Advertisement
ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ವಿಜ್ಞಾನ ಪ್ರಯೋಗಾಲಗಳ ವೈಜ್ಞಾನಿಕ ಅಧಿಕಾರಿ ನೇಮಕಾತಿಗೆ ಸಂಬಂಧಿಸಿ ಟಾಕ್ಸಿಕಾಲಜಿ ವೈಜ್ಞಾನಿಕ ಅ ಧಿಕಾರಿ ಸ್ಥಾನಕ್ಕೆ ನಡೆದ ವಿಷಯಶಾಸ್ತ್ರ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದ ಕಳೆದ ಡಿ.4ರಂದು ವಿಧಿ ವಿಜ್ಞಾನ ಪ್ರಯೋಗಾಲಯ ವಿಭಾಗದಲ್ಲಿ 84 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಮೈಲಿಗಲ್ಲು ದಾಖಲಿಸಿದ್ದಾರೆ. ಸೈಂಟಿಫಿಕ್ ಆಫೀಸರ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Related Articles
Advertisement
ನಾಗನಗೌಡ ಮೊದಲಿನಿಂದಲೂ ಶ್ಯಾಣ್ಯಾ ಹುಡುಗ.ಅವರ ಅವ್ವ ಕಷ್ಟಪಟ್ಟು ಓದಿಸ್ಯಾಳ. ಸಣ್ಣ ಹುಡುಗ ಇದ್ದಾಗ ಅವರ ಅಪ್ಪ ತೀರಿಕೊಂಡರು. ಅವರ ಅವ್ವ ಕೂಲಿ ಮಾಡಿ ಓದಿಸಿ ಮಗ ನೌಕರಿ ಪಡೆಯುವ ಹಾಗ ಮಾಡಿದಳು. ನಮ್ಮ ಹುಡುಗ ಚಲೋ ಹುದ್ದೆ ಪಡೆದದ್ದು ನನಗಷ್ಟ ಅಲ್ಲ ಇಡೀ ಊರಿಗೇ ಖುಷಿ ಆಗೈತಿ ನೋಡ್ರೀ ಎನ್ನುತ್ತಾರೆ ಮುಶಿಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಶಂಕ್ರಪ್ಪ ನಾಯ್ಕರ. ನನ್ನ ತಾಯಿ ಬಹಳ ಕಷ್ಟ ಪಟ್ಟು ನನಗ ಓದಿಸಿದ್ದಕ್ಕ ಇವತ್ತು ಈ ಹುದ್ದೆಗೆ ಆಯ್ಕೆಯಾಗಿದ್ದೇನೆ. ಇಲ್ಲ ಅಂದರ ನಾನೂ ಬೇರೆಯವರ ಹೊಲದಲ್ಲಿ ದುಡಿಬೇಕಾಗಿತ್ತು. ಅವರ ಶ್ರಮ ನನಗ ಸ್ಫೂರ್ತಿ. ಅದರ ಜತೆಗೆ ಕಾಲಕಾಲಕ್ಕೆ ನನಗೆ ಸೂಕ್ತ ಮಾರ್ಗದರ್ಶನ ಮಾಡಿದ ಕ್ಯಾಪ್ಟನ್ ಮಹೇಶ ಕುಮಾರ ಮಾಲಗಿತ್ತಿ( ಕೆಎಎಸ್), ಮತ್ತು ಸ್ನೇಹಿತ ಪಿಎ ಅರವಿಂದ ಅಂಗಡಿ, ಸೈನಿಕರಾದ ಹನುಮಂತಪ್ಪ ತೇವರನ್ನವರ, ನನ್ನ ಕುಟುಂಬ ವರ್ಗ ಮತ್ತು ನನ್ನ ಊರಿನ ಎಲ್ಲ ಜನರು ಈ ಹುದ್ದೆಗೆ ಆಯ್ಕೆಯಾಗಲು ಸಹಕರಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.
ನಾಗನಗೌಡ ಗೌಡರ ನನ್ನ ಊರಿನ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಾಗನಗೌಡ ಗೌಡರ ಟಾಕ್ಸಿಕಾಲಜಿ ವಿಭಾಗದಲ್ಲಿ ಟಾಕ್ಸಿಕಾಲಜಿ ಸೈಂಟಿಫಿಕ್ ಆಫೀಸರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದು ಆಯ್ಕೆಯಾದದ್ದು ಬಹಳ ಸಂತೋಷವಾಗಿದೆ. ಸಂಶೋಧನೆಯಲ್ಲಿ ತೊಡಗಿಕೊಂಡಿರುವ ನಾಗನಗೌಡ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಮುಶಿಗೇರಿ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ. ಅವರ ಆಯ್ಕೆ ಯುವಕರಿಗೆ ಸ್ಫೂರ್ತಿಯಾಗಲಿದೆ.
ಕ್ಯಾಪ್ಟನ್ ಮಹೇಶ ಕುಮಾರ ಮಾಲಗಿತ್ತಿ,
(ಕೆಎಎಸ್), ಸಹಾಯಕ ಆಯುಕ ನನ್ನು ಮಗನಿಗೆ ಸರ್ಕಾರಿ ನೌಕರಿ ಸಿಕ್ಕಿದ್ದು ಬಹಳ ಸಂತೋಷ ಆಗೇತ್ರಿ. ನಾನು ಅವರ ಇವರ ಹೊಲದಾಗ ಕೂಲಿ ನಾಲಿ ಮಾಡಿ ಸಾಲಿ ಕಲಿಸೀನಿ. ಇವತ್ತು ನನ್ನ ಜೀವನ ಸಾರ್ಥಕ ಆಗೇತಿ ನೋಡ್ರಿ. ನನ್ನ ಮಗ ತನ್ನಂಥ ಬಡಬಗ್ಗರ ಮಕ್ಕಳಿಗೆ ಸಹಾಯ ಮಾಡಲಿ. ಅವನ ಕೀರ್ತಿ ಇನ್ನೂ ಹೆಚ್ಚು ಹೆಚ್ಚು ಬೆಳಗಲಿ.
ನೀಲವ್ವ ಗೌಡರ, ನಾಗನಗೌಡ ಅವರ ತಾಯಿ