ಮಂಗಳೂರು: ದೇಶದ ಭದ್ರತಾ ವಿಚಾರ ಸೋರಿಕೆ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ KPCC ವಕ್ತಾರ ಪ್ರಕಾಶ ರಾಠೋಡ್ , ದೇಶದ ರಕ್ಷಣೆ ಉದ್ದೇಶದಿಂದ ಭದ್ರತಾ ವಿಷಯ ಗೌಪ್ಯವಾಗಿರಬೇಕು. ಹೀನ ಕೃತ್ಯದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಭಾಗಿಯಾಗಿದ್ದಾರೆಂದು ಆರೋಪಿಸಿದರು.
ದೇಶದ ರಕ್ಷಣೆ, ದೇಶದ ಭದ್ರತೆ ಕಾಪಾಡುವುದು ರಕ್ಷಣಾ ಸಚಿವರ ಕರ್ತವ್ಯ. ಐದು ಜನರ ಕ್ಯಾಬಿನೆಟ್ ಕಮೀಟಿಯಲ್ಲಿ ದೇಶದ ಭದ್ರತೆ ವಿಚಾರ ಗೌಪ್ಯವಾಗಿರಬೇಕು. ಆದರೆ ಈ ವಿಚಾರ ಸೋರಿಕೆ ಆಗಿರುವುದು ನಿಜಕ್ಕೂ ಖಂಡನೀಯ ಎಂದರು.
ಇದನ್ನೂ ಓದಿ: ನೋಯ್ಡಾದಲ್ಲಿ ಜನವರಿ 31ರವರೆಗೂ “ಲಾಕ್ ಡೌನ್”’; ಸೆಕ್ಷನ್ 144 ಜಾರಿಗೊಳಿಸಿದ ಪೊಲೀಸರು
ಈ ಹೀನ ಕೃತ್ಯದ ಹೊಣೆಯನ್ನು ನೇರವಾಗಿ ಪ್ರಧಾನ ಮಂತ್ರಿ ಹೋರಬೇಕು. ವಾಟ್ಸಪ್ ಚಾಟ್ ನೋಡಿದರೆ ಇದು ಒಂದು ದೇಶದೋಹ್ರದ ಕೃತ್ಯವೆಂದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಪುಲ್ವಾಮ ದಾಳಿಯ ಕೃತ್ಯ ಮೊದಲೇ ನಿರ್ಧಾರವಾಗಿತ್ತಾ ? ರಾಜಕೀಯ ದುರದ್ದೇಶದಿಂದ ಈ ದಾಳಿ ನಡೆಸಿದ್ದಾರ ? ಅರ್ನಬ್ ಗೋಸ್ವಾಮಿಯ ವಾಹಿನಿ TRP ಗಾಗಿ ಈ ಕೃತ್ಯ ನಡೆಸಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ, ಅಕ್ರಮವಾಗಿದ್ದರೆ ಅರ್ಜಿ ಕೊಟ್ಟು ಸಕ್ರಮ ಮಾಡಿಸಿ: BSY