ಗುಡಿಬಂಡೆ: ತಾಲೂಕಿನ ಉಲ್ಲೋಡು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ಚಾವಣಿ ಕುಸಿದಿದ್ದು, ಆಶಾ ಕಾರ್ಯಕರ್ತೆಯೋರ್ವರು ಗಾಯಗೊಂಡಿದ್ದು, ಅದೃಷ್ಟಾವಶಾತ್ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಇದನ್ನೂ ಓದಿ:ಮರ ಬಿದ್ದು ಯುವಕ ಸಾವು: ಕುಟುಂಬಸ್ಥರಿಗೆ ಐದು ಲಕ್ಷ ಪರಿಹಾರ; ಡಿಸಿ ನಿತೇಶ್ ಪಾಟೀಲ
ತಾಲೂಕಿನ ಉಲ್ಲೋಡು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಮಕ್ಕಳಿಗೆ ಚುಚ್ಚುಮದ್ದು ಹಾಕುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕಟ್ಟಡದ ಮೇಲ್ಚಾವಣಿ ಕುಸಿದಿದೆ. ಅದರ ಪರಿಣಾಮವಾಗಿ ಅಲ್ಲಿದ್ದ ಆಶಾಕಾರ್ಯಕರ್ತೆಸುಮ ಎಂಬುವರ ತಲೆಯ ಮೇಲೆ ಮೇಲ್ಚಾವಣಿಗೆ ಹಾಕಿದ್ದ ಸಿಮೆಂಟ್ ಬಿದ್ದು ಗಾಯವಾಗಿದ್ದು, ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗಿದೆ. ಆಶಾ ಕಾರ್ಯಕರ್ತೆ ಸದ್ಯ ಆರೋಗ್ಯವಾಗಿದ್ದು, ಯಾವುದೇ ದುರಂತ ಸಂಭವಿಸಿಲ್ಲ.
ಈ ಉಲ್ಲೋಡು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸುಮಾರು 60 ವರ್ಷಗಳ ಹಳೆಯದಾಗಿದ್ದು ಎಂದು ಸ್ಥಳಿಯರು ತಿಳಿದ್ದಾರೆ, ಎರಡು ವರ್ಷಗಳ ಹಿಂದೆ ಈ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಬಂದು ಚಿಕಿತ್ಸೆ ನೀಡುತ್ತಿದ್ದರು. ಆದರೆ ಎರಡು ವರ್ಷಗಳಿಂದ ಸಿಬ್ಬಂದಿ ಕೊರತೆ ಎಂಬ ನೆಪದಿಂದ ಯಾರು ಈ ಕೇಂದ್ರದಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಉಲ್ಲೋಡು ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಶಾಸಕ ಸುಬ್ಬಾರೆಡ್ಡಿ ತಾಲೂಕು ಆರೋಗ್ಯಾಧಿಕಾರಿಗಳ ಮೇಲೆ ಗರಂ ಆದ ಬಳಿಕ ಈ ಕೇಂದ್ರದಲ್ಲಿ ಸಿಬ್ಬಂದಿ ಕೆಲಸ ಮಾಡಲು ಶುರು ಮಾಡಿದರು.
ಕಳೆದ ಒಂದು ವರ್ಷದ ಹಿಂದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ಥಿಗಾಗಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯಿಂದ ಜಿಲ್ಲಾ ಪಂಚಾಯತಿ ಮೂಲಕ ಮೂರು ಲಕ್ಷ ವೆಚ್ಚ ಮಾಡಲಾಗಿತ್ತು. ಆದರೆ ಆ ಕಾಮಗಾರಿ ಸಹ ಕಳಪೆಯಿಂದ ಕೂಡಿದ ಕಾರಣಕ್ಕೆ ಮೇಲ್ಚಾವಣಿ ಕುಸಿದಿದೆ ಎಂದು ಸ್ಥಳೀಯರ ಆರೋಪವಾಗಿದೆ.
ಇನ್ನೂ ಯಾವುದೇ ಸರ್ಕಾರಿ ಕಟ್ಟಡದಲ್ಲಿ ಕೆಲಸ ಮಾಡಬೇಕಾದರೇ ಆ ಕಟ್ಟಡ ಯೋಗ್ಯವೇ ಇಲ್ಲವೇ ಎಂಬುದನ್ನು ಸಂಬಂಧಪಟ್ಟವರಿಂದ ಸಲಹೆ ಸೂಚನೆಗಳನ್ನು ಪಡೆಯಬೇಕು. ಆದರೆ ಇಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ರೀತಿಯ ಸಲಹೆಗಳನ್ನು ಪಡೆಯದೇ ಕೇಂದ್ರದಲ್ಲಿ ಸಿಬ್ಬಂದಿಯನ್ನು ಕೆಲಸಕ್ಕೆ ಬಿಟ್ಟಿದ್ದಾರೆ. ಇಂದು ಸಣ್ಣ ಪ್ರಮಾದ ಎದುರಾಗಿದೆ. ಇದೇ ದೊಡ್ಡ ಅನಾಹುತ ಜರುಗಿದ್ದರೆ ಹೊಣೆ ಯಾರು ಎಂಬ ಪ್ರಶ್ನೆ ಸಹ ಸ್ಥಳೀಯರಲ್ಲಿ ಉದ್ಬವಿಸಿದೆ.