Advertisement

ಸದೃಢ ಸಮಾಜಕ್ಕೆ ಶಿಕ್ಷಕರ ಪಾತ್ರ ಅಪಾರ

11:45 AM Dec 13, 2021 | Team Udayavani |

ಅಮೀನಗಡ: ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗಾಯತ್ರಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

Advertisement

ಪಟ್ಟಣದ ಶಿವಾಚಾರ್ಯ ದೇವಾಂಗ ಸಮಾಜದ ಸಮುದಾಯ ಭವನದಲ್ಲಿ ನಡೆದ ನಿವೃತ್ತ ಉಪಪ್ರಾಚಾರ್ಯ ಎ.ಎಚ್‌.ಬೆಲ್ಲದಅವರ ಸೇವಾ ನಿವೃತ್ತಿಯ ಸಂತೃಪ್ತ ಪಯಣ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಸಮಾಜದಲ್ಲಿ ತಂದೆ-ತಾಯಿಯಂತೆ ಪವಿತ್ರ ಸ್ಥಾನಲಭಿಸುವುದು ಶಿಕ್ಷಕ ವೃತ್ತಿಗೆ ಮಾತ್ರ ಶಿಕ್ಷಕರು ಮಾತ್ರ ತಾಳ್ಮೆ ಸಂಯಮ, ಸಹನೆ, ತ್ಯಾಗ ಮನೋಭಾವ ಹೊಂದಿದ್ದಾರೆ ಎಂದರು.

ಸಮಾಜದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು. ಇಂಥವೃತ್ತಿಯಲ್ಲಿ ಎ.ಎಚ್‌. ಬೆಲ್ಲದ ಸುಮಾರು 31 ವರ್ಷ ಶಿಕ್ಷಕರಾಗಿ, ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಅವರ ಬದುಕು ಸುಖಮಯವಾಗಿರಲಿ. ಅವರ ಮುಂದಿನ ನಿವೃತ್ತಿಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯ ಉಪನ್ಯಾಸಕರಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಉಪಪ್ರಾಚಾರ್ಯ ಎ.ಎಚ್‌.ಬೆಲ್ಲದ, ಇಂದು ನನ್ನ ಶಿಷ್ಯರು ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ. ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದು ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಸೇವೆಯ ದಿನಗಳನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಉಪಪ್ರಾಚಾರ್ಯಎ.ಎಚ್‌.ಬೆಲ್ಲದ ಅವರಿಗೆ ಶಿಷ್ಯರು,ಅಭಿಮಾನಿಗಳು ಹಾಗೂ ಬಂಧು ಬಳಗದವರು ಸನ್ಮಾನಿಸಿದರು

ಗುರುವಿನಿಂದ ಸನ್ಮಾನ: ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ್ದ ಉಪಪ್ರಾಚಾರ್ಯ ಎ.ಎಚ್‌. ಬೆಲ್ಲದ ಅವರು ಸಾಧನೆ ಮಾಡಿದ 27 ಜನ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷ ಸಾಧನೆ ಮಾಡಿದಶಿಕ್ಷಕಿಯರಾದ ಡಾ|ಎಸ್‌.ಸಿ.ರಂಜಣಗಿ, ಕವಿತಾ ಕಂಠಿ, ವರ್ಷಾ ಪಾಟೀಲ, ಶ್ರವಣಕುಮಾರ ಬೆಲ್ಲದ, ಪ್ರಸನ್ನಕುಮಾರ ಬೆಟಗೇರಿ ಅವರನ್ನು ಸನ್ಮಾನಿಸಿದರು. ಗಚ್ಚಿನಮಠದ ಶಂಕರರಾಜೇಂದ್ರ ಶ್ರೀಗಳುಸಾನಿಧ್ಯ ವಹಿಸಿದ್ದರು. ಶಿವಾಚಾರ ದೇವಾಂಗ ಸಮಾಜದ ಅಧ್ಯಕ್ಷ ಅಂದಾನೆಪ್ಪ ಗುಡ್ಡದ,ಸೂಳೇಭಾವಿ ಸರ್ಕಾರಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ ಗಂಜಿಹಾಳ,ಸಹಕಾರಿ ಧುರೀಣ ಕೆ.ಎಸ್‌. ರಾಮದುರ್ಗ, ಸಂಗಪ್ಪ ಪ್ಯಾಟಿಗೌಡರ, ಜೋಶಿ ಭಟ್ಟರು, ನಿವೃತ್ತ ಪ್ರಾಚಾರ್ಯ ಎಸ್‌.ಡಿ.ಪಾಟೀಲ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಬಿ.ಜೀರಗಿ, ವಿಷ್ಣು ಗೌಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next