Advertisement

ಹೈಕೋರ್ಟ್‌ಗೆ ಭಾಷಾಂತಕಾರ ಸಿಬ್ಬಂದಿ ನೇಮಕ ಪ್ರಗತಿಯಲ್ಲಿ

03:45 AM Jan 07, 2017 | |

ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಕನ್ನಡ ತರ್ಜುಮೆದಾರರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

Advertisement

ರಾಜ್ಯ ಹೈಕೊರ್ಟ್‌ನಲ್ಲಿ ಕನ್ನಡ ತರ್ಜುಮೆದಾರರನ್ನು ನೇಮಕ ಮಾಡಲು ರಿಜಿಸ್ಟ್ರಾರ್‌ ಜನರಲ್‌ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ವಕೀಲ ಎನ್‌.ಪಿ.ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಮತ್ತು ನ್ಯಾ.ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ಸಷ್ಟಪಡಿಸಿತು.

ವಿಚಾರಣೆ ವೇಳೆ ವಾದ ಮಂಡಿಸಿದ ವಕೀಲ ಅಮೃತೇಶ್‌, ಸದ್ಯ ಹೈಕೋರ್ಟ್‌ನಲ್ಲಿ ನಾಲ್ವರು ಹೊರ ರಾಜ್ಯದ ನ್ಯಾಯಮೂರ್ತಿಗಳಿದ್ದಾರೆ. ಅವರ ಮುಂದೆ ವಿಚಾರಣೆಗೆ ಬರುವ ಪ್ರಕರಣಗಳಲ್ಲಿ ಕನ್ನಡ ದಾಖಲೆ ಒದಗಿಸಿದಾಗ, ವಿಚಾರಣೆ ನಡೆಸಲು ಆ ನ್ಯಾಯಮೂರ್ತಿಗಳಿಗೆ ಅಡಚಣೆಯಾಗುತ್ತಿದೆ. ಹೀಗಾಗಿ, ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಕನ್ನಡ ದಾಖಲೆಗಳನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡಲು ಭಾಷಾಂತರಕಾರರನ್ನು ನೇಮಿಸುವುದು ಅಗತ್ಯವಾಗಿದೆ. 2015ರಲ್ಲಿಯೇ ಈ ಕುರಿತು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ .ಮುಖರ್ಜಿ ಅವರು, ಇದು ಹೈಕೋರ್ಟ್‌ನ ಆಂತರಿಕ ವಿಷಯವಾಗಿದೆ. ಈಗಾಗಲೇ ಕನ್ನಡ ತರ್ಜುಮೆದಾರರ ನೇಮಕಕ್ಕೆ ಅಗತ್ಯ ಕ್ರಮ ಜರುಗಿಸಲಾಗಿದೆ. ಈ ಸಂದರ್ಭದಲ್ಲಿ ಅರ್ಜಿ ವಿಚಾರಣೆ ಮುಂದುವರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next