Advertisement
ಸಾಮಾನ್ಯವಾಗಿ ಜಯ, ಎಂ4 ಇತ್ಯಾದಿ ಹೆಸರುಗಳನ್ನು ಮಾತ್ರ ಕೇಳಿದ ನಮಗೆ ರಾಜಮುಡಿ ಬಿಳಿ, ರಾಜಮುಡಿ ಕೆಂಪು, ಕಜೆ ಜಯ, ಬಿಳಿಯ ಜಯ, ಡಾಂಬಾರ್‌ಸರೈ (ಕಪ್ಪಕ್ಕಿ), ಮುಕ್ಕಣ್ಣಿ (ಸಣ್ಣಕ್ಕಿ), ಮಂಜುಗುಣಿ (ಸಣ್ಣಕ್ಕಿ), ರಾಜಾಗ್ಯಾಮೆ (ಸಣ್ಣಕ್ಕಿ) ಹೀಗೆ ಹೆಸರುಗಳನ್ನು ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲಿ ಕೆಲವು ಹುಲ್ಲಿನ ಬಣ್ಣವೂ ಭಿನ್ನ. ಕೆಲವು ಹುಲ್ಲು ಕೆಂಪು ಇವೆ. ಈ ಪ್ರತಿಯೊಂದು ಕದಿರಿಗೂ ಫಲಕ ಹಾಕಿರುವುದರಿಂದ ಓದಲು ಸಾಧ್ಯ.
Related Articles
ಹಿಂದೆ ಎರಡು ಮೂರು ವರ್ಷಗಳಿಗೊಮ್ಮೆ ಗದ್ದೆಯನ್ನು ಹಾಗೆಯೇ ಪಡಿಲು ಬಿಡುವ ಕ್ರಮವಿತ್ತು. ಬೇರೆ ಗದ್ದೆಗಳಿಗೆ ಹಸಿರೆಲೆ ಗೊಬ್ಬರ ಹಾಕುವಾಗ ಪಡಿಲು ಬಿಟ್ಟ ಗದ್ದೆಗೂ ಹಾಕುತ್ತಿದ್ದರು. ಇದು ಆ ವರ್ಷ ಗದ್ದೆಯ ಸಾರವನ್ನು ಇಮ್ಮಡಿಗೊಳಿಸುತ್ತದೆ. ಇಂತಹ ಕ್ರಮ ಒಂದೊಂದು ಊರಿನಲ್ಲಿ ಒಂದೊಂದು ರೀತಿ ಇರಬಹುದು. ಈ ವರ್ಷ ವಿಜಯದಶಮಿಯಂದು ಕದಿರು ಕಟ್ಟುವ ಹಬ್ಬಕ್ಕೆ ನಮ್ಮ ಪ್ರಾಚೀನ ದೇಸೀ ತಳಿಗಳನ್ನು ಜನರಿಗೆ ಪರಿಚಯಿಸೋಣವೆಂದು ತರಿಸಿದ್ದೇವೆ. – ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ
Advertisement
ಗದ್ದೆಯಾದರೂ ಸಿಕ್ಕೀತು, ತಳಿಗಳೇ ಕಷ್ಟ!ಮೊದಲ ಎರಡು ಮೂರು ವರ್ಷ ನಷ್ಟವಾಯಿತು. ಏಕೆಂದರೆ ಆಗ ಅನುಭವವಿರಲಿಲ್ಲ. ಅನಂತರ ನಮಗೂ ಗೊತ್ತಾಯಿತು. ಈಗ ನಷ್ಟವಾಗುತ್ತಿಲ್ಲ. ನಮಗೆ ಗದ್ದೆಯಾದರೂ ಸಿಕ್ಕೀತು. ಹಿಂದಿನ ತಳಿಗಳೇ ಸಿಗುವುದು ಕಷ್ಟ. ಜನರಿಗೂ ಒಂದೆರಡು ತಳಿಗಳ ಹೆಸರು ಬಿಟ್ಟರೆ ಬೇರೆ ಹೆಸರೂ ಗೊತ್ತಿಲ್ಲ. ಮುಂದಿನ ವರ್ಷ ಸಾಧ್ಯವಾದರೆ 300-400 ತಳಿಗಳನ್ನು ಬೆಳೆಸಬೇಕೆಂಬ ಆಶಯವಿದೆ. ಒಳ್ಳೆಯ ಗುಣಮಟ್ಟದ ಮತ್ತು ಆರೋಗ್ಯಪೂರ್ಣ ಅಕ್ಕಿಯನ್ನು ಉತ್ಪಾದಿಸುವುದು ನನ್ನ ಮುಖ್ಯ ಗುರಿ. -ಅಬೂಬಕ್ಕರ್, ಕಾರ್ಕಳ ಮುರತಂಗಡಿ ಅಪೂರ್ವ ತಳಿಗಳು
ಅಬೂಬಕ್ಕರ್ ಅವರು ಈ ವರ್ಷ ಒಟ್ಟು 155 ತಳಿಗಳನ್ನು ಬೆಳೆಸಿದ್ದಾರೆ. ಇದರಲ್ಲಿ 70 ತಳಿಗಳನ್ನು ತಂದು ಪ್ರದರ್ಶಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಬಂಗಾಡಿ ದೇವರಾಯರು 170 ಅಪೂರ್ವ ತಳಿಗಳನ್ನು ಬೆಳೆಸಿದ್ದಾರೆ. – ಪುರುಷೋತ್ತಮ ಅಡ್ವೆ,
ಕಲಾವಿದರು ಮತ್ತು ಸಂಘಟಕರು