ಮುಂಬಯಿ, ನ. 25: ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಸಂಭ್ರಮ – 2019 ಇದರ ಉದ್ಘಾಟನಾ ಸಮಾರಂಭವು ನ. 24 ರಂದು ವಸಾಯಿ ಪೂರ್ವಗ್ರಾಂಡ್ ರೆಸಿಡೆನ್ಸಿ ಹೊಟೇಲ್ ಉಡುಪಿ ಕೃಷ್ಣ ಮೈದಾನ, ದಿ| ನಾರಾಯಣ ಶೆಟ್ಟಿ ಕೊಡ್ಲಾಡಿ ಪ್ರವೇಶದ್ವಾರ, ದಿ| ಗುರ್ಮೆ ಪದ್ಮಾವತಿ ಶೆಟ್ಟಿ ವೇದಿಕೆಯಲ್ಲಿ ದಿನಪೂರ್ತಿ ಅದ್ದೂರಿಯಾಗಿ ಜರಗಿತು.
ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ
ಉಪಸ್ಥಿತಿಯಲ್ಲಿ ಹೊಟೇಲ್ ಉದ್ಯಮಿ ರಘುರಾಮ ರೈ ದಂಪತಿ, ಬಂಟರವಾಣಿ ಸಂಪಾದಕ ಪ್ರೇಮನಾಥ ಮುಂಡ್ಕೂರು ಮತ್ತು ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜಯಶ್ರೀ ಶೆಟ್ಟಿ, ಪ್ರಭಾ ಶೆಟ್ಟಿ ಮತ್ತು ಸಂಧ್ಯಾ ಶೆಟ್ಟಿ ಪ್ರಾರ್ಥನೆಗೈದರು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಪಕ್ಕಳ ಇವರು ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ, ನಮ್ಮ ಸಮಿತಿಯು ವಿಶಾಲವಾದ ಕ್ಷೇತ್ರವನ್ನು ಹೊಂದಿದೆ. ಅನೇಕ ದಾನಿಗಳು ಇಲ್ಲಿದ್ದಾರೆ. ಹತ್ತು ವರ್ಷಗಳ ಹಿಂದೆ ಐಕಳ ಹರೀಶ್ ಶೆಟ್ಟಿಯವರು ಈ ಸಮಿತಿಯನ್ನು ಉದ್ಘಾಟಿಸಿದರು. ನಮ್ಮ ಸಮಿತಿಯು ಕೇವಲ ಆಡಂಬರಕ್ಕೆ ಮಾತ್ರ ಸೀಮಿತವಾಗಿರದೆ ಶಿಕ್ಷಣಕ್ಕೆ ಹಾಗೂ ಕ್ರೀಡೆಗೂ ಮಹತ್ವವನ್ನು ನೀಡುತ್ತಿದೆ ಎಂದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಬಂಟರವಾಣಿಯ ಸಂಪಾದಕ ಪ್ರೇಮನಾಥಶೆಟ್ಟಿ ಮುಂಡ್ಕೂರು ಅವರು, ನಾನು ಕೆಲವು ಸಮ್ಮಾನವನ್ನು ಸ್ವೀಕರಿಸಿರಬಹುದು. ಆದರೆ ಈಗೀಗ ಇದು ಬೇಡವೆನಿಸುತ್ತದೆ. ಅದಕ್ಕಾಗಿ ನಾನು ಸಮ್ಮಾನಕ್ಕೆ ತಪ್ಪಿಸುತ್ತಿದ್ದೇನೆ. ಕಳೆದ ನಾಲ್ಕು ದಶಕಗಳಿಂದ ಪತ್ರಿಕಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಾನು ದುಡಿಯುತ್ತಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಬಂಟರವಾಣಿಯಲ್ಲಿ ಸಂಪಾದಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸಂಘ ಸಂಸ್ಥೆಗಳ ಮುಖವಾಣಿಗಳು ಆ ಸಂಘದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಪತ್ರಿಕಾ ರಂಗದಲ್ಲಿ ಸತ್ಯನಿಷ್ಠೆಯಿಂದ ಪಾರದರ್ಶಕದಿಂದ ಪತ್ರಿಕಾ ಧರ್ಮದ ನೆಲೆಯಲ್ಲಿ ಸಂಘದ ಸಂವಿಧಾನಿಕ ಚೌಕಟ್ಟಿನ ಒಳಗೆ ದುಡಿಯುತ್ತಿರುವೆನು.
ಸಂಘ ಸಂಸ್ಥೆಗಳ ಮುಖವಾಣಿಯಲ್ಲಿ ಮೊದಲನೇ ಸ್ಥಾನ ಗಳಿಸಿದ ಬಂಟರವಾಣಿ ಇದೀಗ ದೇಶ ವಿದೇಶಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಲು ಅಭಿಮಾನವಾಗುತ್ತಿದೆ. ಇದಕ್ಕೆ ಕಾರಣ ನಮ್ಮ ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಇತರ ಎಲ್ಲಾ ಉಪವಿಭಾಗಗಳು ಹಾಗೂ ಸಂಪಾದಕ ಮಂಡಳಿಯ ಸಹಕಾರವನ್ನು ಎಂದೂ ಮರೆಯಲಾರೆ. ಓರ್ವ ಪತ್ರಕರ್ತನಿಗೆ ಕೊಡುವ ಗೌರವವನ್ನು ನೀವು ನನಗೆ ನೀಡಿದ್ದು ಇದು ಬಂಟರವಾಣಿಗೆ ಮಾತ್ರವಲ್ಲ ಮುಂಬಯಿಯ ಪತ್ರಿಕಾ ರಂಗಕ್ಕೆ ಸಲ್ಲುತ್ತಿರುವ ಗೌರವ ಎಂದು ಸಂತೋಷದಿಂದ ಸ್ವೀಕರಿಸುತ್ತಿದ್ದೇನೆ ಎಂದರು.
ಇನ್ನೋರ್ವ ಸಮ್ಮಾನಿತ ಬೊಯಿಸರ್ ಉದ್ಯಮಿ ರಘುರಾಮ ರೈ ಮಾತನಾಡಿ ಶುಭ ಹಾರೈಸಿದರು. ಬಂಟರ ಸಂಘವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಎಲ್ಲ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು ಗೌರವಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಒಕ್ಕೂಟದ ಉಪಾಧ್ಯಕ್ಷ ರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ
ಕಾರ್ಯಾಧ್ಯಕ್ಷ ಉಳೂ¤ರು ಮೋಹನ್ ದಾಸ್ ಶೆಟ್ಟಿ, ಜವಾಬ್ ಅಧ್ಯಕ್ಷ ಸಿಎ ಐ. ಆರ್. ಶೆಟ್ಟಿ, ಮುಲುಂಡ್ ಬಂಟ್ಸನ ಅಧ್ಯಕ್ಷರಾದ ವಸಂತ ಶೆಟ್ಟಿ ಪಲಿಮಾರ್, ಪಶ್ಚಿಮ ವಲಯದ ಮನ್ವಯಕ ಡಾ| ಪ್ರಭಾಕರ ಶೆಟ್ಟಿ. ಅಶೋಕ ಶೆಟ್ಟಿ ಪೆರ್ಮುದೆ, ಅಶೋಕ್ ಹೆಗ್ಡೆ ಕಿನ್ನಿಗೋಳಿ, ಉದ್ಯಮಿ ರವಿ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ, ಸಂಘದ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆರಂಜನಿ ಸುಧಾಕರ ಹೆಗ್ಡೆ, ಯುವ ವಿಭಾಗದಕಾರ್ಯಧ್ಯಕ್ಷ ಶರತ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪಾಂಡುಎಲ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶಂಕರ ಕೆ ಆಳ್ವ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ವಿಜಯ ಎಂಶೆಟ್ಟಿ, ಜೊತೆ ಕಾರ್ಯದರ್ಶಿ ಜೆ. ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ
ಗುರ್ಮೆ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಜಯ ಎ. ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರಿತ್ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಎ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕರ್ನೂರು ಮೋಹನ ರೈ ಮತ್ತು ವಿಜಯ್ ಶೆಟಿ¤ ಕುತ್ತೆತ್ತೂರು ಕಾರ್ಯಕ್ರಮವನ್ನು ನಿರ್ವಹಿಸಿದರು.
–ಚಿತ್ರ-ವರದಿ: ಈಶ್ವರ್ ಎಂ. ಐಲ್