Advertisement
ಸಂಘದ ಅಪ್ಪಾ ಶತಮಾನೋತ್ಸವ ಸಭಾಂಗಣದಲ್ಲಿ ರವಿವಾರ ನಡೆದಶರಣಬಸವೇಶ್ವರ ವಸತಿ ಶಾಲೆ ಹಾಗೂ ಕಾಲೇಜಿನಮಿನಿ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವೈದ್ಯಕೀಯವೊಂದನ್ನು ಬಿಟ್ಟು ಶಿಕ್ಷಣ ಕ್ಷೇತ್ರದ ಎಲ್ಲ ಕೋರ್ಸ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಸಣ್ಣದಲ್ಲ. ಶರಣರು ಈ ಹಿಂದೆ ಅನ್ನದಾಸೋಹಗೈದರೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರು ಅಕ್ಷರ ದಾಸೋಹ ಸೂತ್ರ ಅಳವಡಿಸಿಕೊಂಡಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಹೈದ್ರಾಬಾದ್ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ| ಅಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕುವುದು ಹೆಚ್ಚು ಸಮಂಜಸವಾಗಿದೆ. ಈ ನಿಟ್ಟಿನಲ್ಲಿ ತಾವು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಮಟ್ಟೂರ ಅವರು ಹೇಳಿದರು.
ಸಂತೋಷಿ ಕೋರವಾರಗೆ ಲಕ್ಷ ರೂ. ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು. ಅದೇ ರೀತಿ ನೀಟ್‌ನಲ್ಲಿ 352ನೇ ರ್‍ಯಾಂಕ್ ಹಾಗೂ ಪಿಯುನಲ್ಲಿ ನಾಲ್ಕು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ಮನೋಜ ಟಿ., 561ನೇ ರ್‍ಯಾಂಕ್
ಶರಣಪ್ರಸಾದ ಕೋಲಾರ, 581ನೇ ರ್‍ಯಾಂಕ್ ಪಡೆದ ಅಖೀಲೇಷ, ಜೆಇಇ ಅಡ್ವಾನ್ಸ್‌ದಲ್ಲಿ ರ್‍ಯಾಂಕ್ ಪಡೆದ ಮನೋಜ ರಾಠೊಡ, ಜ್ಯೋರ್ತಿಲಿಂಗ ಜತೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್ ಪಡೆದ ಶ್ರೀರಕ್ಷಾ ಅವಧಾನಿ, ಮೊಹಮ್ಮದ್
ಅದ್ನಾನ್ ಇಡ್ರೇಸ್, ಕಾರ್ತಿಕ ಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ಡಾ| ಅಪ್ಪ ಅವರು ದೂರದೃಷ್ಟಿ ಹಾಗೂ ನಿಷ್ಠುರ ಹಾದಿಯಲ್ಲಿ ಸಂಸ್ಥೆ ಮುನ್ನಡೆಸಿದ್ದರಿಂದ ಸಂಸ್ಥೆ ಈಗ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ರಾಜ್ಯದ ಪ್ರತಿಷ್ಠಿತ ಪಬ್ಲಿಕ್ ಶಾಲೆಗಳಲ್ಲಿ ತಮ್ಮದು ಮೊದಲನೆಯದಾಗಿ ನಿಲ್ಲುವುದರಲ್ಲಿ ಎಲ್ಲರ ಪರಿಶ್ರಮ ಅಡಗಿದೆ ಎಂದು ಹೇಳಿದರು.
Related Articles
ಆಗಮಿಸಿದ್ದರು. ಪ್ರಾಚಾರ್ಯರಾದ ರಾಮಕೃಷ್ಣರೆಡ್ಡಿ ಇದ್ದರು. ಉಪನ್ಯಾಸಕ ಶಂಕರಗೌಡ ಹೊಸಮನಿ ನಿರೂಪಿಸಿದರು.
Advertisement
ಯುಪಿಎಸ್ಸಿ ರ್‍ಯಾಂಕ್ ವಿಜೇತರಿಗೆ ವಿಶೇಷ ಸತ್ಕಾರ ಮಿನಿ ಘಟಿಕೋತ್ಸವದಲ್ಲಿ ಪ್ರಸಕ್ತವಾಗಿ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ದೇಶಕ್ಕೆ 25ನೇ ರ್‍ಯಾಂಕ್ ಪಡೆದ ಎಸ್‌ಬಿಆರ್‌ನ ಹಿಂದಿನ ವಿದ್ಯಾರ್ಥಿಗಳಾದ ಶೇಖ್ ತನ್ವೀರ್ ಆಸೀಫ್ ಹಾಗೂ 376ನೇ ರ್‍ಯಾಂಕ್ ಪಡೆದ ಅಮರೇಶ್ವರ ಪಾಟೀಲ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನಿತಗೊಂಡು ಮಾತನಾಡಿದ ಶೇಖ್ ತನ್ವಿರ್ ಆಸೀಫ್, ಅಮರೇಶ್ವರ ಪಾಟೀಲ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತಡ ಇದ್ದೇ ಇರುತ್ತದೆ. ಆದರೆ ಕಠಿಣ ಪರಿಶ್ರಮ ಹಾಗೂ ಪ್ರಮುಖವಾಗಿ ಮನಸ್ಸಿನೊಳಗೆ ಮಾಡುವ ಛಲಗಾರಿಕೆ ಇದ್ದಲ್ಲಿ ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು.