Advertisement

ಸಮಾನತೆ ಸಮಾಜ ನಿರ್ಮಾಣಕ್ಕೆ ಮಠಗಳ ಪಾತ್ರ ಹಿರಿದು

11:25 AM Feb 05, 2018 | Team Udayavani |

ಮಾದನಹಿಪ್ಪರಗಿ: ಸದೃಢ ಸಮಾಜ ನಿರ್ಮಾಣRಕೆ ಮಠಗಳ ಪಾತ್ರವೂ ತುಂಬಾ ಹಿರಿದಾದು ಎಂದು ಶ್ರೀ ಪರಮಾನಂದ ಸಾಮೀಜಿ ಹೇಳಿದರು.

Advertisement

ಯಳಂಸಗಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪರಮಾನಂದ ಸ್ವಾಮಿಗಳ ಪಟ್ಟಾ ಧಿಕಾರದ 5ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಸತ್ಸಂಗ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಇಂದಿನ ಸಂಕುಚಿತ ಸಮಾಜ ಬದಲಾಯಿಸುವುದು ತೀರಾ ಅಗತ್ಯವಾಗಿದೆ. ಆಚಾರ ವಿಚಾರ ಸಂಸ್ಕಾರ ತುಂಬಿದ ಸರಳ ಮಾತುಗಳಲ್ಲಿ ಜನರ ಮನಸ್ಸನ್ನು ಗೆದ್ದು ಜಾತಿ ಮತ ಪಂಥ ಎನ್ನದೆ ಎಲ್ಲರನ್ನು ಒಂದೆ ವೇದಿಕೆಯಲ್ಲಿ ಕಂಡ ಬಸವಾದಿ ಪ್ರಮಥರು ಮಾನವ ಸಮುದಾಯಕ್ಕೆ ಹೊಸ ಭಾಷೆ ಬರೆದಿದ್ದಾರೆ. ಸಿದ್ದಾರೂಢರು ಹಾಕಿ ಕೊಟ್ಟ ಆದರ್ಶಗಳ ದಾರಿಯಲ್ಲಿ ನಡೆದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಪ್ರವಚನ ನೀಡಿದ ಶ್ರೀ ಅಭಿನವ ಶಿವಪುತ್ರ ಸ್ವಾಮೀಜಿ, ಗುರುಗಳಲ್ಲಿ ಯಾರು ಬೇಧಭಾವ ಎಣಿಸಬಾರದು ಎಂದು ಹೇಳಿದರು.

ಮುಚಳಾಂಬದ ಶ್ರೀ ಪ್ರಣಾವನಂದ ಸ್ವಾಮೀಜಿ, ಮುತ್ಯಾನ ಬಬಲಾದ ಗುರುಪಾದ ಸ್ವಾಮೀಜಿ ಮೈಂದರ್ಗಿ ರೇವಣಸಿದ್ದ ಪಟ್ಟದ್ದೇವರು, ಪ್ರಣವನಾಂದ ಸ್ವಾಮೀಜಿ, ಗಣೇಶಾನಂದ ಸ್ವಾಮೀಜಿ, ಗೋಪಾಲಶಾಸ್ತ್ರಿಗಳು, ಸಿದ್ರಾಮಯ್ಯ ಸ್ವಾಮೀಜಿ, ಅರುಣಕುಮಾರ ಪಾಟೀಲ, ಮಲ್ಲಿನಾಥ ನಿಂಬಾಳ ಇದ್ದರು. ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸರಕಾರಿ ಸೇವೆಗೆ ಸೇರಿದ ಗ್ರಾಮದವರನ್ನು ಹಾಗೂ ಗಣ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಎಸ್‌.
ಎಸ್‌. ಪಾಟೀಲ, ಈರಣ್ಣ ಎಲೆª, ಸಿದ್ರಾಮಯ್ಯಸ್ವಾಮಿ, ಕಾಶಿನಾಥ ಕೊಳ್ಳೆ ಗುರುನಾಥ ಜಲೆ, ಶ್ರೀಮಂತ ಎಲೆ, ಗುರುನಾಥ ಶಿವಪುರೆ, ಶಿವಪುತ್ರ ಜಲೆ, ವೀರಭದ್ರಯ್ಯ ಮಠಪತಿ, ಸೂರ್ಯಕಾಂತ ಎಲೆª ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next