Advertisement

ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದ ಸಂತ

08:48 PM Jan 15, 2022 | Team Udayavani |

ಹಗರಿಬೊಮ್ಮನಹಳ್ಳಿ: ದುರಾಸೆ ಮೆಟ್ಟಿ ನಿಂತಿದ್ದಕ್ಕೆ ವಿವೇಕಾನಂದರು ವಿಶ್ವಮಾನವರಾಗಿದ್ದಾರೆ. ನಡೆ ನುಡಿ ಒಂದಾದಾಗ ಮಾತ್ರ ಸಮಾಜದ ಗೌರವಕ್ಕೆ ಪಾತ್ರರಾಗುತ್ತೇವೆ. ವಿಶ್ವಕ್ಕೆ ಹಿಂದೂತ್ವದ ಮೌಲ್ಯವನ್ನು ಸಾರಿದ, ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದ ಸ್ವಾಮಿ ವಿವೇಕಾನಂದರ ಈ ನಡೆಯಿಂದ ವಿಶ್ವವೇ ಭಾರತ ದೇಶದತ್ತ ನೋಡುವಂತಾಯಿತು ಎಂದು ಮಾನಿಹಳ್ಳಿ ಪುರವರ್ಗ ಮಠದ ಷ.ಬ್ರ. ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಮೂರು ದಿನಗಳ ಕಾಲ ಏರ್ಪಡಿಸಿದ್ದ ವಿವೇಕ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನುಷ್ಯನಲ್ಲಿರುವ ಅಪಾರ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವಿವೇಕಾನಂದರು ದೇಶದ ಯುವಕರ ಆತ್ಮಬಲದ ಕಣಜವಾಗಿದ್ದಾರೆ. ಹಿಂದೂ ಧರ್ಮದ ಜೊತೆಗೆ ಅನ್ಯಧರ್ಮಗಳಿಗೂ ಅಪಾರ ಗೌರವ ನೀಡುತ್ತಿದ್ದ ವೀರಸಂತ ವಿವೇಕಾನಂದರು. ಇಂದಿನ ಯುವಕರು ವಿವೇಕಾನಂದರವರ ತತ್ವಾದರ್ಶಗಳನ್ನು ಅರಿತು ಅಳವಡಿಸಿಕೊಳ್ಳಬೇಕಿದೆ. ರಾಷ್ಟ್ರೋತ್ಥಾನದಲ್ಲಿ ವಿವೇಕ ಸ್ಮರಣೆ ಮೂಲಕ ವಿವೇಕಾನಂದರ ಚಿಂತನೆಗಳನ್ನು ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.

ಇದಕ್ಕೂ ಮುನ್ನಾ ವಿವೇಕಸ್ಮರಣೆಯಲ್ಲಿ ಭಾಗವಹಿಸಿದವರಿಗೆ ಚಾಗಿಪದ ಪಠಣ, ಧ್ಯಾನ ನಡೆಸಲಾಯಿತು. ಮೊದಲ ದಿನ ಹೊಸಪೇಟೆಯ ಗ್ರಂಥಪಾಲಕಿ ಸುಜಾತ ರೇವಣಸಿದ್ದಪ್ಪ, ಎರಡನೇ ದಿನ ಸಂಸ್ಕಾರ ಭಾರತಿಯ ಅಖೀಲ ಭಾರತೀಯ ಸಂಘಟನಾ ಕಾರ್ಯದರ್ಶಿ ದೇಹಲಿಯ ಅಭಿಜಿತ್‌ ಗೋಖಲೆಜೀ ಉಪನ್ಯಾಸ ನೀಡಿದರು. ವಿವೇಕ ಸ್ಮರಣೆಯಲ್ಲಿ 300 ಜನ ಭಾಗವಹಿಸಿದ್ದರು. ಆರ್‌ಎಸ್‌ಎಸ್‌ ಪ್ರಮುಖ ಡಾ| ಎಚ್‌.ಎನ್‌ .ಪಿ.ವಿಠಲ್‌, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಆರ್‌. ಬಸವನಗೌಡ, ವಿವೇಕ ಸ್ಮರಣೆ ಸಂಚಾಲಕರಾದ ಆರ್‌. ಕೊಟ್ರಪ್ಪ, ಪ್ರಮುಖರಾದ ರಮೇಶ್‌ ಬೆಲ್ಲಕೊಂಡ, ಎ.ಎಂ. ದಾನಯ್ಯ, ಸೋಮನಗೌಡ್ರು, ಯೋಗಾನಂದ, ಆನಂದ ಎತ್ತಿನಮನಿ, ಕುಮಾರ್‌, ಅರುಣ ಕುಲಕರ್ಣಿ, ನಟರಾಜ ಬೆಳ್ಳಕ್ಕಿ ಇದ್ದರು

 

Advertisement

Udayavani is now on Telegram. Click here to join our channel and stay updated with the latest news.

Next