Advertisement
ಮೂರೂವರೆ ಗಂಟೆ ತಡವಾಗಿ ತಲುಪಿದ್ದು ಪ್ರಯಾಣಿಕರು ರೋಸಿ ಹೋಗಿದ್ದರು. ಅರಸೀಕೆರೆ, ಕಡೂರು, ಬೀರೂರು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ರೈಲು ನಿಲ್ಲಿಸಲಾಗಿತ್ತು. ಪ್ರಯಾಣಿಕರಿಗೆ ತಡವಾಗಿದ್ದಕ್ಕೆ ಕಾರಣವೂ ಗೊತ್ತಿರಲಿಲ್ಲ.
Related Articles
Advertisement
ಉಳಿದ ರೈಲುಗಳು ವಿಳಂಬಕಳೆದ ರಾತ್ರಿ ಶಿವಮೊಗ್ಗದಿಂದ ತೆರಳುವ ಮತ್ತು ಶಿವಮೊಗ್ಗ ಕಡೆಗೆ ಆಗಮಿಸಬೇಕಿದ್ದ ಉಳಿದ ರೈಲುಗಳು ಕೂಡ ವಿಳಂಬವಾಗಿ ಸಂಚರಿಸಿವೆ. ಮಧ್ಯಾಹ್ನ 3 ಗಂಟೆಗೆ ಹೊರಡುವ ಬೆಂಗಳೂರು ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು 25 ನಿಮಿಷ ತಡವಾಗಿ ಶಿವಮೊಗ್ಗ ನಿಲ್ದಾಣ ತಲುಪಿದೆ. ಇನ್ನು, ರಾತ್ರಿಯ ತಾಳಗುಪ್ಪ – ಶಿವಮೊಗ್ಗ – ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲು ಕೂಡ ವಿಳಂಬವಾಗಿ ಸಂಚರಿಸಿದೆ. ಮಧ್ಯರಾತ್ರಿ 1.20ಕ್ಕೆ ತಿಪಟೂರು ನಿಲ್ದಾಣಕ್ಕೆ ತಲುಪಬೇಕಿದ್ದ ರೈಲು ರಾತ್ರಿ 2 ಗಂಟೆಗೆ ನಿಲ್ದಾಣಕ್ಕೆ ತೆರಳಿದೆ.