Advertisement

ಹಸಿವಿನ ಮುಂದೆ ಅಷ್ಟೂ ಶ್ರೀಮಂತಿಕೆ ಮಂಡಿಯೂರಿ ಮಲಗಿತ್ತು…

04:38 AM Jun 09, 2020 | Lakshmi GovindaRaj |

ನಡು ಮಧ್ಯಾಹ್ನದ ಸಮಯವದು. ಊಟದ ಹೊತ್ತು. ಕೋವಿಡ್‌ 19 ಲಾಕ್‌ಡೌನ್‌ನ ಕಾಲ. ಹೆದ್ದಾರಿಯ ಪಕ್ಕದ ಅದೊಂದು ಹೋಟೆಲ್‌ನ ಬಾಗಿಲು ಅರ್ಧ ತೆರೆದಿತ್ತು. ಆಗ ಪಾರ್ಸೆಲ್‌  ಕೊಡಲೂ ಅನುಮತಿ ಇರಲಿಲ್ಲ. ಹಾಗಾಗಿ, ಬಾಗಿಲು ತೆರೆದಿದ್ದರೂ ವ್ಯವಹಾರ ನಡೆಯುತ್ತಿರಲಿಲ್ಲ. ಮಾಲೀಕ, ಗಲ್ಲಾಪೆಟ್ಟಿಗೆಗೆ ಬೀಗ ಹಾಕಿ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ, ಹೊರಗಡೆ ಕಾರೊಂದು ನಿಂತ ಸದ್ದಾಗಿತ್ತು. ನಂತರದ ಎರಡು ನಿಮಿಷಕ್ಕೆ ಹೋಟೆಲ್ಲಿನ ಒಳಗೆ ಬಂದಿದ್ದ  ಅವನು. ಹಾಗೆ ಬಂದವನು- “ಊಟ ಏನಾದ್ರೂ ಇದೆಯಾ ಸರ್‌..’? ಎಂದು ಕೇಳಿದಾಗ, ಮಾಲೀಕನಿಗೆ ಗಲಿಬಿಲಿ.

Advertisement

ಅಸಲಿಗೆ ಅದು ವ್ಯಾಪಾರ ನಿರ್ಬಂಧಿತ ಕಾಲ. ತಾನು ಊಟ ಕೊಟ್ಟ ವಿಷಯ ಗೊತ್ತಾದರೆ  ಪೊಲೀಸು, ಕೇಸು ಅಂತೆಲ್ಲ  ಸಮಸ್ಯೆ. ಹೀಗೆಲ್ಲ ಯೋಚಿಸಿ, ಇಲ್ಲ ಅಂದುಬಿಡಲು ನಿರ್ಧರಿಸಿ, ಒಮ್ಮೆ ಬಂದಿದ್ದವನತ್ತ ದಿಟ್ಟಿಸಿದ. ಬಂದವನ ಕತ್ತಿನಲ್ಲಿ ದಪ್ಪ ಚೈನು, ಕೈ ಬೆರಳುಗಳಲ್ಲಿ ಉಂಗುರಗಳು, ಯಾವುದೋ ದುಬಾರಿ ವಾಚು, ಮೈ ಮೇಲೆ ತುಟ್ಟಿ ದಿರಿಸು. ದೊಡ್ಡ  ಸಿರಿವಂತನೇ ಇರಬೇಕು ಎನ್ನಿಸಿತ್ತು ಮಾಲೀಕನಿಗೆ. ಕೊಂಚ ಹೊತ್ತು ಯೋಚಿಸಿದವನು- “ಊಟ ಇದೆ. ಆದರೆ ಕೆಲಸದವರಿಗಾಗಿ ಮಾಡಿದ್ದು. ಪರವಾಗಿಲ್ಲವಾ..?’ ಎಂದುಬಿಟ್ಟಿದ್ದ.

ಅವನು ಒಂದರೆಕ್ಷಣವೂ ಹಿಂಜರಿಯದೆ- “ಅಯ್ಯೋ,  ಏನೋ ಒಂದು ಕೊಡಿ ಸರ್‌’ ಎನ್ನುತ್ತ, ಎದುರಿನ ಮೇಜಿನ ಮೇಲೆ ಕೂತುಬಿಟ್ಟ. ಹೋಟೆಲ್ಲಿ ನವನಿಗೆ ಗಾಬರಿಯಾಯ್ತು. ಕೆಲಸದವರ ಊಟ ವನ್ನು ಯಾವುದೇ ಕಾರಣಕ್ಕೂ ಶ್ರೀಮಂತ ಒಪ್ಪಲಾರ ಎಂದುಕೊಂಡಿದ್ದವನ ಲೆಕ್ಕಾಚಾರ  ತಲೆಕೆಳಗಾಗಿತ್ತು. ಬೇರೆ ದಾರಿಯಿಲ್ಲದೆ, ಒಳಗಿದ್ದ ಕೆಲಸದವರತ್ತ ನೋಡಿದ್ದ ಮಾಲೀಕ. ಕೆಲಸದಾಳಿಗೆ ಅರ್ಥವಾಗಿತ್ತು. ತಟ್ಟೆಯ ತುಂಬ ಅನ್ನ, ಮೇಲೊಂದಿಷ್ಟು ಸಾರು ಸುರಿದುಕೊಂಡು, ತಮಗಾಗಿ ಮಾಡಿಕೊಂಡಿದ್ದ ಪಲ್ಯವನ್ನು ತಟ್ಟೆಗೆ  ಹಾಕಿ, ಕೆಲಸದವನು ತಂದುಕೊಟ್ಟ.

ಅನ್ನ ಕಂಡ ಸಿರಿವಂತನ ಮುಖದಲ್ಲಿ ಸಂತಸದ ನಗೆ. ತಟ್ಟೆಗೆ ಕೈ ಹಾಕಿದವನು, ಗಬಗಬನೇ ತಿನ್ನಲಾರಂ ಭಿಸಿದ್ದ. ಹಣೆಯ ಮೇಲಿದ್ದ ಬೆವರನ್ನು ಬರಿಗೈಯ ಲ್ಲಿಯೇ ಒರೆಸಿಕೊಳ್ಳುತ್ತ, ಅವಸರಕ್ಕೆ ಮೈ  ಮೇಲೆ ಚೆಲ್ಲಿಕೊಳ್ಳುತ್ತ ಉಣ್ಣುತ್ತಿದ್ದ ಅವನ ಪರಿಗೆ ಮಾಲೀಕನ ಕಣ್ಣಂಚು ಜಿನುಗಿತ್ತು. ಅದರ ಪರಿವೆಯಿಲ್ಲದೇ ಊಟ ಮುಗಿಸಿದ ಸಿರಿವಂತ, ಕೈ ತೊಳೆದು- “ನಿಮಗೆ ಪುಣ್ಯ ಬರ್ಲಿ ರಾಯರೇ, ಏನೋ ಕೆಲಸದ ಕಾರಣಕ್ಕೆ ಬೇರೆ ಊರಿಗೆ  ಹೋಗಿದ್ದೆ. ನಿನ್ನೆ ರಾತ್ರಿ ಊಟ ಮಾಡಿದ್ದಷ್ಟೇ. ನಂತರ ಏನೆಂದರೆ ಏನೂ ಸಿಕ್ಕಿಲ್ಲ,  ಇವತ್ತು, ಹಸಿವಿನಿಂದ ಸತ್ತೇ ಹೋಗ್ತಿàನಿ ಅಂದು  ಕೊಂಡಿದ್ದೆ.

ನಿಮ್ಮಿಂದ ಬಹಳ ಉಪಕಾರ ವಾಯಿತು’ ಎಂದು ಕೈ ಮುಗಿದು, ನೂರರ ನೋಟನ್ನು  ಮೇಜಿನ ಮೇಲಿಟ್ಟು ಹೋಗಿದ್ದ. ಕೋವಿಡ್‌ 19 ಲಾಕ್‌ಡೌನ್‌ ಕಾಲಕ್ಕೆ ನಡೆದ ಸತ್ಯಘಟನೆಯಿದು. “ಬೇರೆ ಸಮಯದಲ್ಲಾಗಿದ್ದರೆ ಆ ಮನುಷ್ಯ ಊಟವನ್ನಿರಲಿ, ಆ ತಟ್ಟೆಯನ್ನು ಸಹ ಕೈಯಿಂದ ಮುಟ್ಟುತ್ತಿರಲಿಲ್ಲ. ಆದರೆ ಇವತ್ತು ಒಂದ ಗುಳು ಸಹ ಬಿಡದೇ ತಟ್ಟೆಯನ್ನು ಸ್ವತ್ಛಗೊಳಿಸಿದ್ದ. ಮೈಮೇಲೆ ದುಬಾರಿ ಬಟ್ಟೆ, ಕೈಯಲ್ಲಿ ಬ್ರಾಂಡೆಡ್‌ ವಾಚು, ಮೈ ತುಂಬ ಚಿನ್ನ, ದೊಡ್ಡ ಕಾರು ಎಲ್ಲವೂ ಇತ್ತು ಅವನ ಬಳಿ. ಆದರೆ ಹಸಿವಿಗೆ ಅನ್ನವಿರಲಿಲ್ಲ.

Advertisement

ಅಷ್ಟು ದೊಡ್ಡ ಸಿರಿವಂತ,  ಯಕಶ್ಚಿತ್‌ ಅನ್ನ ತುಂಬಿದ್ದ ಒಂದು  ಟ್ಟೆಯೆದುರು ಭಿಕ್ಷುಕನಂತಾಗಿದ್ದ. ಅವನ ಗತ್ತು-ಗೈರತ್ತು, ಶಿಸ್ತುಗಳೆಲ್ಲವೂ ಹಸಿವಿನೆದುರು ಸೋತು ಮಂಡಿಯೂರಿದ್ದವು. ಈ ಕೋವಿಡ್‌ 19 ಭಯವನ್ನಷ್ಟೇ ಕೊಟ್ಟಿಲ್ಲ, ನಮ್ಮ ಅಹಮಿಕೆ, ಸಿರಿವಂತಿಕೆ, ಮೇಲು ಕೀಳುಗಳ ನಿರರ್ಥಕತೆಯ   ಕುರಿತು ಅದ್ಭುತ ಪಾಠಗಳನ್ನೂ ಕಲಿಸುತ್ತಿದೆ ನೋಡು’ ಎಂದಿದ್ದರು ಹೋಟೆಲ್‌ ಮಾಲೀಕರು. ಆ ಕಥೆಯನ್ನು ನಿಮಗೂ ಹೇಳಬೇಕು ಅನಿಸಿದ್ದರಿಂದ ಇಲ್ಲಿ ಬರೆದೆ…

* ಗುರುರಾಜ ಕೊಡ್ಕಣಿ, ಯಲ್ಲಾಪುರ

Advertisement

Udayavani is now on Telegram. Click here to join our channel and stay updated with the latest news.

Next