ಕಲ್ಕತ್ತಾ: ದೇಶದ ಅತೀ ದೊಡ್ಡ 4ಜಿ ನೆಟ್‌ವರ್ಕ್ ಜಿಯೋ ದೇಶಾದ್ಯಂತ ತನ್ನ ಬಳಕೆದಾರರನ್ನು ಹೆಚ್ಚಿಕೊಂಡಿದೆ. ಅಗಸ್ಟ್ ತಿಂಗಳಿನಲ್ಲಿ ಕಲ್ಕತ್ತಾ ನಗರವೊಂದರಲ್ಲೇ ಸುಮಾರು 1.85 ಲಕ್ಷ ಗ್ರಾಹಕರನ್ನು ಸಂಪಾದಿಸಿದೆ ಎಂದು ಸಂಸ್ಥೆ ಹೇಳಿದೆ. ಇಂದು ದೇಶದ ಬಹುತೇಕ ಭೂ ಭಾಗದಲ್ಲಿ ಜಿಯೋ 4ಜಿ ಸೇವೆ ಲಭ್ಯವಿದ್ದು, ಇದರತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಉಳಿದ ಮೊಬೈಲ್ ನೆಟ್‌ವರ್ಕ್‌ಗೆ ಹೋಲಿಸಿದರೆ ಜಿಯೋ ಸೇವೆ ಅಗ್ಗ ಮಾತ್ರವಲ್ಲದೇ ವೇಗವು ಉತ್ತಮವಾಗಿದೆ ಎಂದು ಗ್ರಾಹಕರು ಜಿಯೋದತ್ತ ಮುಖ ಮಾಡುತ್ತಿದ್ದಾರೆ.
ಟ್ರಾಯ್‌ನ ಅಂಕಿ ಅಂಶಗಳನ್ನು ಉಲ್ಲೇಖೀಸಿರುವ ಜಿಯೋ ಅಗಸ್ಟ್ ತಿಂಗಳಲ್ಲಿ ದೇಶಾದ್ಯಂತ 95.84 ಲಕ್ಷ ಬಳಕೆದಾರರನು ಜಿಯೋ ಸಂಪಾದಿಸಿದೆ. ಸದ್ಯ ಜಿಯೋ ದೇಶಾದ್ಯಂತ ಟೆಲಿಕಾಂ ಸೇವೆಯಲ್ಲಿ ತನ್ನ ಹಿಡಿತ ಸಾಧಿಸಿದನ್ನು ಇದು ರಿಸುತ್ತದೆ.
ಕರೆಗೆ ಚಾರ್ಜ್
ಜಿಯೊ ಗ್ರಾಹಕರು ಇತರೆ ಕಂಪನಿಯ ಫೋನ್ ನೆಟ್‌ವರ್ಕ್‌ಗಳಿಗೆ ಕರೆ ಮಾಡಿದರೆ (ವಾಯ್ಸ್‌ಕಾಲ್) ನಿಮಿಷಕ್ಕೆ 6 ಪೈಸೆ ತೆರಬೇಕಾಗುತ್ತದೆ. ಆದರೆ, ಅಷ್ಟೇ ಮೊತ್ತದ ಉಚಿತ ಡೇಟಾವನ್ನು ಗ್ರಾಹಕರಿಗೆ ನೀಡುವುದಾಗಿ ಜಿಯೊ ಹೇಳಿದೆ. ಈ ತನಕ ಎಲ್ಲ ಕರೆಗಳೂ ಉಚಿತವಾಗಿದ್ದವು. ಇದೇ ಮೊದಲ ಬಾರಿಗೆ ವಾಯ್ ಕಾಲ್‌ಗಳಿಗೆ ಗ್ರಾಹಕರು ದರ ತೆರಬೇಕಾಗುತ್ತದೆ. ಈಗ ಟ್ರಾಯ್ ನಿಯಮದನ್ವಯ ಇಂಟರ್ಕನೆಕ್ಟ್ ಬಳಕೆಯ ಶುಲ್ಕಗಳನ್ನು (ಐಯುಸಿ) ಜಿಯೊ ಜಾರಿಗೊಳಿಸಿದ್ದು, ಹೊಸ ಪ್ಲಾನ್ ರಿಚಾರ್ಜ್ ಮಾಡುವವರಿಗೆ ಇದು ಅನ್ವವಾಗುತ್ತದೆ.