Advertisement

ಸೌಂದರ್ಯದ ಹಿಂದಿನ ಸೀಕ್ರೆಟ್ಟು

07:28 PM Nov 05, 2019 | Lakshmi GovindaRaju |

ಹೊಳಪಿನ, ನುಣುಪಿನ ಚರ್ಮವನ್ನು, ಸೊಂಪಾದ ಕೂದಲನ್ನು ಯಾವ ಹುಡುಗಿ ಬಯಸುವುದಿಲ್ಲ ? ಮುಖದಲ್ಲಿ ಒಂದೂ ಕಲೆ ಇರಬಾರದು. ಮೊಡವೆ ಏಳಬಾರದು. ಚರ್ಮ ಸುಕ್ಕುಗಟ್ಟ ಬಾರದು. ಕೂದಲು ಉದುರ ಬಾರದು ಅಂತ, ದುಬಾರಿ ಕ್ರೀಂ, ಫೇಸ್‌ವಾಶ್‌, ಫೇಸ್‌ಪ್ಯಾಕ್‌, ಶ್ಯಾಂಪೂ, ಕಂಡಿಷನರ್‌ ಅಂತೆಲ್ಲಾ ಖರ್ಚು ಮಾಡಿದರೂ, ತ್ವಚೆಗೆ ಕಾಂತಿ ಸಿಗುವುದೇ ಇಲ್ಲ. ಯಾಕೆ ಗೊತ್ತಾ? ಚರ್ಮದ ಮೇಲಿನ ಲೇಪನಗಳಿ ಗಿಂತ, ಸೇವಿಸುವ ಆಹಾರವೇ ತ್ವಚೆ ಮತ್ತು ಕೂದಲಿನ ಮೇಲೆ ಹೆಚ್ಚು ಪರಿಣಾಮ ಬೀರುವುದು. ಆರೋಗ್ಯವಂತ ಚರ್ಮ ಹಾಗೂ ಕೂದಲಿಗಾಗಿ ಯಾವ ಆಹಾರ ಸೇವಿಸಬೇಕು, ಯಾವುದನ್ನು ತ್ಯಜಿಸಬೇಕು ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ…

Advertisement

ತಿನ್ನಲೇಬೇಕು…
ಬಾದಾಮಿ: ಇ ವಿಟಮಿನ್‌ ಅನ್ನು ಹೇರಳವಾಗಿ ಹೊಂದಿರುವ ಬಾದಾಮಿ, ಚರ್ಮದ ಆರೋಗ್ಯ ಕಾಪಾಡುತ್ತದೆ. 5-10 ಬಾದಾಮಿಯನ್ನು ರಾತ್ರಿ ನೆನೆಸಿಟ್ಟು, ಬೆಳಗ್ಗಿನ ಉಪಾಹಾರಕ್ಕೂ ಮುಂಚೆ ಸೇವಿಸುತ್ತಿದ್ದರೆ ಚರ್ಮದ ಕಾಂತಿ ಹೆಚ್ಚುವುದಲ್ಲದೆ, ಕೂದಲು ಸೊಂಪಾಗಿ ಬೆಳೆಯುತ್ತದೆ.

ಟೊಮೇಟೊ: ಲೈಕೋಪಿನ್‌ ಎಂಬ ಆ್ಯಂಟಿ ಆಕ್ಸಿಡೆಂಟ್‌ನ್ನು ಹೊಂದಿರುವ ಟೊಮೇಟೊ ಸೇವನೆಯಿಂದ, ಹಾನಿಗೊಳಗಾದ ಚರ್ಮಕೋಶಗಳಿಗೆ ಮರು ಜೀವ ಸಿಗುತ್ತದೆ. ಟೊಮೇಟೊದಲ್ಲಿ ಎ, ಬಿ, ಸಿ ವಿಟಮಿನ್‌ಅಧಿಕವಾಗಿರುವುದರಿಂದ, ಕೂದಲುದುರುವ ಸಮಸ್ಯೆಯನ್ನು ತಡೆಯುತ್ತದೆ.

ಅರಿಶಿಣ: ದಿನನಿತ್ಯದ ಅಡುಗೆಯಲ್ಲಿ ಶುದ್ಧ ಅರಿಶಿಣವನ್ನು ಬಳಸಿದರೆ ರಕ್ತ ಶುದ್ಧಿಯಾಗಿ, ಮೊಡವೆಯಂಥ ಅನೇಕ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.

ಗ್ರೀನ್‌ ಟೀ: ಸೂರ್ಯನ ಕಿರಣದಿಂದ ಹಾನಿಗೊಳಗಾದ ಚರ್ಮವನ್ನು ಸರಿಪಡಿಸುವಲ್ಲಿ ಗ್ರೀನ್‌ ಟೀ ಸಹಕಾರಿ. ಅದರಲ್ಲಿರುವ ಆ್ಯಂಟಿಮೈಕ್ರೊಬಿಯಲ್‌ ಕ್ಯಾಟೆಚಿನ್‌ಗಳು ಮೊಡವೆಗಳನ್ನು ದೂರವಿಡುತ್ತವೆ.

Advertisement

ತಿನ್ನಲೇಬೇಡಿ…
ತಂಪು ಪಾನೀಯ: ಸಂಸ್ಕರಿಸಿದ ಸಕ್ಕರೆ ಯನ್ನು ಹೊಂದಿರುವ ಕಾಬೋìನೇಟೆಡ್‌ ಡ್ರಿಂಕ್ಸ್‌ಗಳ ನಿಯಮಿತ ಸೇವನೆಯಿಂದ ಚರ್ಮ ಸುಕ್ಕಾಗಿ, ವಯಸ್ಸಾದಂತೆ ಕಾಣುತ್ತದೆ.

ಜಂಕ್‌ ಫ‌ುಡ್‌: ಪಿಜ್ಜಾ, ಬರ್ಗರ್‌, ಚಿಪ್ಸ್‌ ನಂಥ ತಿನಿಸುಗಳನ್ನು ತಿನ್ನುವುದು ಚರ್ಮದ ಆರೋಗ್ಯಕ್ಕೆ ಹಾನಿಕಾರ.

ಮಸಾಲ ಪದಾರ್ಥಗಳು: ಮೊಡವೆಯಿದ್ದವರು ಅತೀ ಉಪ್ಪು, ಹುಳಿ, ಖಾರವಿರುವ ಪದಾರ್ಥಗಳಿಂದ ದೂರವಿರ ಬೇಕು. ಮಸಾಲೆ ಸೇವನೆಯಿಂದ ಮೊಡವೆ ಗಳು ಹೆಚ್ಚುವುದಲ್ಲದೆ, ಕಲೆ ಮಾಯವಾಗಲು ಹೆಚ್ಚು ಸಮಯ ಬೇಕಾಗುತ್ತದೆ.

ಸಕ್ಕರೆ: ಸಂಸ್ಕರಿಸಿದ ಸಕ್ಕರೆಯನ್ನು ಅತಿಯಾಗಿ ಸೇವಿಸಿದರೆ, ಚರ್ಮಕ್ಕೆ ಬೇಗ ವಯಸ್ಸಾಗುತ್ತದೆ.ಹಾಗಾಗಿ, ಸಕ್ಕರೆಗಿಂತ ಬೆಲ್ಲದ ಸೇವನೆ ಉತ್ತಮ.

ಕೆಫೀನ್‌: ದಿನಕ್ಕೆ 1-2 ಲೋಟಕ್ಕಿಂತ ಹೆಚ್ಚು ಕಾಫಿ ಕುಡಿದರೆ, ಅದರಲ್ಲಿನ ಕೆಫೀನ್‌ ಅಂಶವು ಚರ್ಮ, ಕೂದಲಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next