Advertisement

ಮಹಿಳಾ ಸಶಕ್ತೀಕರಣದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಪಾತ್ರ ಮಹತ್ವದ್ದು: ಡಾ|ಹೆಗ್ಗಡೆ

08:48 PM Jun 05, 2019 | Sriram |

ಮೂಡುಬಿದಿರೆ: ಗ್ರಾಮಾಭಿವೃದ್ಧಿ ಯೋಜನೆಯು ಇತರೆಲ್ಲ ಧನಾತ್ಮಕ ಅಂಶಗಳೊಂದಿಗೆ ವಿಶೇಷವಾಗಿ ಗೃಹಿಣಿಯರಿಗೆ ಜವಾಬ್ದಾರಿಯನ್ನು ಕಲಿಸಿದೆ. ಮಹಿಳಾ ಸಶಕ್ತೀಕರಣದಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ನ ಕಾರ್ಕಳ ತಾ| ವಿಭಜಿತ ಮೂಡುಬಿದಿರೆ ತಾಲೂಕು ಕಚೇರಿ ಯನ್ನು ಅಲಂಗಾರ್‌ನ ಡಿ.ಜೆ. ಸೆಂಟರ್‌ನಲ್ಲಿ ಉದ್ಘಾಟಿಸಿ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಜನೆಯು ಬೆಳ್ತಂಗಡಿ ತಾಲೂಕಿನಿಂದ ವಿಸ್ತರಣೆಗೊಂಡು ಕಾರ್ಕಳ ತಾಲೂಕನ್ನು ಪ್ರವೇಶಿಸಿದ ಬಳಿಕ ಕಳೆದ 24 ವರ್ಷಗಳಲ್ಲಿ ಅತ್ಯಂತ ಯಶಸ್ವಿ ನಿರ್ವಹಣೆಯನ್ನು ತೋರಿದೆ ಎಂದರು.

ಯೋಜನೆಯೊಂದಿಗೆ ಆರ್ಥಿಕ ವ್ಯವಹಾರ ಮಾಡುವವರಿಗೆ ಎಲ್‌ಐಸಿಯ ಜೀವನ್‌ ಭದ್ರತಾ ಪಾಲಿಸಿ ನೀಡಲಾಗುತ್ತಿದ್ದು, ಸಾಲದ ಮೊತ್ತದ ಶೇ. 2ರಂತೆ ಇದುವರೆಗೆ 65 ಕೋಟಿ ರೂ.ನಷ್ಟು ದೊಡ್ಡ ಮೊತ್ತ ಎಲ್‌ಐಸಿಯಲ್ಲಿ ಜಮಾ ಆಗಿದೆ ಎಂದು ಅವರು ತಿಳಿಸಿದರು.

ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಅವರು ನೂತನ ಕಚೇರಿಯಲ್ಲಿ ಜ್ಯೋತಿ ಬೆಳಗಿಸಿದರು. ಮುಖ್ಯಅತಿಥಿಗಳಾಗಿ ರಾಜ್ಯ ಕೃಷಿ ಬೆಲೆ ಆಯೋಗದ ಸದಸ್ಯ ಶಿರ್ತಾಡಿ ಸಂಪತ್‌ ಸಾಮ್ರಾಜ್ಯ, ಅಲಂಗಾರು ದೇಗುಲದ ಪ್ರಧಾನ ಅರ್ಚಕ ಈಶ್ವರ ಭಟ್‌, ಕೇಂದ್ರೀಯ ಒಕ್ಕೂಟದ ಅಧ್ಯಕ್ಷ ಜಯಕುಮಾರ ಜೈನ್‌, ತಾ| ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಡಿ.ಜೆ. ಸೆಂಟರ್‌ನ ಸೂರಜ್‌ ಜೈನ್‌, ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕ ಗಣೇಶ್‌ ಪಾಲ್ಗೊಂಡಿದ್ದರು.

Advertisement

ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌. ಎಚ್‌. ಮಂಜು ನಾಥ ಸ್ವಾಗತಿಸಿ, ಯೋಜನೆಯಡಿ 4,60,000 ಸ್ವಸಹಾಯ ಸಂಘಗಳಿದ್ದು 40 ಲಕ್ಷ ಮಂದಿ ಸದಸ್ಯರಿದ್ದಾರೆ. ಇವರಲ್ಲಿ 32 ಲಕ್ಷ ಮಹಿಳೆಯರು ಹಾಗೂ 4 ಲಕ್ಷ ಮಂದಿ ಕೃಷಿಕರಿದ್ದು ಇವರೆಲ್ಲರೂ ಈ ಯೋಜನೆಯಿಂದಾಗಿ ತಮ್ಮ ಜೀವನದಲ್ಲಿ ಹೊಸದಿಕ್ಕು, ಪ್ರಗತಿಯನ್ನು ಕಂಡಿದ್ದಾರೆ. ಈಗ, ಮೂಡುಬಿದಿರೆ ತಾಲೂಕು ಕಚೇರಿಯ ವ್ಯಾಪ್ತಿಯಲ್ಲಿರುವ ಹೊಸ್ಮಾರು, ಶಿರ್ತಾಡಿ, ಬೆಳುವಾಯಿ, ಬೆಳ್ಮಣ್ಣು, ಮೂಡುಬಿದಿರೆ, ಪುತ್ತಿಗೆ, ಅಲಂಗಾರು, ಈ ಏಳು ವಲಯಗಳಲ್ಲಿ 2,118 ಸ್ವಸಹಾಯ ಸಂಘಗಳಿದ್ದು 7 ಮಂದಿ ಮೇಲ್ವಿಚಾರಕರು, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ, ಆಂತರಿಕ ಲೆಕ್ಕಪರಿಶೋಧಕ, ಕೃಷಿ ಮೇಲ್ವಿಚಾರಕರು ತಲಾ ಒಬ್ಬರಂತೆ, ನಗದು ಸಹಾಯಕರು 9, ಓರ್ವ ಜ್ಞಾನ ವಿಕಾಸ ಕೇಂದ್ರದ ಉಸ್ತುವಾರಿ ಹಾಗೂ 74 ಮಂದಿ ಸೇವಾಪ್ರತಿನಿಧಿಗಳು ಹಾಗೂ ತಾ. ಕಚೇರಿ ಸಿಬಂದಿಗಳಿದ್ದಾರೆ ಎಂದು ಅವರು ವಿವರಿಸಿದರು.

ಸಮ್ಮಾನ
ಬೆಳಗಾವಿಗೆ ಪದೋನ್ನತಿಯೊಂದಿಗೆ ವರ್ಗಾವಣೆಗೊಂಡಿರುವ ಕಾರ್ಕಳ ತಾ|ಯೋಜನಾಧಿಕಾರಿ ಕೃಷ್ಣ ಅವರನ್ನು ಪುರಸ್ಕರಿಸಲಾಯಿತು.ಮೂಡುಬಿದಿರೆ ತಾ| ಯೋಜನಾ ಧಿಕಾರಿ ನಾರಾಯಣ ಶೆಟ್ಟಿ ವಂದಿಸಿದರು.ತಾ|ಲೆಕ್ಕ ಪರಿಶೋಧಕಿ ಅಮಿತಾ, ವಿವಿಧ ವಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕಿ ಭಾರತಿ ನಿರೂಪಿಸಿದರು.

ಯೋಜನೆಯಿಂದ
ಆಮೂಲಾಗ್ರ ಬದಲಾವಣೆ
ಮುಖ್ಯಅತಿಥಿಗಳಾಗಿ ಪಾಲ್ಗೊಂಡ ಮಾಜಿ ಸಚಿವ ಕೆ. ಅಭಯಚಂದ್ರ ಮಾತನಾಡಿ,ಗ್ರಾಮಾಭಿವೃದ್ಧಿ ಯೋಜನೆಯಿಂದ ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ಯಾಗಿ,ಕೃಷಿಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಾಧ್ಯವಾಗಿದೆ. ಬಡವರ ಪಾಲಿಗೆ ಇದು ಕಲ್ಪವೃಕ್ಷವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next