Advertisement

ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ತರ: ನಾಣಯ್ಯ

07:54 PM Dec 15, 2019 | Sriram |

ಮಡಿಕೇರಿ: ರಾಷ್ಟ್ರದಲ್ಲಿ ಶೇ.35 ರಷ್ಟು ಯುವಜನರಿದ್ದು, ಯುವ ಜನರಿಂದ ದೇಶದ ಅಭಿವೃದ್ಧಿ ಸಾಧ್ಯ. ಜೊತೆಗೆ ರಾಷ್ಟ್ರದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಯುವಜನರಿಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಸಂಸದೀಯ ವ್ಯವಹಾರಗಳ, ಪದವಿ ಪೂರ್ವ ಶಿಕ್ಷಣ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್‌ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ವಿದ್ಯಾಭ್ಯಾಸದ ಕಡೆ ಗಮನ ಹಾಗೂ ಭವಿಷ್ಯದ ಬಗ್ಗೆ ಚಿಂತನೆ ಇರಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಅವರದೇ ಆದ ಸ್ವಂತ ಆಲೋಚನಾ ಶಕ್ತಿ ಇದೆ. ಇಂತಹ ಕಾರ್ಯಕ್ರಮದಲ್ಲಿ ತಮ್ಮಲ್ಲಿರುವ ಬುದ್ಧಿವಂತಿಕೆ ತೋರ್ಪಡಿಸಲು ಇದು ಉತ್ತಮ ವೇದಿಕೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಸರ್ವ ತೋಮುಖ ಅಭಿವೃದ್ಧಿ, ಬದಲಾವಣೆಯ ಬಗ್ಗೆ ಚರ್ಚಿಸಬೇಕು ಎಂದು ಎಂ.ಸಿ.ನಾಣಯ್ಯ ಅವರು ಹೇಳಿದರು.

ಯುವ ಸಂಸತ್‌ ಸ್ಪರ್ಧೆ ಶಿಕ್ಷಣ ಇಲಾಖೆಯ ವಿನೂತನ ಕಾರ್ಯಕ್ರಮವಾಗಿದೆ. ಯುವ ಸಂಸತ್‌ ಕಲ್ಪನೆ 1962 ರಲ್ಲಿ ಜಾರಿಗೆ ಬಂದಿದೆ. ಯುವ ಸಂಸತ್‌ ಮೂಲಕ ಶಾಸಕಾಂಗ ರೂಪಿಸುವ ಶಾಸನ. ಜನ ಪ್ರತಿನಿಧಿ ಕೈಗೊಳ್ಳುವ ಕಾರ್ಯಗಳು, ಅದಕ್ಕೆ ಪ್ರತಿಯಾಗಿ ವಿರೋಧ ಪಕ್ಷದವರ ವಿರೋಧ ಎಲ್ಲವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ. ಇಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯುವ ಸಂಸತ್‌ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಜನ ಪ್ರತಿನಿಧಿ ಕೈಗೊಳ್ಳುವ ಕಾರ್ಯಗಳ ಕುರಿತು ಚರ್ಚಿಸಿ ಉತ್ತಮ ಪ್ರಜೆಯಾಗುವಂತೆ ಆಶಿಸಿದರು.

Advertisement

ವಿದ್ಯಾರ್ಥಿಗಳು ಯುವ ಸಂಸತ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೂಲ ಸೌಲಭ್ಯಗಳ ಕೊರತೆಯನ್ನು ಪ್ರಶ್ನಿಸುವಂತಾಗಬೇಕು. ಇದರಿಂದ ಪ್ರಶ್ನೆ ಕೇಳುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವಂತಾಗಬೇಕೆಂದು ಮಾಜಿ ಸಚಿವರು ಹೇಳಿದರು.
ಭಾರತದ ಸಂವಿಧಾನ ಸಂಸದೀಯ ಪ್ರಜಾಪ್ರಭುತ್ವದ ಮಾದರಿಯಲ್ಲಿದೆ. ಭವಿಷ್ಯದ ಪ್ರಜೆಗಳು, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು. ಮಕ್ಕಳಿಗೆ ರಾಜಕೀಯ ಪ್ರಜ್ಞೆ, ಜೊತೆಗೆ ಸಂವಿಧಾನದ ಆಶಯಗಳನ್ನು ತಿಳಿಸುವುದರ ಮೂಲಕ ಯುವ ಜನತೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತೊಡಸಿಕೊಳ್ಳಬೇಕು ಎಂದು ಎಂ.ಸಿ.ನಾಣಯ್ಯ ಅವರು ಸಲಹೆ ಮಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಭವಾನಿ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಚಿಂತನೆ ಮಾಡಲು ಮತ್ತು ಜ್ಞಾನ ಸಂಪಾದನೆಗೆ ಏಕಾಂಗಿ ಹೋರಾಟ ಮಾಡಬೇಕಿದೆ. ಇದರಿಂದ ಒಂದು ಉತ್ತಮ ಸ್ಥಾನಕ್ಕೆ ಏರಲು ಸಾಧ್ಯ. ಬುದ್ಧಿವಂತಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶವನ್ನು ನೀಡಿ ಪ್ರಜಾಪ್ರಭುತ್ವದ ಕುರಿತು ಇರುವ ಆಶಯಗಳನ್ನು ತಿಳಿಸಬೇಕು ಎಂದು ಸಲಹೆ ಮಾಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಚಿದಾನಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನು ಸರಿಸಬೇಕಾದ ನಿಯಮಗಳ ಮಾಹಿತಿ ನೀಡಿದರು.ಮಡಿಕೇರಿ ಪ. ಪೂ. ಕಾಲೇಜು ವಿದ್ಯಾರ್ಥಿ ಬಿ.ಎಲ್‌.ಅಭಿಷೇಕ್‌ (ಪ್ರಥಮ), ಹರಿಪ್ರಸಾದ್‌(ದ್ವಿತೀಯ), ಹಾಗೂ ಮಾದಾಪುರ ಚೆನ್ನಮ್ಮ ಕಾಲೇಜಿನ ವಿದ್ಯಾರ್ಥಿ ಸಿ.ಬಿ.ನಿಸರ್ಗ (ತೃತೀಯ) ಸ್ಥಾನ ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಬೀನಾ (ಪ್ರಥಮ), ಭರತ್‌ ಕುಮಾರ್‌ (ದ್ವಿತೀಯ), ತಾಹೀರಾ(ತೃತೀಯ) ಸ್ಥಾನ ಪಡೆದಿದ್ದಾರೆ. ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್‌, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಕೆಂಚಪ್ಪ, ಪೊ›.ದಯಾನಂದ, ವರಿಷ್ಮ ತಂಡ ಪ್ರಾರ್ಥಿಸಿದರು,ಕಾಲೇಜಿನ ಪ್ರಾಂಶುಪಾಲÃ ವಿಜಯ್‌ ಸ್ವಾಗತಿಸಿದರು ನಂದೀಶ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next