್ರವಣ್‌

07:10 AM Aug 18, 2017 | Team Udayavani |

ಮಹಾನಗರ: ಕಳೆದ ಜನವರಿ ಯಲ್ಲಿ ನಡೆದ ಎನ್‌ಸಿಸಿ ರಿಪಬ್ಲಿಕ್‌ ಡೇ ಕ್ಯಾಂಪ್‌-2017(ಆರ್‌ಡಿಸಿ)ನಲ್ಲಿ  ಭಾಗವ ಹಿಸಿದ್ದ   ಮಂಗಳೂರು ವಿಶ್ವವಿದ್ಯಾ ನಿಲಯದ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬನಾದ ಶ್ರವಣ್‌ ಕುಮಾರ್‌ ಅಂತಾರಾಷ್ಟ್ರೀಯ ಯುವಜನ ವಿನಿಮಯ ಕಾರ್ಯಕ್ರಮ (ವೈಇಪಿ)ಕ್ಕೆ ಅರ್ಹತೆ ಪಡೆದಿದ್ದಾರೆ.

Advertisement

ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಎನ್‌ಸಿಸಿ ಮಂಗಳೂರು ಗ್ರೂಪ್‌ನಿಂದ ವೈಇಪಿಗೆ ಅರ್ಹತೆ ಪಡೆದ ಏಕೈಕ ವಿದ್ಯಾರ್ಥಿ ಶ್ರವಣ್‌. ದೇಶದಲ್ಲಿ ಒಟ್ಟು 17 ಎನ್‌ಸಿಸಿ ಡೈರೆಕ್ಟೋರೇಟ್‌ಗಳಿದ್ದು, ಕರ್ನಾಟಕ- ಗೋವಾ ಡೈರೆಕ್ಟೋರೇಟ್‌ ನಿಂದ ವಿವಿ ಕಾಲೇಜಿನ ಶ್ರವಣ್‌ಕುಮಾರ್‌ ಹಾಗೂ ಶ್ರೀಗಣೇಶ್‌ ಭಾಗ ವಹಿಸಿದ್ದರು. ಇದರಲ್ಲಿ ಶ್ರವಣ್‌ಕುಮಾರ್‌ ಅವರು ವೈಇಪಿಗೆ ಅರ್ಹತೆ ಪಡೆದಿ ದ್ದಾರೆ ಎಂದು ಕಾಲೇಜಿಗೆ ಮಾಹಿತಿ ಲಭ್ಯ ವಾಗಿದೆ. ಕರ್ನಾಟಕ-ಗೋವಾ ಡೈರೆ ಕ್ಟೋರೇಟ್‌ನಿಂದ ಆರ್‌ಡಿಸಿ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಒಟ್ಟು 109 ವಿದ್ಯಾರ್ಥಿ ಗಳಲ್ಲಿ 17 ಮಂದಿ ಈ ಅವಕಾಶ ಪಡೆ ದಿದ್ದಾರೆ. ಪ್ರತಿ ಡೈರೆಕ್ಟೋರೇಟ್‌ನಿಂದ ಒಬ್ಬರಿಗೆ ಮಾತ್ರ ವೈಇಪಿಯಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡಲಾಗುವುದು. ಕರ್ನಾಟಕ- ಗೋವಾ ಡೈರೆಕ್ಟೋರೇಟ್‌ನಿಂದ ಅರ್ಹತೆ ಪಡೆದ 17 ಮಂದಿಯಲ್ಲಿ 11 ಮಂದಿಗೆ ವೈಇಪಿಗೆ ಅವಕಾಶವಿದ್ದು, ಉಳಿದವರು ರಿಸರ್ವ್‌ಡ್‌ ಅಭ್ಯರ್ಥಿಗಳಾಗಿರುತ್ತಾರೆ. ಇದರಲ್ಲಿ ಆಯ್ಕೆಯಾಗುವವರು ಅಕ್ಟೋ ಬರ್‌- ನವೆಂಬರ್‌ ನಲ್ಲಿ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡ 11 ದೇಶಗಳಲ್ಲಿ ನಡೆಯುವ ಶಿಬಿರದಲ್ಲಿ ಪಾಲ್ಗೊಳ್ಳುವರು. ಆ ಅವಕಾಶ ಶ್ರವಣ್‌ ಕುಮಾರ್‌ರನ್ನು ಕೈ ಹಿಡಿಯುತ್ತದೋ ಕಾದು ನೋಡಬೇಕಿದೆ.

ಪ್ರಸ್ತುತ ಶ್ರವಣ್‌ಕುಮಾರ್‌ ವೈಇಪಿಯಲ್ಲಿ ಖಚಿತವಾಗಿ ಭಾಗವಹಿಸುತ್ತಾರೆ ಎಂದು ಹೇಳುವಂತಿಲ್ಲ. ಅರ್ಹತೆ ಪಡೆದರೂ ರಿಸವ್‌xì ಅಭ್ಯರ್ಥಿಯಾಗಿ ಉಳಿಯಲೂ ಬಹುದು. 

11 ರಾಷ್ಟ್ರಗಳಾವುವು?
ಭಾರತ, ಭೂತಾನ್‌, ಬಾಂಗ್ಲಾದೇಶ, ರಷ್ಯಾ, ಶ್ರೀಲಂಕಾ, ನೇಪಾಳ, ಕಜಕಿಸ್ಥಾನ್‌, ಸಿಂಗಾಪುರ್‌, ವಿಯೆಟ್ನಾಂ, ಕಿರ್ಜಿಕಿಸ್ಥಾನ್‌, ಟರ್ಕಿಮಿನಿಸ್ಥಾನ್‌ ಹಾಗೂ ಮಾಲ್ಡೀವ್ಸ್‌ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ತಮ್ಮ ತಮ್ಮ ದೇಶಗಳ ಒಟ್ಟು ಸಂಸ್ಕೃತಿಯನ್ನು ವಿನಿಮಯ ಮಾಡಿ ಕೊಳ್ಳುವುದು ಇದರ ಮುಖ್ಯ ಉದ್ದೇಶ.

ವೈಇಪಿಯಲ್ಲಿ ಭಾಗವಹಿಸುವ ವಿದ್ಯಾ ರ್ಥಿಗಳಿಗೆ ಆರಂಭದಲ್ಲಿ ಹೊಸದಿಲ್ಲಿಯಲ್ಲಿ 10 ದಿನಗಳ ಶಿಬಿರ ಇದ್ದು, ಅಲ್ಲಿ ಅವರಿಗೆ ಅಗತ್ಯ ವಸ್ತುಗಳ ಕಿಟ್‌, ಯೂನಿಫಾರ್ಮ್ ಗಳನ್ನು ನೀಡಲಾಗುತ್ತದೆ. ಬಳಿಕ ವೈಇಪಿ ಕ್ಯಾಂಪ್‌ ತೆರಳುತ್ತಾರೆ. ವೈಇಪಿ ಕ್ಯಾಂಪ್‌ನಲ್ಲಿ ಆಯಾ ರಾಷ್ಟ್ರಗಳ ರಾಜಕೀಯ ನಾಯಕರು, ವಿದ್ಯಾಸಂಸ್ಥೆಗಳು, ಮಿಲಿಟರಿ ವ್ಯವಸ್ಥೆ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಅವಕಾಶವಿರುತ್ತದೆ. 

Advertisement

ಜತೆಗೆ ನಮ್ಮ ದೇಶದ ಸಾಂಸ್ಕೃತಿಕ ವ್ಯವಸ್ಥೆ ಯನ್ನೂ ಅವರಿಗೆ ಪರಿಚಯಿಸಬೇಕಾಗು ತ್ತದೆ. ವೈಇಪಿ ಕ್ಯಾಂಪ್‌ನಲ್ಲಿ ಭಾಗವಹಿಸುವ ಸಂದರ್ಭದಲ್ಲಿ ರಷ್ಯಾದಲ್ಲಾದರೆ 4 ದಿನಗಳ ಶಿಬಿರ ಹಾಗೂ ಇತರ ದೇಶಗಳಲ್ಲಿ 10 ದಿನಗಳ ಶಿಬಿರ ನಡೆಯಲಿದೆ.

ವಿವಿ ಕಾಲೇಜಿನಲ್ಲಿ ಪ್ರಸ್ತುತ 56 ಎನ್‌ಸಿಸಿ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಶೇ. 33ರ ಮೀಸಲಾತಿಯಂತೆ 18 ವಿದ್ಯಾರ್ಥಿ ನಿಯರಿದ್ದಾರೆ. ಪ್ರಸ್ತುತ ಒಬ್ಬ ವಿದ್ಯಾರ್ಥಿನಿ ಹೊಸದಿಲ್ಲಿಯಲ್ಲಿ ನಡೆಯುವ ಟಿಎಸ್‌ಸಿ ಕ್ಯಾಂಪ್‌ಗೆ ಅರ್ಹತೆ ಪಡೆಯಲು ಪ್ರಯತ್ನಿ ಸುತ್ತಿದ್ದಾಳೆ ಎಂದು ಎನ್‌ಸಿಸಿ ಅಧಿಕಾರಿ ಮೇಜರ್‌ ಡಾ| ಜಯರಾಜ್‌ ಎನ್‌. ಅವರು “ಉದಯವಾಣಿ’ಗೆ ತಿಳಿಸಿದ್ದಾರೆ. 

ಶ್ರವಣ್‌ 2ನೇ ವಿದ್ಯಾರ್ಥಿ?
ವೈಇಪಿಗೆ ಅರ್ಹತೆ ಪಡೆದ ಶ್ರವಣ್‌ಕುಮಾರ್‌ ಶಿಬಿರದಲ್ಲಿ ಭಾಗವಹಿಸಿದರೆ, ಅಂತಾರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡ ಮಂಗಳೂರು ವಿವಿಯ 2ನೇ ವಿದ್ಯಾರ್ಥಿ ಎನಿಸಿಕೊಳ್ಳುವರು.  1994ರಲ್ಲಿ ಚೇತನ್‌ಕುಮಾರ್‌ ಎಂಬ ವಿದ್ಯಾರ್ಥಿ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರು. ಆದರೆ, ಒಂದೇ ವರ್ಷ ಆರ್‌ಡಿಸಿ ಯಲ್ಲಿ ಒಂದೇ ಕಾಲೇಜಿನ  ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಜತೆಗೆ 2007ರ ಬಳಿಕ ವಿವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಕ್ಕ ಮೊದಲ ಅವಕಾಶವಿದು.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next