Advertisement

ಕರ್ನಾಟಕ-ಕೇರಳ ಗಡಿ ಭಾಗದ ರಸ್ತೆಯೆಂದೇ ನಿರ್ಲಕ್ಷ್ಯ

10:39 AM Feb 08, 2018 | Team Udayavani |

ಪುಣಚ : ಪುಣಚ ಗ್ರಾ.ಪಂ. ವ್ಯಾಪ್ತಿಯ ಕೇರಳ ಗಡಿ ಭಾಗದ ಕೊಲ್ಲಪದವು-ಸರವು, ಕೊಡೆಚ್ಚಡ್ಕ- ಆಬಡ್ಕ ಸಂಪರ್ಕಿಸುವ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಈ ರಸ್ತೆ ಅಭಿವೃದ್ಧಿಗೆ ಮೀನಮೇಷ ಎಣಿಸಲಾಗುತ್ತಿದೆ. ಹೊಂಡ-ಗುಂಡಿಗಳಿಂದಾವೃತ ವಾದ, ಡಾಮರು ಕಿತ್ತುಹೋಗಿರುವ ಈ ರಸ್ತೆಗೆ ಕಾಯಕಲ್ಪ ಒದಗಿಸಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.

Advertisement

ಡಾಮರು ಹಾಕಬೇಕು
ಕೊಲ್ಲಪದವು-ಸರವು 3 ಕಿ.ಮೀ. ರಸ್ತೆ ಭಾಗದಲ್ಲಿ ಸ್ವತ್ಛ ಗ್ರಾಮ ಯೋಜನೆಯಡಿ ರಸ್ತೆಗೆ ಡಾಮರು ಹಾಕಲಾಗಿದೆ. ಕೊಡೆಚ್ಚಡ್ಕ – ಆಬಡ್ಕ ರಸ್ತೆಯ 1 ಕಿ.ಮೀ. ಭಾಗದಲ್ಲಿ 8 ವರ್ಷಗಳ ಹಿಂದೆ ಜಲ್ಲಿ ಹಾಕಲಾಗಿದ್ದು, ಡಾಮರು ಹಾಕಿಲ್ಲ. ಈ ರಸ್ತೆ ಮೂಲಕ ತೊಂಡನಡ್ಕ ಮಾರ್ಗವಾಗಿ ಬಳಂತಿಮುಗೇರು, ಮೂಡಂಬೈಲು ಪ್ರದೇಶದ ಹಲವು ಮನೆಗಳನ್ನು ಸಂಪರ್ಕಿಸಲಾಗುತ್ತದೆ.

75ಕ್ಕೂ ಅಧಿಕ ಮನೆಯವರಿಗೆ ತೊಂದರೆ
ಸುಮಾರು 75ಕ್ಕೂ ಅಧಿಕ ಮನೆಯವರು ಈ ರಸ್ತೆಯನ್ನುಬಳಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು 3 ಮಿನಿ ಬಸ್‌ಗಳು ಈ ಭಾಗಕ್ಕೆ ಬರುತ್ತವೆ ಮಾತ್ರವಲ್ಲದೆ ಇತರ ವಾಹನಗಳೂ ಸಂಚರಿಸುತ್ತವೆ. ರಸ್ತೆ ತೀರಾ ಹದಗೆಟ್ಟಿದ್ದು, ಈ ಭಾಗಕ್ಕೆ ಹೋಗಲು ವಾಹನ ಚಾಲಕರು ಹಿಂದೇಟು ಹಾಕುವುದರಿಂದ ಮನೆಮಂದಿ ಪರದಾಡುವಂತಾಗಿದೆ.

ಗಡಿ ಭಾಗದ ನಿರ್ಲಕ್ಷ್ಯ!
ಕರ್ನಾಟಕ – ಕೇರಳ ಗಡಿ ಭಾಗದ ರಸ್ತೆಯಾದ್ದರಿಂದ ಈ ರಸ್ತೆ ನಿರ್ಲಕ್ಷ್ಯಕ್ಕೊಳಗಾಯಿತೇ ?ಅನುದಾನ ಮಂಜೂರಾಗಲಿಲ್ಲವೇ? ಈ ರಸ್ತೆ ಕೆಟ್ಟು ಹೋಗಿರುವ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ಇಲ್ಲವೇ? ಮಾಹಿತಿ ನೀಡಿದರೂ ಕಡೆಗಣಿಸಲ್ಪಟ್ಟಿದೆಯೇ? ಎಂದು ಪ್ರಶ್ನಿಸುವ ನಾಗರಿಕರು, ಈ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ .

ಉದಯಶಂಕರ್‌ ನೀರ್ಪಾಜೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next