Advertisement

“ಸರ್ದಾರ್‌ ಪಟೇಲ್‌ ಸ್ಟೇಡಿಯಂ’ಗೆ ಇನ್ನು ವಿಶ್ವದ ಬೃಹತ್‌ ಕ್ರಿಕೆಟ್‌ ಅಂಗಳದ ಗೌರವ

09:58 AM Oct 26, 2019 | sudhir |

ಅಹ್ಮದಾಬಾದ್‌: ವಿಶ್ವದ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣವೆಂಬ ಹೆಗ್ಗಳಿಕೆ ಪ್ರಸ್ತುತ “ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌’ನದ್ದಾಗಿದೆ (ಎಂಸಿಜಿ). ಇಲ್ಲಿನ ವೀಕ್ಷಕರ ಸಾಮರ್ಥ್ಯ 1,00,024. ಆದರೆ ಮುಂದಿನ ವರ್ಷದಿಂದ ಈ ಕೀರ್ತಿ ಅಹ್ಮದಾಬಾದ್‌ನ ಮೊಟೆರಾದಲ್ಲಿರುವ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ ಪಾಲಾಗಲಿದೆ.
ಸರ್ದಾರ್‌ ಪಟೇಲ್‌ ಸ್ಟೇಡಿ ಯಂನ ಜೀರ್ಣೋದ್ಧಾರ ಕಾರ್ಯ ಬಹುತೇಕ ಅಂತಿಮ ಹಂತದ ಲ್ಲಿದ್ದು, ಮುಂದಿನ ವರ್ಷಾರಂ ಭದಲ್ಲಿ ಲೋಕಾ ರ್ಪಣೆಗೊಳ್ಳಲಿದೆ.
63 ಎಕರೆ ವ್ಯಾಪ್ತಿ
63 ಎಕರೆ ವ್ಯಾಪ್ತಿಯನ್ನು ಆವರಿಸಿಕೊಂಡಿರುವ ಈ ಸ್ಟೇಡಿಯಂನ ವೀಕ್ಷಕರ ಸಾಮರ್ಥ್ಯ 1,10,000. ಅಂದರೆ ಹಿಂದಿನ ಸ್ಟೇಡಿಯಂನ ಎರಡರಷ್ಟು. ಎಂಸಿಜಿಗಿಂತ 10 ಸಾವಿರದಷ್ಟು ಹೆಚ್ಚು ವೀಕ್ಷಕರು ಇಲ್ಲಿ ಪಂದ್ಯ ವೀಕ್ಷಿಸಬಹುದು.
ಟಿ20 ಪಂದ್ಯದ ಮೂಲಕ ಈ ಅಂಗಳವನ್ನು ಉದ್ಘಾಟಿಸುವುದು ಗುಜರಾತ್‌ ಕ್ರಿಕೆಟ್‌ ಮಂಡಳಿಯ ಯೋಜನೆ. ಇಲ್ಲಿ ಭಾರತ ಮತ್ತು ವಿಶ್ವ ಇಲೆವೆನ್‌ ತಂಡಗಳು ಮುಖಾಮುಖೀಯಾಗುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next