ಚಿಕ್ಕ ಸೇತುವೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಲೆಯೊಳಗೆ ಬಿದ್ದಿದ್ದ ಅಪಘಾತ ವದಂತಿ ಹಿನ್ನೆಲೆಯಲ್ಲಿ
ಪೊಲೀಸರು ನಾಲೆಯಲ್ಲಿ ಕಾರ್ಯಾಚರಣೆ ನಡೆಸಿದ ಘಟನೆ ನಡೆಯಿತು.
Advertisement
ಚಿಕ್ಕದೇವಮ್ಮನ ದೇವಸ್ಥಾನ ಕಪಿಲಾ ನದಿಗೆ ಸಂಪರ್ಕ ಕಲ್ಪಿಸುವ ಗಣೇಶನ ದೇವಸ್ಥಾನದ ರಸ್ತೆ ತಿರುವಿನಲ್ಲಿ ಕಬಿನಿಬಲದಂಡೆ ನಾಲೆಯ ಸೇತುವೆಯ ತಡೆಗೋಡೆಗೆ ರಾತ್ರಿ ವಾಹನ ಡಿಕ್ಕಿ ಹೊಡೆದಿದ್ದು, ಗೋಡೆ ಸಂಪೂರ್ಣ ನಾಲೆಯೊಳಗೆ ಬಿದ್ದು ಮುಳುಗಿ ಹೋಗಿದೆ. ಹೀಗಾಗಿ ವಾಹನವೇ ನಾಲೆಯೊಳಗೆ ಬಿದ್ದಿರಬಹುದೆಂದು ಅನುಮಾನಗೊಂಡ ಸಾರ್ವಜನಿಕರು ವಿಷಯವನ್ನು ಸರಗೂರು ಪಟ್ಟಣದ ಪೊಲೀಸರಿಗೆ ತಿಳಿಸಿದ್ದಾರೆ.
ಬಸವರಾಜು ನೇತೃತ್ವದಲ್ಲಿ ಸುಮಾರು 10 ಗಂಟೆ ಕಾರ್ಯಾಚರಣೆ ನಡೆಸಿದರು. ಅಲ್ಲದೆ ಕಾರ್ಯಾಚರಣೆ ವೇಳೆ
ನಾಲೆಯ ತುಂಬ ನೀರು ಹರಿಯುತ್ತಿದ್ದು, ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ನೀರನ್ನು ಶೂನ್ಯಕ್ಕೆ
ಇಳಿಸಿದರು. ಇದರಿಂದ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಿಂದ
ಪರಾರಿಯಾಗಿರಬಹುದು ಎಂದು ಕಾರ್ಯಾಚರಣೆ ಕೈಬಿಡಲಾಯಿತು. ಕಾರ್ಯಾಚರಣೆಯಲ್ಲಿ ಎಎಸ್‌ಐ ಮಾದಪ್ಪ, ಜವರಪ್ಪ, ರಮೇಶ್‌ರಾವ್ ಹಾಗೂ ಸಿಬ್ಬಂದಿ ಸೇರಿದಂತೆ ನೀರಾವರಿ
ಇಲಾಖೆಯ ಎಇಇ ರಘು, ಜೆಇ ಇತೇಶ್, ಡಾ. ಶರತ್, ಸೇರಿದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭಾಗವಹಿಸಿದ್ದರು