Advertisement

“ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ವದ್ದು’

10:41 PM Apr 08, 2019 | Team Udayavani |

ಕಾಪು : ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ವದ್ದಾಗಿದೆ. ಸರಕಾರದ ಯೋಜನೆಗಳು ಜನರಿಗೆ ತಲುಪುವಲ್ಲಿ ಪತ್ರಕರ್ತರ ಶ್ರಮ ಶ್ಲಾಘನೀಯ. ನಿರ್ಬಿàತ ವರದಿಗಾರಿಕೆಯ ಜೊತೆಗೆ ಮಾನವೀಯ ಮೌಲ್ಯಕ್ಕೂ ವಿಶೇಷ ಒತ್ತು ನೀಡುವ ಮೂಲಕ ಅವರ ಬದುಕು ಬೆಳಗಿಸುವಲ್ಲಿ ಪತ್ರಕರ್ತರ ಸಹಕಾರ ಅತ್ಯಗತ್ಯವಾಗಿ ದೊರಕಬೇಕಿದೆ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ನ ಆಗಮ ವಿದ್ವಾಂಸ ವೇ| ಮೂ| ಕೇಂಜ ಶ್ರೀಧರ ತಂತ್ರಿ ಹೇಳಿದರು.

Advertisement

ಎ. 7ರಂದು ಕಾಪು ಮಯೂರ ಹೊಟೇಲ್‌ನಲ್ಲಿ ಜರಗಿದ ಕಾಪು ಪ್ರಸ್‌ ಕ್ಲಬ್‌ನ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಯಿರಾಧಾ ಗ್ರೂಫ್ಸ್ನ ಆಡಳಿತ ನಿರ್ದೇಶಕ ಕೆ. ಮನೋಹರ್‌ ಶೆಟ್ಟಿ ಮಾತನಾಡಿ, ಪತ್ರಕರ್ತರು ಸಮಾಜವನ್ನು ರಕ್ಷಿಸುವ ಸೆ„ನಿಕರಿದ್ದಂತೆ. ಕಾಪುವಿನ ಮೂಲಭೂತ ಅಗತ್ಯತೆಗಳ ಬಗ್ಗೆ ವಿಶೇಷ ಒತ್ತು ನೀಡಿ ವರದಿಗಾರಿಕೆ ಮಾಡುವ ಪ್ರಯತ್ನ ಪತ್ರಕರ್ತರಿಂದ ನಡೆಯಬೇಕಿದೆ. ಕಾಪು ತಾಲೂಕಿನ ನೀರು, ಡ್ರೈನೇಜ್‌, ತ್ಯಾಜ್ಯ ನಿರ್ವಹಣೆಗೆ ಬೇಕಾದ ಸೌಲಭ್ಯಗಳನ್ನೂ ಕಲ್ಪಿಸುವಲ್ಲಿ ಪತ್ರಕರ್ತರೂ ವಿಶೇಷ ಒತ್ತು ನೀಡುವಂತೆ ಕರೆ ನೀಡಿದರು.

ಉಡುಪಿ ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಷಾ, ಬಿಕ್ಕೋ ಕಂಪೆನಿಯ ಆಡಳಿತ ನಿರ್ದೇಶಕ ಶ್ರೀಧರ ಶೇಣವ, ಬನ್ನಂಜೆ ಟೆ„ಗರ್‌ ಲಯನ್ಸ್‌ ಅಧ್ಯಕ್ಷೆ ವಿದ್ಯಾಲತಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೇಂದೀÅಯು ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರದ ಮೂಲಕ ಮಂಗಳೂರು ವಿ.ವಿ.ಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಫಿಲಾಸಫಿ ಆಫ್‌ ಡಾಕ್ಟರೇಟ್‌ ಪದವಿ ಗಳಿಸಿರುವ ಡಾ| ಸುಪ್ರಭಾ ಹರೀಶ್‌ ಅವರನ್ನು ಸಮ್ಮಾನಿಸಲಾಯಿತು.

ಕಾಪು ಪ್ರಸ್‌ ಕ್ಲಬ್‌ನ ಸ್ಥಾಪಕಾಧ್ಯಕ್ಷರು ಸಂತೋಷ್‌ ನಾಯ್ಕ, ಕ್ರೀಡಾ ಕಾರ್ಯದರ್ಶಿ ಹೇಮನಾಥ ಪಡುಬಿದ್ರಿ ಉಪಸ್ಥಿತರಿದ್ದರು.ಪ್ರಸ್‌ ಕ್ಲಬ್‌ನ ಅಧ್ಯಕ್ಷ ಪ್ರಕಾಶ್‌ ಸುವರ್ಣ ಕಟಪಾಡಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಕರುಣಾಕರ ನಾಯಕ್‌ ವರದಿ ವಾಚಿಸಿದರು. ಜಿಲ್ಲಾ ಸಮಿತಿಯ ಸದಸ್ಯ ಪುಂಡಲೀಕ ಮರಾಠೆ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next