Advertisement

ದುರ್ಬಲರ ಸೇವೆ ದೇವರಿಗೆ ಸಲ್ಲಲಿದೆ: ಪೇಜಾವರ ಶ್ರೀ

11:19 PM Mar 13, 2022 | Team Udayavani |

ಬೆಂಗಳೂರು: ದೇವರು ಸಮಾಜದ ಎಲ್ಲರ ಹೃದಯದಲ್ಲಿಯೂ ನೆಲೆಸಿದ್ದು, ದೇಗುಲದಲ್ಲಿ ಪೂಜೆ ಮಾಡುವುದರಿಂದ ಮಾತ್ರ ಒಲಿಯುವುದಿಲ್ಲ. ದುಃಖಿತರು- ದುರ್ಬಲರ ಸೇವೆ ಮಾಡುವುದು ಕೂಡ ಭಗವಂತನಿಗೆ ಸಲ್ಲುತ್ತದೆ ಎಂದು ಪೇಜಾವರ ಮಠದ ಪೀಠಾಧ್ಯಕ್ಷ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಬಿಎನ್‌ಎಂ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮನೋನಂದನ ಕೇಂದ್ರದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಕಾಲಿನ ಬೆರಳಿಗೆ ಆಗುವ ಗಾಯಕ್ಕೆ ಇಡೀ ದೇಹವೇ ನೋವು ತಿನ್ನುತ್ತದೆ. ಅದೇ ರೀತಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಗುಲುವ ನೋವಿಗೆ ಪ್ರತಿಯೊಬ್ಬರೂ ಸ್ಪಂದಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಸರಕಾರ ಸಹಕಾರ
ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ಮನೋನಂದನ ಕೇಂದ್ರವು ವಿಕಲಾಂಗ ಮಕ್ಕಳ ಸೇವೆಯಲ್ಲಿ ತೊಡಗಿದ್ದು, ಸಂಸ್ಥೆಗೆ ಅಗತ್ಯವಿರುವ ಸಹಕಾರವನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಉಳ್ಳವರು ತಮ್ಮ ಮಕ್ಕಳ ಭವಿಷ್ಯಕ್ಕೆ ಬೇಕಾದ ತರಬೇತಿ ಮತ್ತು ವಿದ್ಯೆಯನ್ನು ಕಲ್ಪಿಸುತ್ತಾರೆ. ಆದರೆ, ಬಡವರ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಮನೋನಂದನ ಕೇಂದ್ರ ಕೆಲಸ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ ಕುಸುಮಾ ಭಟ್ಟ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next