Advertisement

ಶಾಲಾ ಸಂಸತ್ತು, ಯಕ್ಷಗಾನ ತರಗತಿ ಉದ್ಘಾಟನೆ

01:10 AM Jul 11, 2017 | Team Udayavani |

ಬೆಳ್ಮಣ್‌: ವಿದ್ಯಾರ್ಥಿಯಾದವ ಜೀವನದಲ್ಲಿ ಅನೇಕ ವೈಶಿಷ್ಟé ಹಾಗೂ ಗುಣಗಳನ್ನು ತುಂಬಿಕೊಂಡು ಮುಂದೆ ನಿಷ್ಠಾವಂತ ನಾಯಕನಾಗಿ ಮೂಡಿ ಬರಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದರು.

Advertisement

ಅವರು ಶನಿವಾರ ಬೆಳ್ಮಣ್‌ ಶ್ರೀ ಲಕ್ಷ್ಮೀಜನಾರ್ದನ ಇಂಟರ್‌ ನ್ಯಾಶನಲ್‌ ಸ್ಕೂಲ್‌ನಲ್ಲಿ  2017-18ನೇ ಶೆ„ಕ್ಷಣಿಕ ವರ್ಷದ ಶಾಲಾ ಸಂಸತ್ತು ಹಾಗೂ ಯಕ್ಷಗಾನ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ನಾಯಕತ್ವ ತಾನಾಗಿ ಬರುವುದಿಲ್ಲ ಬದಲಾಗಿ ತೊಡಗಿಸಿಕೊಳ್ಳುವಿಕೆಯಿಂದ ಬರುತ್ತದೆ. ಸಮಾಜದಲ್ಲಿ ವಿಪುಲ ಅವಕಾಶಗಳಿವೆ. ಆಯಾಯ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ,ಶಾಲೆಯ ಸಂಚಾಲಕ ಡಾ| ಪಿ.ಕೆ. ಶೆಟ್ಟಿ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ನಿಷ್ಠಾವಂತ, ಪ್ರಾಮಾಣಿಕ ನಾಯಕರ ಆವಶ್ಯಕತೆ ಇದೆ. ತಾವೆಲ್ಲರೂ ಅಂತಹ ಉತ್ತಮ ನಾಯಕರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುಣಗಳನ್ನು ರೂಢಿಸಿಕೊಂಡರೆ ಮುಂದೆ ಅತ್ಯುತ್ತಮ ನಾಯಕರಾಗುವುದರಲ್ಲಿ ಸಂಶಯವಿಲ್ಲ ಎಂದರು.

ವಿದ್ಯಾರ್ಥಿ ನಾಯಕಿ ಜೊಸ್ವಿಟ, ಉಪನಾಯಕಿ  ಸೃಷ್ಟಿ ಸಹಿತ ವಿವಿಧ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಶಾಲಾ ಪ್ರಾಂಶುಪಾಲ ಶ್ರೀ ಭುಜಂಗ ಪಿ.ಶೆಟ್ಟಿ ಸ್ವಾಗತಿಸಿ ಪ್ರಮಾಣ ವಚನ ಬೋಧಿಸಿದರು. ವಿಶ್ವಸ್ತ ಮಂಡಳಿಯ ಸದಸ್ಯ  ಶಶಿಧರ್‌ ಶೆಟ್ಟಿ, ಶ್ರೀ ಲಕ್ಷಿ$¾àಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ತುಕರಾಮ್‌ ಶೆಟ್ಟಿ, ನಿವೃತ್ತ ಶಿಕ್ಷಕ ಜಯಂತ್‌ರಾವ್‌, ಯಕ್ಷಗಾನ ಗುರುಗಳಾದ ಮಹಾವೀರ ಪಾಂಡಿ ಕಾಂತಾವರ ಉಪಸ್ಥಿತರಿದ್ದರು.

ಮಿಥಾಲಿ ಹೆಗ್ಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಥಮ್‌ ವಂದಿಸಿ ದರು.ಬಳಿಕ ವೈವಿಧ್ಯ ಮನೋರಂಜನ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ಮೂಡಿ ಬಂದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next