Advertisement

ಶೃಂಗೇರಿ ಪಟ್ಟಣದ ರಸ್ತೆ ಅಗಲೀಕರಣ ಅಗತ್ಯ

11:19 AM Feb 05, 2019 | |

ಶೃಂಗೇರಿ: ಶ್ರೀ ಶಾರದಾ ಪೀಠಕ್ಕೆ ಆಗಮಿಸುವ ಲಕ್ಷಾಂತರ ಭಕ್ತರು ಹಾಗೂ ಸ್ಥಳೀಯರ ಅನುಕೂಲಕ್ಕಾಗಿ ರಸ್ತೆ ಅಗಲಿಕರಣ ಅಗತ್ಯವಾಗಿದೆ ಎಂದು ಶಾಸಕ ಹಾಗೂ ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸ್ತೆ ಅಭಿವೃದ್ಧಿಯಿಂದ ವ್ಯಾಪಾರ, ವಹಿವಾಟಿಗೂ ಅನುಕೂಲ ವಾಗಲಿದೆ. ಈ ಬಗ್ಗೆ ಸ್ಥಳೀಯರ ಸಭೆ ಕರೆದು ಸಲಹೆ, ಸಹಕಾರ ಪಡೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ನಿವೇಶನ ರಹಿತರಿಂದ 276 ಅರ್ಜಿ ಬಂದಿದೆ ಎಂದು ಮುಖ್ಯಾಧಿಕಾರಿ ರವಿಕುಮಾರ್‌ ಮಾಹಿತಿ ನೀಡಿದರು. ಪಟ್ಟಣದಲ್ಲಿ ನಿವೇಶನದ ಸಮಸ್ಯೆ ಇದ್ದು, ವೈಕುಂಠಪುರದಲ್ಲಿ 13 ಎಕರೆ ಜಾಗ ಗುರುತಿಸಿದ್ದು, ಇದರ ಸರ್ವೇ ಕಾರ್ಯ ಆಗಬೇಕಿದೆ ಎಂದರು.

ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾಗಿರುವ ನೂತನ ಪ್ರವಾಸಿ ಮಂದಿರ ಕಟ್ಟಡದ ಬಗ್ಗೆ ಶಾಸಕರು ಅತೃಪ್ತಿ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಗೆ ರಾಜ್ಯದಲ್ಲಿ ಹೆಚ್ಚು ಅನುದಾನ ಪಡೆದಿರುವ ತಾಲೂಕಿನಲ್ಲಿ ಶೃಂಗೇರಿ ಒಂದಾಗಿದ್ದು, ಗುಣಮಟ್ಟದ ಕಾಮಗಾರಿಯನ್ನು ತ್ವರಿತವಾಗಿ ಮಾಡುವಂತೆ ಶಾಸಕರು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

Advertisement

ಮೀನುಗಾರಿಕೆ ಇಲಾಖೆಯಲ್ಲಿ 2 ಲಕ್ಷ ಮೀನು ಮರಿ ಸಂಗ್ರಹವಿದ್ದು,ಆಸಕ್ತ ರೈತರಿಗೆ ನೀಡಲಾಗುತ್ತದೆ ಎಂದು ಮೀನುಗಾರಿಕೆ ಇಲಾಖಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಮೂರು ಜಾತಿಯ ಮೀನು ಮರಿ ಇದ್ದು,ಇದಕ್ಕೆ ಪ್ರತ್ಯೇಕ ದರ ನಿಗದಿ ಪಡಿಸಲಾಗಿದೆ ಎಂದರು.

ತಾಲೂಕಿನಲ್ಲಿ 105 ಅಂಗನವಾಡಿ ಕೇಂದ್ರಗಳಿದ್ದು, 101 ಅಂಗನವಾಡಿಗೆ ಸ್ವಂತ ಕಟ್ಟಡವಿದೆ. ಭಾಗ್ಯಲಕ್ಷ್ಮೀ ಬಾಂಡ್‌ಗಳು ಇನ್ನೂ 189 ಸರಕಾರದಿಂದ ಬರಬೇಕಿದೆ ಎಂದು ಸಿಡಿಪಿಒ ಉಮೇಶ್‌ ಮಾಹಿತಿ ನೀಡಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಜಯಶೀಲಾ, ಉಪಾಧ್ಯಕ್ಷೆ ಚಂದ್ರಮತಿ, ತಹಶೀಲ್ದಾರ್‌ ಭಾಗ್ಯ, ಇಒ ಮೂಕಪ್ಪಗೌಡ, ವಿವಿಧ ಇಲಾಖಾಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next