Advertisement
ಉಡುಪಿ ಜಿಲ್ಲೆಯ ಮೂವರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಓರ್ವರಿಗೆ ಕೋವಿಡ್- 19 ದೃಢಪಟ್ಟಿದೆ. ಈ ಬೆಳವಣಿಗೆ ಕೋವಿಡ್- 19 ಸೇನಾನಿಗಳ ವಲಯದಲ್ಲಿ ಆತಂಕಕ್ಕೆ ಕಾರಣ ವಾಗಿದೆ. ಜಿಲ್ಲಾಡಳಿತ ಮತ್ತು ಸರಕಾರ ಈ ಕೂಡಲೇ ಕೊರೊನಾ ವಾರಿಯರ್‌ಗಳ ಸುರಕ್ಷೆಗೆ ಮತ್ತಷ್ಟು ಗಮನ ನೀಡಬೇಕಿದೆ.
Related Articles
Advertisement
ಚೆಕ್‌ಪೋಸ್ಟ್ ಮತ್ತು ಟೋಲ್‌ಗೇಟ್‌ಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಯಾರಿಂದಲೋ ಸೋಂಕು ತಗಲಿರಬಹುದು ಅಥವಾ ಬೇರೆಡೆಯಿಂದಲೂ ಬಂದಿರಬಹುದು. ಪೊಲೀಸರು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್‌ಗಳನ್ನು ಬಳಸಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸೋಂಕು ತಗಲಿರುವುದು ಸಾರ್ವಜನಿಕರಲ್ಲೂ ಭೀತಿ ಸೃಷ್ಟಿಸಿದೆ.
ಸಾವಿರಾರು ಪೊಲೀಸರು, ಆಶಾಕಾರ್ಯಕರ್ತೆಯರ ಸಹಿತ ಕೋವಿಡ್- 19 ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಲವರು ಸಮಾಜದ ಜೀವಾಳ. ಇವರಿಗೆ ಬೇಕಾದ ಸ್ಯಾನಿಟೈಸರ್,ಗ್ಲೌಸ್,ಮಾಸ್ಕ್ ಗಳನ್ನು ಪೂರೈಸು ವುದರ ಜತೆಗೆ ಅವರಿಗೆ ಕಾಲ ಕಾಲಕ್ಕೆ ಬೇಕಾದ ಊಟೋಪಚಾರವನ್ನೂ ಒದಗಿಸಬೇಕು. ಅದರೊಂದಿಗೆ ಹೆಚ್ಚಿನ ಸುರಕ್ಷಾ ಕ್ರಮಗಳಿಗೂ ಆದ್ಯತೆ ನೀಡಬೇಕೆಂಬುದು ಜನಾಗ್ರಹ.
ಇದುವರೆಗೆ ಸಾಗಿದ ದೂರಕ್ಕಿಂತ ಸಾಗ ಬೇಕಾದ ದಾರಿ ಹೆಚ್ಚು ಇರುವುದನ್ನು ವರದಿಗಳು ಸಾರುತ್ತಿವೆ. ಇನ್ನಷ್ಟು ಕಠಿನ ದಿನ ಗಳು ಬರುವುದರ ಆತಂಕವೂ ಇದ್ದು, ಈ ಕ್ಷಣದಿಂದಲೇ ಕೋವಿಡ್- 19 ವಾರಿಯರ್ ಸಹಿತ ಸಾರ್ವಜನಿಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸ ಬೇಕಾಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.
10-12 ಪೊಲೀಸರಿಗೆ ಸೋಂಕುಪೊಲೀಸ್ ಇಲಾಖೆ ಮೂಲಗಳ ಪ್ರಕಾರ ಬೆಂಗಳೂರು, ಬಾಗಲಕೋಟೆ, ಕಲಬುರಗಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯದಲ್ಲಿ ಸುಮಾರು 10-12 ಮಂದಿ ಪೊಲೀಸ್ ಅಧಿಕಾರಿ, ಸಿಬಂದಿಗೆ ಸೋಂಕು ತಗುಲಿದ್ದು, ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಕಲಬುರಗಿ, ಬೀದರ್,ಉಡುಪಿ ಸೇರಿ ಕೆಲವೆಡೆ ಶಂಕಿತರು ಮತ್ತು ಸೋಂಕುಪೀಡಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಸುಮಾರು 120ಕ್ಕೂ ಅಧಿಕ ಅಧಿಕಾರಿ, ಸಿಬಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕೆಯಾಗಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ. ಪೊಲೀಸ್ ಸಿಬಂದಿಗೆ ಪ್ರತೀ ದಿನ ಬೆಳಗ್ಗೆ ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆಯೂ ತಿಳಿ ಹೇಳಲಾಗುತ್ತಿದೆ. ಠಾಣೆಗೆ ಬರುವ ಜನರ ಜತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದು, ಠಾಣೆಯ ಸುತ್ತ ತಡೆ ಬೇಲಿ ವ್ಯವಸ್ಥೆಯನ್ನು ಮಾಡಲಾಗಿದೆ.
– ಲಕ್ಷ್ಮೀ ಗಣೇಶ್, ಡಿಸಿಪಿ, ಮಂಗಳೂರು ಎಲ್ಲ ಪೊಲೀಸರಿಗೆ, ಆಶಾ ಕಾರ್ಯಕರ್ತೆಯರಿಗೆ ಎರಡೆರಡು ಮಾಸ್ಕ್ ಗಳನ್ನು ಕೊಟ್ಟಿದ್ದೇವೆ. ಬಳಸಿ ಎಸೆಯುವ ಮಾಸ್ಕ್ ಬೇಡವೆಂದು ಬಟ್ಟೆಯ ಮಾಸ್ಕ್ ಗಳನ್ನು ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಲಾಗಿದೆ. ಕೋವಿಡ್- 19 ವಾರಿಯರ್‌ಗಳಿಗೆ ಬೇಕಾದ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ. ಎಲ್ಲ ಸಿಬಂದಿಗೆ ಟ್ರಿಪಲ್ ಲೇಯರ್ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಪಿಪಿಇ ಕಿಟ್ ಒದಗಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯಾಚರಣೆ, ಶವ ಪತ್ತೆ ಮತ್ತಿತರ ಗಂಭೀರ ಪ್ರಕರಣಗಳಲ್ಲಿ ಪಿಪಿಇ ಕಿಟ್‌ಗಳಲ್ಲಿರುವ ಸಾಧನಗಳನ್ನು ಅಗತ್ಯವಾಗಿ ಬಳಸುವಂತೆ ಸೂಚಿಸಲಾಗಿದೆ.
-ಲಕ್ಷ್ಮೀ ಪ್ರಸಾದ್, ದ.ಕ. ಎಸ್‌ಪಿ