Advertisement

ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆಗೆ ಉತ್ತೇಜನ ಅಗತ್ಯ

10:40 PM Dec 07, 2019 | mahesh |

ಮಂಗಳೂರಿನಲ್ಲಿ ವಿದ್ಯುತ್‌ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪರ್ಯಾಯ ಕ್ರಮ ಅಗತ್ಯ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಆಡಳಿತವೂ ಹಲವಾರು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಏತನ್ಮಧ್ಯೆ ಕರ್ನಾಟಕ ರಾಜ್ಯವು ರೂಫ್ಟಾಪ್‌ ಸೋಲಾರ್‌ ಯೋಜನೆ ಆಳವಡಿಕೆಯಲ್ಲಿ ಉತ್ತಮ ಅವಕಾಶಗಳನ್ನು ಹೊಂದಿರುವ ರಾಜ್ಯವಾಗಿದೆ ಎಂಬ ಇಂಧನ ಸಚಿವಾಲಯ ವರದಿ ನೀಡಿದೆ. ರೂಫ್ಟಾಪ್‌ ಸೋಲಾರ್‌ ಯೋಜನೆ ಅಳವಡಿಕೆಯಲ್ಲಿ ಇದು ಪರ್ಯಾಯ ಕ್ರಮವಾಗಬಲ್ಲದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಹಾಗಾದರೆ ಈ ಯೋಜನೆ ಮತ್ತು ಅವಕಾಶಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ರೂಫ್ಟಾಪ್‌ ಸೋಲಾರ್‌ ಯೋಜನೆ ಅಳವಡಿಕೆಯಲ್ಲಿ ಕರ್ನಾಟಕ ಉತ್ತಮ ಅವಕಾಶಗಳನ್ನು ಹೊಂದಿರುವ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ರಾಜ್ಯ ಎಂಬುದಾಗಿ ಕೇಂದ್ರ ಸರಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ರಾಜ್ಯಗಳಲ್ಲಿ ಸೋಲಾರ್‌ ಅವಕಾಶಗಳ ಸೂಚ್ಯಂಕ “ಸರಳ್‌’ನಲ್ಲಿ ತಿಳಿಸಿದೆ. ಸೋಲಾರ್‌ ವಿದ್ಯುತ್‌ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳಲ್ಲಿ ಪ್ರಮುಖವಾದುದು ಮತ್ತು ವಿದ್ಯುತ್‌ ಕೊರತೆ ಸಮಸ್ಯೆಗೆ ಪರ್ಯಾಯ ಕ್ರಮಗಳಲ್ಲಿ ಮಹತ್ತರವಾದುದು. ಸ್ವತ್ಛ ಇಂಧನದ ಜತೆಗೆ ಗ್ರಾಹಕರ ಮಾಸಿಕ ವಿದ್ಯುತ್‌ ಬಿಲ್‌ ವೆಚ್ಚದ ಭಾರವೂ ಇಳಿಕೆಯಾಗುತ್ತದೆ. ಕರ್ನಾಟಕ ರಾಜ್ಯವನ್ನು ಪರಿಗಣಿಸಿದರೆ ರೂಫ್‌ಟಾಪ್‌ಸೊàಲಾರ್‌ ವ್ಯವಸ್ಥೆ ಅಳವಡಿಕೆಗೆ ಮಂಗಳೂರು ನಗರವನ್ನು ಆದ್ಯತೆ ನಗರವಾಗಿ ಪರಿಗಣಿಸಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೆಲವು ಸರಕಾರಿ ಕಟ್ಟಡಗಳ ಮೇಲೆ ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆ ಅಳವಡಿಕೆ ಯೋಜನೆ ರೂಪಿಸಲಾಗಿದೆ.

ಸೋಲಾರ್‌ ವಿದ್ಯುತ್‌ ಉತ್ಪಾದನೆಯಲ್ಲಿ ರೂಫ್‌ಟಾಪ್‌ ಸೋಲಾರ್‌ ಒಂದು ಪ್ರಮುಖ ಅಂಗ. ಇದಕ್ಕೆ ಕೇಂದ್ರ, ರಾಜ್ಯ ಸರಕಾರಗಳಿಂದ ಉತ್ತೇಜನವಿದೆ. ಗ್ರಾಹಕರಿಂದ ಮೆಸ್ಕಾಂ ಸೋಲಾರ್‌ ವಿದ್ಯುತ್‌ ಖರೀದಿಸುವ ವ್ಯವಸ್ಥೆಯೂ ಇದೆ. ಆದರೂ ಇದು ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ . ರೂಫ್‌ಟಾಪ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆ ಆದ್ಯತೆಯ ಯೋಜನೆಗಳಲ್ಲಿ ಸೇರ್ಪಡೆಗೊಂಡು ಅನುಷ್ಠಾನವಾದಾಗ ಹೆಚ್ಚು ಯಶಸ್ಸು ಸಾಧ್ಯವಾಗಬಹುದು.

ಮಂಗಳೂರಿಗೆ ದಿನವೊಂದಕ್ಕೆ ಸರಾಸರಿ ಸುಮಾರು 180 ರಿಂದ 200 ಮೆ. ವ್ಯಾಟ್‌ನಷ್ಟು ವಿದ್ಯುತ್‌ ಆವಶ್ಯಕತೆ ಇದೆ. ರೂಫ್‌ಟಾಪ್‌ ಸೋಲಾರ್‌ ವಿದ್ಯುತ್‌ ಘಟಕಗಳು ಒಂದು ಪರ್ಯಾಯ ವಿದ್ಯುತ್‌ ವ್ಯವಸ್ಥೆಯಾಗಿ ಮೂಡಿಬಂದು ವಿದ್ಯುತ್‌ ಅಭಾವಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಮಂಗಳೂರಿನಲ್ಲಿ ಅನುಕೂಲ ವಾತಾವರಣವಿದೆ. ವರ್ಷದಲ್ಲಿ ಸುಮಾರು 200 ದಿನಗಳ ಕಾಲ ತೀಕ್ಷ್ಣ ಬಿಸಿಲು ಇದೆ. ಇದನ್ನು ಸೋಲಾರ್‌ ವಿದ್ಯುತ್‌ಗೆ ಸಮರ್ಥವಾಗಿ ಬಳಸಿಕೊಂಡಾಗ ವಿದ್ಯುತ್‌ನಲ್ಲಿ ಸ್ವಾವಲಂಬನೆ ಮಾತ್ರವಲ್ಲದೆ ಆದಾಯಕ್ಕೂ ಮೂಲವಾಗುತ್ತದೆ. ಪ್ರಸ್ತುತ ಮೆಸ್ಕಾಂನಲ್ಲಿ 650ಕ್ಕಿಂತಲೂ ಅಧಿಕ ರೂಫ್‌ಟಾಪ್‌ ವಿದ್ಯುತ್‌ ಉತ್ಪಾದನೆ ಘಟಕಗಳಿವೆ.

ರಾಷ್ಟ್ರೀಯ ಸೋಲಾರ್‌ ಮಿಶನ್‌ನ ಗುರಿಯಂತೆ ದೇಶದಲ್ಲಿ 2021-22ರ ವೇಳೆಗೆ ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆಯಿಂದ 40,000 ಮೆ.ವಾ. ವಿದ್ಯುತ್‌ ಉತ್ಪಾದನೆ ಗುರಿ ಇರಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಸರಕಾರದ ಸೌರಶಕ್ತಿ ನೀತಿ 2014-21 ರ ಅನ್ವಯ 2021ರ ವೇಳೆ ಗೆ 2400 ಮೆ.ವ್ಯಾ. ರೂಫ್‌ಟಾಫ್‌ ಸೌರ ವಿದ್ಯುತ್‌ ಉತ್ಪಾದನೆಯ ಗುರಿ ಇರಿಸಿಕೊಳ್ಳಲಾಗಿದೆ. ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆಯಲ್ಲಿ ಮೆಸ್ಕಾಂ ವತಿಯಿಂದ 1,000 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರಶಕ್ತಿ ಉತ್ಪಾದನೆಯ ಗುರಿಯನ್ನು ಇರಿಸಿಕೊಳ್ಳಲಾಗಿತ್ತು. ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1,300 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ ಇದ್ದು ಈಗಾಗಲೇ ಕೆಲವು ಸರಕಾರಿ ಕಟ್ಟಡಗಳಲ್ಲಿ ಅಳವಡಿಕೆ ಪ್ರಕ್ರಿಯೆ ಜಾರಿಯಲ್ಲಿವೆ. ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಸಣ್ಣ ರೂಫ್‌ಟಾಪ್‌ ಸೋಲಾರ್‌ ವಿದ್ಯುತ್ಛಕ್ತಿ ಯೋಜನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೂರಕ ಕ್ರಮಗಳಿಗೆ ಮುಂದಾಗಿದೆ.

Advertisement

ಸೋಲಾರ್‌ ನೆಟ್‌ ಮೀಟರಿಂಗ್‌ ಹಾಗೂ ಗ್ರಾಸ್‌ ಮೀಟರಿಂಗ್‌ ಆಧಾರದ ಮೇಲೆ ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ನೆಟ್‌ ಮೀಟರಿಂಗ್‌ ವ್ಯವಸ್ಥೆಯಲ್ಲಿ ಬಳಕೆ ಮಾಡಿ ಉಳಿದ ವಿದ್ಯುತ್‌ನ್ನು ಗ್ರೀಡ್‌ಗೆ ನೀಡಬಹುದಾಗಿದೆ. ಗ್ರಾಸ್‌ ಮೀಟರಿಂಗ್‌ ವ್ಯವಸ್ಥೆಯಲ್ಲಿ ಉತ್ಪಾದನೆ ಮಾಡಿದ ಎಲ್ಲ ವಿದ್ಯುತ್‌ನ್ನು ಗ್ರೀಡ್‌ಗೆ ನೀಡುವುದಾಗಿದೆ. ಸೌರ ಫಲಕಗಳು ಸೂರ್ಯನ ಕಿರಣಗಳನ್ನು ಹೀರಿಕೊಂಡು ಆ ಫಲಕಗಳಲ್ಲಿ ಅಳವಡಿಸಿರುವ ಸೌರ ಸೆಲ್‌ಗ‌ಳ ಮೂಲಕ ವಿದ್ಯುತ್ಛಕ್ತಿಯನ್ನು ಡಿಸಿ (ಡೈರೆಕ್ಟ್ ಕರೆಂಟ್‌)ಯಲ್ಲಿ ಉತ್ಪಾದಿಸುತ್ತದೆ. ಸೌರ ಇಂಧನದ ಉತ್ಪಾದನೆಯ ಪ್ರಮಾಣವನ್ನು ಗುರುತಿಸಲು ಮೀಟರ್‌ ಅಳವಡಿಕೆ ಮಾಡಲಾಗುತ್ತದೆ. ಉತ್ಪಾದಿತ ವಿದ್ಯುತ್‌ ಮನೆಯ ಬಳಕೆಗೆ ಇರಿಸಿಕೊಂಡು, ಉಳಿದ ವಿದ್ಯುತ್‌ನ್ನು ಇನ್‌ವರ್ಟರ್‌ ಮೂಲಕ ವಿದ್ಯುತ್‌ ತಂತಿಯ ಮೂಲಕ ಹರಿಯಬಿಡಲಾಗುತ್ತದೆ. ಸೌರ ಇಂಧನದ ರೂಫ್‌ಟಾಪ್‌ ಪ್ಲಾಂಟ್‌ನ್ನು ಅಳವಡಿಸಲು ಇಚ್ಛಿಸುವವರು ಹತ್ತಿರದ ಮೆಸ್ಕಾಂ ಸಬ್‌ಡಿವಿಶನ್‌ ಕಚೇರಿಗೆ ಭೇಟಿ ನೀಡಬಹುದು. ಸೋಲಾರ್‌ ಮೇಲ್ಛಾವಣಿ ಘಟಕಗಳ ಸ್ಥಾಪನೆಗೆ ವಿದ್ಯುತ್‌ ಸರಬರಾಜು ಕಂಪೆನಿಗಳ ವತಿಯಿಂದ ಯಾವುದೇ ಪ್ರೋತ್ಸಾಹಧನ ನೀಡಲಾಗುವುದಿಲ್ಲ. ಆದರೆ, ಇಚ್ಛೆಯುಳ್ಳ ಫಲಾನುಭವಿಗಳು ಎಂ.ಆನ್‌.ಆರ್‌.ಇ. ವತಿಯಿಂದ ಯೋಜನ ವೆಚ್ಚದ ಶೇ. 25ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ.

ಉತ್ತೇಜಕ ಕ್ರಮಗಳು ಅಗತ್ಯ
ಪರಿಸರ ಸಹ್ಯ , ಪ್ರಕೃತಿದತ್ತ ಸೋಲಾರ್‌ ವಿದ್ಯುತ್‌ ವ್ಯವಸ್ಥೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಹಾಗೂ ಜನರಿಂದ ಹೆಚ್ಚು ಸ್ಪಂದನೆ ಲಭಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಅವಶ್ಯವಿವೆ. ಸೋಲಾರ್‌ ವಿದ್ಯುತ್‌ ಖರೀದಿ ದರವನ್ನು ಹೆಚ್ಚಿಸಬೇಕಾಗಿದೆ. ರೂಫ್‌ಟಾಪ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆ ಬಗ್ಗೆ ಮಂಗಳೂರಿನಲ್ಲಿ ಜಾಗೃತಿ ಅಭಿಯಾನ ನಡೆದಿದ್ದರೂ ಇದು ವ್ಯಾಪಕ ಪ್ರಚಾರವನ್ನು ಪಡೆದುಕೊಳ್ಳಲಿಲ್ಲ. ಹೊಸದಾಗಿ ನಿರ್ಮಾಣವಾಗುವ ಎಲ್ಲ ವಸತಿ ಸಂಕೀರ್ಣಗಳು, ಸಭಾಭವನಗಳು ರೂಫ್‌ಟಾಪ್‌ ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಅಳವಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಕೆಲವು ಪ್ರೋತ್ಸಾಹದಾಯಕ ಕ್ರಮಗಳನ್ನು ಕೂಡ ರೂಪಿಸುವುದು ಯಶಸ್ಸಿಗೆ ಪೂರಕವಾಗಬಹುದು.

  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next