Advertisement

ಕಲ್ಲಿನ ಕಾಡು ಆಕಾಶದೆತ್ತರಕ್ಕೆ ಮೈಚಾಚಿದೆ

06:00 AM Jun 07, 2018 | |

ಮೆಟ್ರೋಪಾಲಿಟನ್‌ ನಗರವನ್ನು ಕಾಂಕ್ರೀಟ್‌ ಕಾಡು ಎಂದು ಕರೆಯುವುದುಂಟು. ಆದರೆ ಚೀನಾದಲ್ಲಿರುವ ಈ ಕಾಡು, ಕಲ್ಲಿನ ಕಾಡು. ಏಕೆಂದರೆ ಇಲ್ಲಿನ ದೈತ್ಯಗಾತ್ರದ ಕಲ್ಲುಗಳು ಭೂಮಿಯಿಂದ ಆಕಾಶದೆತ್ತರಕ್ಕೆ ಮೈಚಾಚಿಕೊಂಡಿವೆ. ಇವು ಕಲ್ಲಿನಂತೆ ತೋರಿದರೂ ಒಮ್ಮೊಮ್ಮೆ ಮರಗಳೇನೋ ಎಂಬ ಭ್ರಮೆಯನ್ನು ಮೂಡಿಸುವುದುಂಟು

Advertisement

ಸ್ಟೋನ್‌ ಫಾರೆಸ್ಟ್  ಅಥವಾ ಶಿಲಿನ್‌ ಎಂದು ಕರೆಯಲ್ಪಡುವ ಈ ಕಲ್ಲಿನ ಬೆಟ್ಟ ಕಂಡುಬರುವುದು ಶಿಲಿನ್‌ಯಿ ಸ್ವಾಯತ್ತ
ಪ್ರದೇಶದ ಯುನ್ನಾನ್‌ ಪ್ರಾಂತ್ಯದಲ್ಲಿ. ಇದಕ್ಕೆ ಹತ್ತಿರದ ಪ್ರದೇಶವೆಂದರೆ ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೀನಾ ಪ್ರಾಂತ್ಯದ ಇಲ್ಲಿಂದ ಕೇವಲ 90 ಕಿ.ಮೀ (56 ಮೈಲಿ) ಗಳಷ್ಟು ದೂರದಲ್ಲಿದೆ. ಈ ಬೆಟ್ಟವು 500 ಚ.ಕಿ.ಮೀ ನಷ್ಟು ವಿಸ್ತೀರ್ಣವಾಗಿದ್ದು ಸುಣ್ಣದ ಕಲ್ಲಿನಲ್ಲಿ ನಿರ್ಮಿತವಾಗಿದೆ.

ಈ ಅರಣ್ಯದಲ್ಲಿ ಕಲ್ಲುಗಳು ನೆಲದ ಮೇಲಿಂದ ಎತ್ತರಕ್ಕೆ ಚಾಚಿ ನಿಂತಿರುವುದರಿಂದ ಕಲ್ಲುಗಳು ನೆಲದಿಂದ ಉದ್ಭವವಾಗಿವೆ ಎನಿಸುತ್ತದೆ. ಇದರಲ್ಲಿ ಕೆಲವು ಕಲ್ಲುಗಳು ಕೊಳೆತ ಮರಗಳಂತೆ ಕಾಣುತ್ತವೆ, ಹಾಗಾಗಿ ಕೆಲವೊಮ್ಮೆ ಇವು ಕಲ್ಲಿನಿಂದ ಮಾಡಿದ ಕಾಡೇನೋ ಎಂಬಂತೆ ಭಾಸವಾಗುತ್ತದೆ. 2007ರಲ್ಲಿ, ದಕ್ಷಿಣ ಚೀನಾದ ಎರಡು ಭಾಗಗಳಾದ ನೈಗು ಸ್ಟೋನ್‌ ಫಾರೆಮತ್ತು ಸುಗೆಗಿ ಗ್ರಾಮಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನಾಗಿ ಗುರುತಿಸಿದೆ. ಈ ಪ್ರದೇಶದ ಒಟ್ಟು ವಿಸ್ತೀರ್ಣದಲ್ಲಿ 400 ಚ.ಕಿ.ಮೀ ಪ್ರದೇಶವನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದ್ದು ಒಂದೊಂದು ಪ್ರದೇಶವೂ ತನ್ನದೇ ವೈವಿಧ್ಯವನ್ನು ಹೊಂದಿದೆ.

ಸುಣ್ಣದಕಲ್ಲಿನ ಸವಕಳಿಯಿಂದ ಉಂಟಾದ ಈ ರಚನೆಗಳು, 270 ಮಿಲಿಯನ್‌ ವರ್ಷಗಳಿಗಿಂತ ಹೆಚ್ಚು ಹಳೆಯದು
ಎಂದು ನಂಬಲಾಗಿದೆ. ವಿದೇಶಿ ಮತ್ತು ಸ್ಥಳೀಯ ಪ್ರವಾಸಿಗರಿಗೆ ಪ್ರವಾಸಿ ಆಕರ್ಷಣೆ ಯಾಗಿರುವ ಈ ಪ್ರದೇಶಕ್ಕೆ ಬರಲು ಶಿಲ್ಲಿಂಗ್‌ ನಿಂದ ಬಸ್‌ಗಳು ದೊರೆಯುತ್ತವೆ.

– ವೆಂಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next