Advertisement

ಬಸವನಾಡಿನಲ್ಲಿ ಶತ ವಚನ ಸಂಗೀತ ಕ್ರಾಂತಿ

06:35 PM Sep 09, 2021 | Team Udayavani |

ವಿಜಯಪುರ: ಏಕಕಾಲಕ್ಕೆ ನೂರು ವಚನಗಳಿಗೆ ಧ್ವನಿಮುದ್ರಣ ನಡೆಯಲಿದ್ದು, ವಚನ ಸಂಗೀತ ಕ್ಷೇತ್ರದಲ್ಲಿ ದಾಖಲೆ ಬರೆಯಲು ವೇದಿಕೆಯೊಂದು ಸೃಷ್ಟಿಯಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ “ಸಂಗೀತ ಕ್ರಾಂತಿ’ಗೆ ಬಸವಜನ್ಮಭೂಮಿ ವಿಜಯಪುರ ಸಾಕ್ಷಿಯಾಗಲಿದೆ.

Advertisement

ಧಾರವಾಡದ ಹಿರಿಯ ಸಂಗೀತ ಕಲಾವಿದೆ ಡಾ|ನಂದಾ ಪಾಟೀಲ ಅವರು ತಮ್ಮ ಶಿಷ್ಯ ಡಾ|ಹರೀಶ ಹೆಗಡೆ ಸಹಕಾರದಲ್ಲಿ ತಲಾ 10 ವಚನಗಳ 10 ಧ್ವನಿಸುರುಳಿಯಂತೆ 100 ವಚನಗಳಿಗೆ ರಾಗ ಸಂಯೋಜಿಸಿ, ಏಕಕಾಲಕ್ಕೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲೇ ಕುಳಿತಿದ್ದ ಡಾ|ನಂದಾ ಅವರು ತಮ್ಮ ಪತಿ ಡಾ|ಮಲ್ಲಿಕಾರ್ಜುನ ಅವರೊಡನೆ ಚರ್ಚಿಸಿ, ಶಿಷ್ಯ ಡಾ|ಹರೀಶ ಪಾಟೀಲ ಹಾಗೂ ವಿಜಯಪುರದ ಸಂಗೀತ ಕಲಾವಿದರೊಂದಿಗೆ ಗೂಗಲ್‌ ಮೀಟ್‌ನಲ್ಲಿ ಸಂವಾದ ನಡೆಸಿ ಈ ಯೋಜನೆಗೆ ಅಂತಿಮ ರೂಪ ಕೊಟ್ಟಿದ್ದಾರೆ.

ಐತಿಹಾಸಿಕ ದಾಖಲೆ: ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ಧರಾಮ ಶರಣರ ತಲಾ 10 ವಚನಗಳು, ಶಿವಶರಣೆಯರ 10, ಜನಪದಗಳಲ್ಲಿ ಬಸವಾದಿ ಶರಣರ 10, ಹರಿಹರ, ಚಾಮರಸ, ಕುವೆಂಪು, ಜಿ.ಎಸ್‌.ಶಿವರುದ್ರಪ್ಪ , ಚನ್ನವೀರ ಕಣವಿ ‌ ಕವಿಗಳಂಥ ಮೇರು ಪ್ರತಿಭೆಗಳು ಕಂಡಂತೆ ಶರಣರ ಕುರಿತ 10 ವಚನಗಳು, ಬಸವೋತ್ತರ ಯುಗದ 10 ವಚನಗಳು ಹೀಗೆ ವರ್ಗೀಕರಣ ಮಾಡಿಕೊಂಡು ವಚನಗಳು ಇದೇ ಮೊದಲ ಬಾರಿಗೆ ರಾಗದ ತೆಕ್ಕೆಗೆ ಸಿಗುತ್ತಿರುವುದೂ ಐತಿಹಾಸಿಕ ದಾಖಲೆಯೇ ಸರಿ. ಈ ನೂರು ವಚನಗಳಿಗೆ ಯುವ ಪ್ರತಿಭೆಗಳಾದ ಯಲ್ಲಾಪುರದ ಕವಿತಾ ಹೆಗಡೆ, ಡಾ|ಹರೀಶ ಹೆಗಡೆ, ಗಂಗಾವತಿಯ ವಿದ್ಯಾಶ್ರೀ ಸಾಲಿಮಠ, ಬೆಂಗಳೂರಿನ ದೀಪ್ತಿ ಭಟ್‌, ವಿಜಯಪುರದ ಗೀತಾ ಕುಲಕರ್ಣಿ, ಸಾಕ್ಷಿ ಹಿರೇಮಠ, ದರ್ಶನ ಮೆಳವಂಕಿ, ಗಣೇಶ ವಾರದ ಅವರು ಈ ಶತ ವಚನಗಳಿಗೆ ಧ್ವನಿಯಾಗಿದ್ದಾರೆ.

ನಾಲತವಾಡದ ಯುವಪ್ರತಿಭೆ ವೀರೇಶ ವಾಲಿ ಸಾರಥ್ಯದ ಸ್ಪಾಟ್‌ಲೆçಟ್‌ ಸಂಗೀತ ಸಂಸ್ಥೆಯಲ್ಲಿ ನೂರು ವಚನಗಳಿಗೆ ಧ್ವನಿಮುದ್ರಣ ನಡೆದಿದ್ದು, ಬಸವನಬಾಗೇವಾಡಿ ದಿವ್ಯಾಂಗ ಕಲಾವಿದ ಶ್ರೀಮಂತ ಅವಟಿ ಹಿನೆ °ಲೆ-ವಾದ್ಯ ಸಂಯೋಜನೆ ಮಾಡಿದ್ದಾರೆ.

ಬಿಡುಗಡೆ ಯಾವಾಗ?: ಡಾ|ಮಲ್ಲಿಕಾರ್ಜುನ ಪಾಟೀಲ ಅವರು ಡಾ|ನಂದಾ ಪಾಟೀಲ ಸಂಗೀತ ಅಕಾಡೆಮಿ ಮೂಲಕ ಸ್ವಯಂ ಸುಮಾರು 3 ಲಕ್ಷ ರೂ. ಹಣ ತೊಡಗಿಸಿ ಈ ಐತಿಹಾಸಿಕ ದಾಖಲೆ ಯೋಜನೆ ಅನುಷ್ಠಾನಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಯುವ ಪ್ರತಿಭೆಗಳ ಈ10ಧ್ವನಿ ಸುರುಳಿಗಳಲ್ಲದೇ ‌ಡಾ|ನಂದಾ ಪಾಟೀಲ ಅವರ ವಚನ, ಹಿಂದೂಸ್ತಾನಿ ಸೇರಿದಂತೆ ಇನ್ನೂ ಮೂರು ಧ್ವನಿ ಸುರುಗಳಿಗಳೂ ಇದೇ ವೇಳೆ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ.

Advertisement

ಜನವರಿ ತಿಂಗಳಲ್ಲಿ ಕುಡಿಯೊಡೆದ ಧ್ವನಿಮುದ್ರಣ ಯೋಜನೆ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಲೋಪ ತಿದ್ದುವ ಕಾರ್ಯ ನಡೆದಿದೆ. ಅಂದುಕೊಂಡಂತಾದರೆ ಅಕ್ಟೋಬರ್‌-ಡಿಸೆಂಬರ್‌ ತಿಂಗಳಲ್ಲಿ ಸಿಡಿಗಳು ಲೋಕಾರ್ಪಣೆಗೊಳ್ಳಲಿವೆ.

ಸಂಗೀತ ದಿಗ್ಗಜರ 5 ಕೃತಿಗಳ ಲೋಕಾರ್ಪಣೆ
ಇದೇ ಸಂದರ್ಭದಲ್ಲಿ ಸಂಗೀತಕ್ಷೇತ್ರದಲ್ಲಿಕನ್ನಡ ನಾಡಿನಹೆಸರನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಭಾರತರತ್ನ ಪಂ|ಭೀಮಸೇನ್‌ ಜೋಶಿ, ಪಂ|ಮಲ್ಲಿಕಾರ್ಜುನ ಮನ್ಸೂರ, ಡಾ|ಗಂಗೂಬಾಯಿ ಹಾನಗಲ್‌, ಬಾಳಪ್ಪಹುಕ್ಕೇರಿ, ಪಂ|ಬಸವರಾಜ ರಾಜಗುರು ಅವರ ಕುರಿತಾದ 5 ಕೃತಿಗಳು ಲೋಕಾರ್ಪಣೆ ಗೊಳ್ಳಲಿವೆ.

ನೂರು ವಚನಗಳಿಗೆ ರಾಗ ಸಂಯೋಜಿಸಿ, ಧ್ವನಿಮುದ್ರಿಸಿ, ಏಕಕಾಲಕ್ಕೆಹೊರತರುವಯೋಜನೆ ನಮ್ಮ ಸ್ಟುಡಿಯೋದಲ್ಲೇ ನಡೆಯುತ್ತಿರುವುದು ನಮ್ಮ ಸೌಭಾಗ್ಯ. ನಮ್ಮ ಮೇಲೆ ವಿಶ್ವಾಸ ಇರಿಸಿ ಡಾ|ಪಾಟೀಲ ದಂಪತಿ ಅವಕಾಶ ನೀಡಿರುವುದು ನಮ್ಮ ಪುಣ್ಯ.
ವೀರೇಶ ವಾಲಿ, ಸ್ಪಾಟ್‌ಲೈಟ್‌ ಸ್ಟುಡಿಯೋ, ವಿಜಯಪುರ

ನಮ್ಮಗುರುಗಳ ಮಾರ್ಗದರ್ಶನದಲ್ಲಿ ಎಲ್ಲೂ ಹಾಡದ ನೂರು ವಚನಗಳಿಗೆ ರಾಗ ಸಂಯೋಜಿಸುವ ಮಹತ್ವದ ಕಾರ್ಯದಲ್ಲಿ ನನಗೆಅವಕಾಶ ಸಿಕ್ಕಿದ್ದು, ನನ್ನ ಮೇಲೆ ಅವರಿಗಿರುವ ವಿಶ್ವಾಸಕ್ಕೆ ಸಾಕ್ಷಿ. ಡಾ|ನಂದಾ,ಡಾ|ಮಲ್ಲಿಕಾರ್ಜುನದಂಪತಿ ಪರಿಶ್ರಮಕ್ಕೆಬೆಲೆ ಕಟ್ಟಲಾಗದು.
ಡಾ| ಹರೀಶ ಹೆಗಡೆ,
ಯಲ್ಲಾಪುರ, ಶತ ವಚನಗಳ ರಾಗ ಸಂಯೋಜಕರು

ನನ್ನ ಧ್ವನಿ ಹಾಡಿಗೆ ಸಹಕರಿಸದ ಕಾರಣಯುವ ಪ್ರತಿಭೆಗಳ ಧ್ವನಿಗಳ ಮೂಲಕ ಶರಣರ ವಚನಗಳನ್ನು ಮನೆ-ಮನಗಳಿಗೆ ತಲುಪಿಸುವಯೋಚನೆ ಮಾಡಿದ್ದೆ. ನನ್ನ ಪತಿ ನೀಡಿದ ಪ್ರೋತ್ಸಾಹ, ಕಲಾವಿದರು ನೀಡಿದ ಬೆಂಬಲ, ಸಹಕಾರದಿಂದ ಇದು ಸಾಧ್ಯವಾಗಿದೆ.
ಡಾ|ನಂದಾ ಪಾಟೀಲ, ಶತ ವಚನಗಳ ಸಂಗೀತ ಸಂಯೋಜಕಿ, ಧಾರವಾಡ

ಹೊಸದಾಗಿ ಬೆಳಕುಕಾಣದ ವಚನಗಳಿಗೆ ರಾಗ ಸಂಯೋಜಿಸಿ ಹೊರತರುವ ಪ್ರಯತ್ನಗಳೇ ನಡೆಯುತ್ತಿಲ್ಲ. ಹೀಗಾಗಿ ಸಂಗೀತದಯುವ ಪ್ರತಿಭೆಗಳಲ್ಲಿ ಸೃಜನಶೀಲತೆ ಮೂಡಿಸಲು ಈ ಯೋಜನೆಗೆ ಮುಂದಾಗಿದ್ದೇನೆ. ಜನರಿಗೆ ಮೆಚ್ಚುಗೆಯಾದರೆ ಸಾಕು.
ಡಾ| ಮಲ್ಲಿಕಾರ್ಜುನ ಪಾಟೀಲ, ಶತ ವಚನಗಳಯೋಜನೆ ನಿರ್ಮಾಪಕ

*ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next