Advertisement
ಅವರು ಆ.17ರಂದು ಘಾಟ್ಕೋಪರ್ ಪಶ್ಚಿಮದ ಶ್ರೀ ಜಂಗಲೇಶ್ವರ ದೇವಸ್ಥಾನ ಸಭಾಗೃಹ ದಲ್ಲಿ ಕನ್ನಡ ಸೇವಾ ಸಂಘ ಪೊವಾಯಿ ಇದರ 22ನೇ ವರ್ಷದ ವಾರ್ಷಿ ಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 22 ವರ್ಷಗಳ ಹಿಂದೆ ಸದುದ್ದೇಶದಿಂದ ಸ್ಥಾಪಿತವಾದ ಈ ಸಂಸ್ಥೆ ಇಂದು ಉತ್ತಮ ಕಾರ್ಯಕರ್ತರು ಹಾಗೂ ದಾನಿಗಳ ಪ್ರಯತ್ನದಿಂದ ಮುಂಬಯಿ ಮಹಾ ನಗರದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಬೆಳೆ ಯುತ್ತಿರುವುದು ಅಭಿನಂದನೀಯ ಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸೇವಾ ಸಂಘ ಪೊವಾಯಿ ಇದರ ಅಧ್ಯಕ್ಷ ಕರುಣಾಕರ ವಿ. ಶೆಟ್ಟಿ ಅವರು, ಪರಿಸರದ ತುಳು ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸ್ಥಾಪಿತ ಗೊಂಡು ಇದೀಗ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದೆ. ಗಣ್ಯರು ನೀಡಿದ ಸಹಕಾರ ಹಾಗೂ ಪ್ರೋತ್ಸಾಹದಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡುವುದರೊಂದಿಗೆ ನಮ್ಮ ಸಂಸ್ಥೆಯ ಮಹಿಳಾ ವಿಭಾಗ ಹಾಗೂ ಯುವ ವಿಭಾಗವು ಸಕ್ರಿಯವಾಗಿ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ದಾನಿಗಳು ತಮ್ಮ ಸಹಕಾರವನ್ನು ಸದಾ ಈ ಸಂಸ್ಥೆಗೆ ನೀಡಿ ಪ್ರೋತ್ಸಾಹಿಸಬೇಕು ಎಂದು ನುಡಿದರು. ಸಮಾರಂಭದಲ್ಲಿ ಸಮಾಜರತ್ನ ಪ್ರಶಸ್ತಿಯನ್ನು ಸಮಾಜಸೇವಕ ಎಲ್ಲೂರು ರಘುವೀರ್ ಎ. ಶೆಟ್ಟಿ ಅವರಿಗೆ ಹಾಗೂ ಕನ್ನಡ ಜ್ಯೋತಿ ಪ್ರಶಸ್ತಿಯನ್ನು ಮುಂಬಯಿಯ ಲೇಖಕ ಕರುಣಾಕರ ಶೆಟ್ಟಿ ಪಣಿಯೂರು ಅವರಿಗೆ ನೀಡಿ ಗೌರವಿಸಲಾಯಿತು. ಕಲಾಪೋಷಕ ಅಜಿತ್ ಶೆಟ್ಟಿ ಬೆಳ್ಮಣ್ ಮತ್ತು ಸಮಾಜಸೇವಕ ಉಮೇಶ್ ಜಿ. ಆಚಾರ್ಯ ದಂಪತಿಗಳನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಪ್ರಸಕ್ತ ವರ್ಷದ ಸಿಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಅಶ್ಮಿತಾ ಚಂದ್ರಹಾಸ್ ರೈ ಬೊಲ್ನಾಡುಗುತ್ತು ಹಾಗೂ ಆಶೀಷ್ ಸೀತಾರಾಮ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ಪಾಸ್‌ಪೋಲಿ ಕನ್ನಡ ಶಾಲೆಯ ಮಕ್ಕಳಿಗೆ ಮಹೇಶ್ ಶೆಟ್ಟಿ ಅವರ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಾಗರಾಜ್ ಗುರುಪುರ ಅವರು ನಿರೂಪಿಸಿದರು. ಪ್ರಶಾಂತಿ ಡಿ. ಶೆಟ್ಟಿ, ಜ್ಯೋತಿ ಆರ್. ಶೆಟ್ಟಿ, ಪ್ರವೀಣಾ ಡಿ. ಸಾಲ್ಯಾನ್ ಹಾಗೂ ಪ್ರಭಾಕರ್ ಶೆಟ್ಟಿ ಪಣಿಯೂರು ಅವರು ಸಮ್ಮಾನ ಪತ್ರವನ್ನು ವಾಚಿಸಿದರು. ವೇದಿಕೆಯಲ್ಲಿ ಗೌರವ ಅತಿಥಿಗಳಾದ ಸಮಾಜಸೇವಕ ರಮೇಶ್ ಶೆಟ್ಟಿ ಸಿದ್ಧಕಟ್ಟೆ, ವನಿತಾ ಪಾಂಡುರಂಗ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಕರುಣಾಕರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಸಾಂತೂರ್, ಮಹಾಪೋಷಕ ಮಹೇಶ್ ಎಸ್. ಶೆಟ್ಟಿ, ಸಲಹೆಗಾರರಾದ ನ್ಯಾಯವಾದಿ ಆರ್. ಜಿ. ಶೆಟ್ಟಿ, ಕೋಶಾಧಿಕಾರಿ ಸಂದೇಶ್ ಆರ್. ಶೆಟ್ಟಿ ಮೂಡುಬೆಳ್ಳೆ, ಯುವ ವಿಭಾಗದ ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ವರದಿಯನ್ನು ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಅವರು ವಾಚಿಸಿದರು. ಪ್ರಶಾಂತಿ ಡಿ. ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಅತಿಥಿ ಗಣ್ಯರನ್ನು ಸಂಸ್ಥೆಯ ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಮತ್ತು ಮಹಿಳಾ ವಿಭಾಗದ ಸದಸ್ಯರಿಂದ ನೃತ್ಯ ವೈಭವ, ಬಿಲ್ಲವರ ಅಸೋಸಿಯೇಶನ್ ಸ್ಥಳೀಯ ಕಚೇರಿಯ ಸದಸ್ಯರಿಂದ ಬಾಬಾಪ್ರಸಾದ್ ಅರಸ ಕುತ್ಯಾರು ರಚಿಸಿ ನಿರ್ದೇಶಿಸಿದ ಸೋತು ಗೆಂದಿಯೊಲು ಏಕಾಂಕ ನಾಟಕ ಪ್ರದರ್ಶನ ಗೊಂಡಿತು. ಸಂಘದ ಪ್ರಧಾನ ಕಾರ್ಯದರ್ಶಿ ಬಾಬಾಪ್ರಸಾದ ಅರಸ ಕುತ್ಯಾರು ಇವರು ನಿರೂಪಿಸಿ ಕೋಶಾಧಿಕಾರಿ ಸಂದೇಶ್ ಆರ್. ಶೆಟ್ಟಿ ಮೂಡುಬೆಳ್ಳೆ ಅವರು ವಂದಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ