Advertisement

ಸೆಪ್ಟೆಂಬರ್‌ 19ಕ್ಕೆ ಪ್ಯಾನ್‌ ಇಂಡಿಯಾ ಚಂದ್ರಮುಖಿ-2 ರಿಲೀಸ್

05:04 PM Jul 01, 2023 | Team Udayavani |

ಪ್ಯಾನ್‌ ಇಂಡಿಯಾ ಸಿನಿಮಾ “ಚಂದ್ರಮುಖಿ-2′ ಬಿಡುಗಡೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಖ್ಯಾತ ನಿರ್ದೇಶಕ, ನಟ ಹಾಗೂ ಕೊರಿಯೋಗ್ರಾಫ‌ರ್‌ ರಾಘವ್‌ ಲಾರೆನ್ಸ್‌ ಹಾಗೂ ನಟಿ ಕಂಗನಾ ನಟನೆಯ ಈ ಚಿತ್ರ ಸೆಪ್ಟಂಬರ್‌ 19ರ ಗಣೇಶ ಹಬ್ಬಕ್ಕೆ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ.

Advertisement

ಖ್ಯಾತ ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದ 65ನೇ ಚಿತ್ರ “ಚಂದ್ರಮುಖಿ-2′. 2005ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ “ಚಂದ್ರಮುಖಿ’ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್‌ ಸ್ಟಾರ್‌ ರಜನಿಕಾಂತ್‌ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್‌ಲಿಸ್ಟ್‌ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖೀ ಸೀಕ್ವೆಲ್‌ ಬರುತ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ.

ಲೈಕಾ ಸಂಸ್ಥೆಚಿತ್ರವನ್ನು ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಚಿತ್ರ ಕ್ಕೆ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ರಾಜಶೇಖರ್‌ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ.

ವಡಿವೇಲು, ಲಕ್ಷ್ಮೀ ಮೆನನ್‌, ಮಹಿಮಾ ನಂಬಿಯಾರ್‌, ರಾಧಿಕಾ ಶರತ್‌ ಕುಮಾರ್‌, ಸುರೇಶ್‌ ಮೆನನ್‌ ತಾರಾಬಳಗದಲ್ಲಿದ್ದಾರೆ. ಚಿತ್ರ ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆ ಕಾಣುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next