Advertisement

ಶಿಕ್ಷಕ ವೃತ್ತಿಯಿಂದ ಸಿಗಲಿದೆ ಸಂತೃಪ್ತಿ ಭಾವ; ಸಿಂಧೆ

04:31 PM Jan 23, 2021 | Team Udayavani |

ಬೀದರ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರತೆಯಿಂದ ಕೂಡಿದೆ. ಮಕ್ಕಳಿಗೆ ನೀಡುವ ಶಿಕ್ಷಣದಿಂದ ಅವರು ತಮ್ಮ ಬದುಕಿನಲ್ಲಿ ಅಗಾಧವಾದ ಸಾಧನೆ ಮಾಡುತ್ತಾರೆ. ಶಿಕ್ಷಕ ತನ್ನ ವಿದ್ಯಾರ್ಥಿಗಳು ಸಾಧನೆ ಕಂಡು ಸಂತೃಪ್ತಿ ಪಡುತ್ತಾನೆ. ಒಬ್ಬ ವಿದ್ಯಾರ್ಥಿಯ ಸಾಧನೆಯಲ್ಲಿ ಆತನಿಗೆ ಮಾದರಿ ಅನಿಸಿರುವ ಶಿಕ್ಷಕನ ಪ್ರಭಾವ ಹೆಚ್ಚಿರುತ್ತದೆ ಎಂದು ಬಿಸಿಯೂಟ ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ಇನಾಯತ್‌ ಸಿಂಧೆ ಹೇಳಿದರು.

Advertisement

ತಾಲೂಕಿನ ಕಾಡವಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರು ಡಾ| ಟಿ.ಆರ್‌. ದೊಡ್ಡೆ ಅವರು ಜಿಲ್ಲಾ  ಶಿಕ್ಷಣಾಧಿಕಾರಿಯಾಗಿ ಪದನೋತ್ತಿ ಹೊಂದಿದ ಹಿನ್ನೆಲೆ
ನಡೆದ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ| ಟಿ.ಆರ್‌.ದೊಡ್ಡೆ ಅವರು ತಮ್ಮ ವೃತ್ತಿ ಜೀವನದ ಜವಾಬ್ದಾರಿಯನ್ನು
ಪ್ರಮಾಣಿಕವಾಗಿ ನಿರ್ವಹಿಸಿದ್ದಾರೆ. ಅವರು ವಿವಿಧ ಅ ಧಿಕಾರಿ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಆಡಳಿತ ನೀಡಿದ್ದಾರೆ ಎಂದರು.

ಶಿಕ್ಷಣಾಧಿಕಾರಿ ಡಾ| ಟಿ.ಆರ್‌. ದೊಡ್ಡೆ ಮಾತನಾಡಿ, ಶಿಕ್ಷಕ ವೃತ್ತಿ ನನಗೆ ತುಂಬಾ ಸಂತೋಷ ಮತ್ತು ತೃಪ್ತಿ ತಂದಿದೆ. ಶಾಲೆಯಲ್ಲಿ ಮಕ್ಕಳೊಂದಿಗೆ ಬೆರೆತು ಪಾಠ
ಮಾಡುವ ಸಮಯದಲ್ಲಿ ದೊರೆಯುವ ಆನಂದ, ಅ ಧಿಕಾರಿಯಾಗಿದ್ದಾಗ ಸಿಗುವುದಿಲ್ಲ. ಶಾಲೆಯ ಹಳೆ ವಿದ್ಯಾರ್ಥಿ ಮಲ್ಲಿಕಾರ್ಜುನ ಟಂಕಸಾಲೆ ದೈಹಿಕ ಶಿಕ್ಷಣ
ಶಿಕ್ಷಕನಾಗಿ ರಾಜ್ಯಾದ್ಯಂತ ಉತ್ತಮ ಸೇವೆ ನೀಡುವ ಮೂಲಕ ರಾಜ್ಯಮಟ್ಟದ ಉತ್ತಮ ಶಿಕ್ಷಕರಾಗಿರುವುದ ಹೆಮ್ಮೆಯ ಸಂಗತಿ ಎಂದರು.

ಶಾಲಾ ಆವರಣದಲ್ಲಿ ನೂತನ ಶಟಲ್‌ ಬ್ಯಾಡ್ಮಿಂಟನ್‌ ಅಂಕಣವನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ  ವೆಂಕಟರಾವ ಡೊಂಬಾಳೆ ಉದ್ಘಾಟಿಸಿದರು. ಔರಾದ
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸಿಂಗೆ, ಯನಗುಂದಾ ಪ್ರೌಢಶಾಲೆಯ ಶಿಕ್ಷಕ ಚಂದ್ರಕಾಂತ ನಿರ್ಮಳೆ ಮಾತನಾಡಿದರು. ಶಾಲೆಯ
ಪ್ರಭಾರಿ ಮುಖ್ಯಗುರು ಬಾಬುರಾವ ರಾಯಪಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಜಗನ್ನಾಥ ಮೂಲಗೆ, ಸಂಜೀವಕುಮಾರ ಸೂರ್ಯವಂಶಿ, ದಿಲೀಪರಾವ ಬಿರಾದಾರ, ಅನಿಲ ಕರಂಜೆ, ಶಿವಾಜಿರಾವ ಬೆಂಜರವಾಡೆ, ಶಾಮಸುಂದರ ಖಾನಾಪುರಕರ್‌, ಮಲ್ಲಿಕಾರ್ಜುನ ಟಂಕಸಾಲೆ, ಗೋಪಾಲರಡ್ಡಿ, ಲಕ್ಷ್ಮಣರಾವ ನಿಡಗುಂದೆ, ಮಾಣಿಕರಾವ ಟಂಕಸಾಲೆ, ಅಂಜಲಿ ದೇವದಾಸ, ಅನಿತಾ ತುಮ್ಮಕುಂಟೆ, ನಾಜಿಮಾ, ಸುರ್ವಣಾ ಮೇತ್ರೆ, ಸುನೈನಾ ವಿನಾಯಕ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next