ಉಡುಪಿ: ಸುಸಂಸ್ಕೃತ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವಲ್ಲಿ ಮತ್ತು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಸ್ಥಿತಪ್ರಜ್ಞನಾಗಿ ಮುನ್ನಡೆಯುವಲ್ಲಿ ಕ್ರೀಡಾ ಮನೋಭಾವ ಮಹತ್ತರ ಪಾತ್ರ ವಹಿಸುತ್ತದೆ ಎಂದು ಮಣಿಪಾಲ ಡಾ| ಟಿಎಂಎ ಪೈ ಪಾಲಿಟೆಕ್ನಿಕ್‌ನ ಶೈಕ್ಷಣಿಕ ಸಂಯೋಜಕ ಟಿ. ರಂಗ ಪೈ ಅಭಿಪ್ರಾಯಪಟ್ಟರು.
ಜಿÇÉಾ ಕಾಲೇಜು ವಿದ್ಯಾರ್ಥಿ ಸಂಘ, ಮಣಿಪಾಲ ಡಾ| ಟಿಎಂಎ ಪೈ ಪಾಲಿಟೆಕ್ನಿಕ್ ವಿದ್ಯಾರ್ಥಿ ಸಂಘಗಳ ಆಶ್ರಯದಲ್ಲಿ ಶನಿವಾರ ಮಣಿಪಾಲದ ಮಣ್ಣಪಳ್ಳ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ಜಿÇÉಾಮಟ್ಟದ ಕಾಲೇಜು ವಿದ್ಯಾರ್ಥಿಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟ ಉದ್ಘಾಟಿಸಿದ ಅವರು ಮಾತನಾಡಿದರು.
ನಿಸ್ವಾರ್ಥವಾಗಿ ಪರರ ಏಳಿಗೆಯನ್ನು ಗೌರವಿಸುವ, ಪ್ರೋತ್ಸಾಹಿಸುವ ಮಾನಸಿಕತೆ ಪ್ರಜ್ಞಾವಂತ ನಾಗರಿಕರನ್ನಾಗಿಸುತ್ತದೆ. ಕ್ರೀಡಾಕೂಟಗಳ ಆಯೋಜನೆಯಿಂದ ವಿದ್ಯಾರ್ಥಿಗಳು ಪರಸ್ಪರ ಸಂಘಟಿತರಾಗಿ ಸಾಮಾಜಿಕ ಚಿಂತನೆಗಳನ್ನು ಜಾಗೃತಿ ನೀಡುವ ಮನೋಭಾವ ಹೊಂದಲು ಸಹಕಾರಿಯಾಗುತ್ತದೆ ಎಂದರು.
ನಗರಸಭೆ ಸದಸ್ಯ ಮಂಜುನಾಥ್ ಮಣಿಪಾಲ ಮಾತನಾಡಿ, ಡಾ| ಟಿಎಂಎ ಪೈ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶೈಕ್ಷಣಿಕ, ಕ್ರೀಡಾ ಸಂಪನ್ಮೂಲಗಳನ್ನು ಯೆಥೇತ್ಛವಾಗಿ ಒದಗಿಸುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯವೆಂದರು.
ನಗರಸಭೆ ಸದಸ್ಯೆ ಕಲ್ಪನಾ ಸುಧಾಮ, ಜೈಭಾರತ್ ನ್ಪೋರ್ಟ್ಸ್ ಚಾರಿಟೆಬಲ್ ಅಸೋಸಿಯೇಶನ್ ಸಂಚಾಲಕ ಜಯಕರ ಪಿ., ಕಾಲೇಜಿನ ಶಿಕ್ಷಕ ಕಿಶನ್, ಪಿಡಬ್ಲೂéಡಿ ಗುತ್ತಿಗೆದಾರ ಅಶ್ವಿತ್ ಶೆಟ್ಟಿ, ಜಿÇÉಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜನ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ಬಂಗೇರ ಉಪಸ್ಥಿತರಿದ್ದರು. ಪ್ರತುಲ್ ನಾಯಕ್ ನಿರೂಪಿಸಿದರು.