Advertisement
ಅವರು ಫೆ. 18ರಂದು ಸಂಪೂರ್ಣ ಶಿಲಾ ಮಯಗೊಂಡ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನಿಂದಲೂ ರಾಜಮಹಾರಾಜರು ಸುಂದರ ಶಿಲಾಮಯ ದೇಗುಲ ಕಟ್ಟಿ ಭಕ್ತಿಯಿಂದ ಭಗವಂತ ನನ್ನು ಆರಾಧಿಸಿದ್ದಾರೆ. ಬ್ರಿಟಿಷರು ಭಾರತಕ್ಕೆ ಬಂದ ಬಳಿಕ ಜನಜೀವನ ಅಸ್ತವ್ಯಸ್ತವಾಗಿದ್ದು, ಆರ್ಥಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸವಾಯಿತು. ಜತೆಗೆ ನಮ್ಮ ಜೀವನ ಶೈಲಿ ಹಾಗೂ ಧಾರ್ಮಿಕ ಧೋರಣೆ ಬದಲಾಯಿತು ಎಂದು ಅವರು ಹೇಳಿದರು.
ಮಣಿಪಾಲ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಮುಂಬಯಿ ಉದ್ಯಮಿ ಉಳೂ¤ರು ಮೋಹನದಾಸ ಶೆಟ್ಟಿ ಕಟ್ಟೆಮನೆ, ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮುಂಬಯಿ ಘಟಕದ ಅಧ್ಯಕ್ಷ ಸುರೇಶ್ ಎ. ಶೆಟ್ಟಿ, ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಂದ್ರ ಹೆಗ್ಡೆ ಹಲೂ¤ರು ಮೇಲ್ಮನೆ ಉಪಸ್ಥಿತರಿದ್ದರು. ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುಂಬಯಿ ಉದ್ಯಮಿ ಉಳೂ¤ರು ಮೋಹನದಾಸ ಶೆಟ್ಟಿ ಕಟ್ಟೆಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್ ಶೆಟ್ಟಿ ಉಳೂ¤ರು, ಮಹೇಶ್ ವಕ್ವಾಡಿ ನಿರೂಪಿಸಿ, ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೊìàದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಯು. ಭೋಜರಾಜ ಶೆಟ್ಟಿ ಉಳೂ¤ರು ವಂದಿಸಿದರು.
Related Articles
ಡಾ| ಡಿ. ವೀರೇಂದ್ರ ಹೆಗ್ಗಡೆ ಉಳೂ¤ರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇಗುಲದ ಮಹಾದ್ವಾರದಿಂದ ನೂರಾರು ಮಂದಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಪೂರ್ಣ ಕುಂಭ ಸ್ವಾಗತದೊಂದಿಗೆ ಭರಮಾಡಿಕೊಂಡರು. ಈ ಸಂದರ್ಭ ದೇಗುಲದ ವತಿಯಿಂದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುಂಬಯಿ ಉದ್ಯಮಿ ಉಳೂ¤ರು ಮೋಹನದಾಸ ಶೆಟ್ಟಿ ಕಟ್ಟೆಮನೆ ಅವರು ಸಮ್ಮಾನಿಸಿದರು.
Advertisement