Advertisement

ಬಗರ್‌ ಹುಕುಂ ಭೂಮಿ ಮಾಫಿಯಾದವರ ಪಾಲು

12:03 PM Jul 07, 2019 | Suhan S |

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಣದ ಆಸೆಗೆ ಬಲಿಯಾಗಿ ಕೃಷಿ ಭೂಮಿಯನ್ನು ಭೂಗಳ್ಳಿಗೆ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇವೆ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರಿನಿವಾಸ್‌ ಆರೋಪಿಸಿದರು.

Advertisement

ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿ ದರು. ಸರ್ವೆ ಇಲಾಖೆ ಅಧಿಕಾರಿಗಳು ರೈತರನ್ನು ಇಲಾಖೆಗೆ ಅಲೆಸುತ್ತಾರೆ. ಹಣ ನೀಡಿದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕೃಷಿಕರಿಗೆ ಅನುಕೂಲ ಅಗಲೆಂದು ಬಗರ್‌ ಹುಕಂ ಜಾರಿಗೆ ತಂದರು. ಆದರೆ, ಕಂದಾಯ ಇಲಾಖೆ ಅಧಿಕಾರಿ ಗಳು ಹಣದ ದಾಹಕ್ಕಾಗಿ ಸರ್ಕಾರಿ ಭೂಮಿಯನ್ನು ಭೂಮಾಫಿಯಾ ದವರಿಗೆ ಖಾತೆ ಮಾಡುತ್ತಿದ್ದಾರೆ. ದಂಡಿಗನಹಳ್ಳಿ ಹೋಬಳಿ ದೂತನೂರು ಕಾವಲು, ಶ್ರವಣಬೆಳಗೊಳ ಹಾಗೂ ಕಸಬಾ ಹೋಬಳಿ ಕೆಲ ಭಾಗದಲ್ಲಿ ರೈತರ ಸಾಗುವಳಿ ಕೃಷಿ ಭೂಮಿಯನ್ನು ಅನ್ಯರ ಹೆಸರಿಗೆ ಖಾತೆ ಮಾಡುವ ಮೂಲಕ ತೊಂದರೆ ನೀಡುತ್ತಿದ್ದಾರೆ ಈ ಬಗ್ಗೆ ಉಪವಿಭಾಗಾಧಿಕಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗಿಲ್ಲ ಎಂದರು.

ಸರ್ಕಾರಿ ಭೂಮಿಯನ್ನು ನಖಲಿ ದಾಖಲೆ ಸೃಷ್ಟಿಸಿ, ತಹಶೀಲ್ದಾರ್‌ ಸೀಲು ಸಹಿ ಮಾಡಿ ಮುಗ್ದ ರೈತರಿಗೆ ಹಕ್ಕು ಪತ್ರವೆಂದು ದಲ್ಲಾಳಿಗಳ ಮೂಲಕ ಲಕ್ಷಾಂತರ ಹಣಕ್ಕೆ ಹಂಚುವ ಕೆಲಸವನ್ನು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ತಾಲೂಕಿನಲ್ಲಿ ಲಕ್ಷಾಂತ ತೆಂಗಿನ ಮರಗಳು ನೀರಿ ಲ್ಲದೆ ಹಾಳಾಗಿವೆ. ತೆಂಗು ಪುನಶ್ಚೇತನ ಯೋಜನೆ ಮೂಲಕ ಒಂದು ತೆಂಗಿನ ಮರಕ್ಕೆ 400 ರೂ. ನೀಡುವ ಮೂಲಕ ಮೈತ್ರಿ ಸರ್ಕಾರ ರೈತರಿಗೆ ಅಪಮಾನ ಮಾಡಿದೆ, ಕನಿಷ್ಠ ಒಂದು ತೆಂಗಿನ ಮರಕ್ಕೆ 15 ಸಾವಿರ ಹಣ ನೀಡಬೇಕು ಎಂದು ಆಗ್ರಹಿಸಿದರು.

Advertisement

ಕುಮಾರಸ್ವಾಮಿ ಚುನಾವಣೆ ವೇಳೆ ರೈತರ ಸಾಲ ಸಂಪೂರ್ಣ ಮನ್ನ ಮಾಡು ತ್ತೇನೆ ಎಂದು ಹೇಳಿ ಕೊಟ್ಟು ಮಾತನ್ನು ತಪ್ಪಿದ್ದಾರೆ. ಸ್ತ್ರೀಶಕ್ತಿ ಸಾಲ ಮನ್ನ ಮಾಡು ವುದಾಗಿ ಹೇಳಿ ವಚನ ಭ್ರಷ್ಟರಾಗಿದ್ದಾರೆ ಎಂದು ಆಪಾದಿಸಿದರು.

ಕೇಂದ್ರದ ಮೋದಿ ಸರ್ಕಾರ ಬಜೆಟ್ ರೈತಪರವಾಗಿಲ್ಲ, ಡಾ.ಸ್ವಾಮಿನಾಥನ್‌ ವರದಿ ಜಾರಿ ಮಾಡಿಲ್ಲ. ಹೀಗಾಗಿ ಜು.16 ರಂದು ಜಿಲ್ಲಾಧಿಕಾರಿ ಕಚೇರಿಗೆ ಟ್ರ್ಯಾಕ್ಟರ್‌ ಪ್ರವೇಶ ಮಾಡುವ ಮೂಲಕ ವಿನೂತನವಾಗಿ ಧರಣಿಗೆ ನಿರ್ಧರಿಸ ಲಾಗಿದೆ ಎಂದು ಹೇಳಿದರು.

ಮನವಿ ಸ್ವೀಕರಿಸಿ ತಹಶೀಲ್ದಾರ್‌ ಜೆ.ಬಿ. ಮಾರುತಿ ಮಾತನಾಡಿ, ತಾಲೂಕಿ ನಲ್ಲಿ ನಖಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿರುವ 10 ಮಂದಿ ವಿರುದ್ಧ ಇಲಾಖೆ ತನಿಖೆ ನಡೆಸುತ್ತಿದೆ. 263 ದಾಖಲೆಯನ್ನು ಮರು ಪರಿಶೀಲನೆ ಮಾಡುವ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿದ ಮೇಲೆ ಧರಣಿ ಕೈ ಬಿಟ್ಟರು. ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಎಂ.ಕೆ.ಸುರೇಶ್‌, ಜಿಲ್ಲಾ ವಕ್ತಾರ ಶ್ರೀಕಂಠ, ಜಿಲ್ಲಾ ಉಪಾಧ್ಯಕ್ಷ ಸಿ.ಎಲ್.ಹರೀಶ್‌, ಕಾರ್ಯದರ್ಶಿ ನಂಜೆಗೌಡ, ಖಜಾಂಚಿ ಬಾಲು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next