Advertisement

ಜು.15ರ ಬಳಿಕ ಫ‌ಲಿತಾಂಶ ಪ್ರಕಟ ಸಾಧ್ಯತೆ​​​​​​​

06:25 AM Jun 18, 2018 | Team Udayavani |

ಬೆಂಗಳೂರು: 2015ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯ ಫ‌ಲಿತಾಂಶ ಜುಲೈ 15ರ ಬಳಿಕ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಫ‌ಲಿತಾಂಶ ಪ್ರಕಟಣೆಯ ನಿರೀಕ್ಷೆಯಲ್ಲಿ
ದ್ದ 8 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ ಸಮಾಧಾನ ಮೂಡಿಸಿದೆ.

Advertisement

ನೇಮಕಾತಿ ಅಕ್ರಮಗಳ ಕರಿ ಛಾಯೆಯಿಂದ ಹೊರಬರಲು ಹೆಣ ಗಾಡುತ್ತಿರುವ ಲೋಕಸೇವಾ ಆಯೋಗ, ಕೊನೆಗೂ ತನ್ನ ವಿಳಂಬ ಧೋರಣೆಯಿಂದ ಹೊರ ಬರುವ ಲಕ್ಷಣಗಳು ಕಾಣುತ್ತಿವೆ.

ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ,ಸ್ಪರ್ಧಾತ್ಮಕ ಪರೀಕ್ಷೆ, ಪೂರ್ವಭಾವಿ ಪರೀಕ್ಷೆ,ಮುಖ್ಯ ಪರೀಕ್ಷೆ, ಫ‌ಲಿತಾಂಶ ಪ್ರಕಟ, ಮೌಖೀಕ ಸಂದರ್ಶನ, ಅಂತಿಮ ಪಟ್ಟಿ ಪ್ರಕಟ ಇವೆಲ್ಲದ್ದಕ್ಕೂತಿಂಗಳು, ವರ್ಷಾನುಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ,2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿಯ (ಕೆಎಎಸ್‌) 428 ಹುದ್ದೆಗಳ ನೇಮಕಾತಿಗೆ ಮುಖ್ಯ ಪರೀಕ್ಷೆ ನಡೆದು 6 ತಿಂಗಳು ಮುಗಿಯುತ್ತಾ ಬಂದಿದೆ. ಆದರೂ, ಕೆಪಿಎಸ್‌ಸಿ ಫ‌ಲಿತಾಂಶವನ್ನೇ ಪ್ರಕಟಿಸಿರಲಿಲ್ಲ.

ಫ‌ಲಿತಾಂಶ ಯಾವಾಗ?: ಕೆಎಎಸ್‌ ಹುದ್ದೆಯ ಆಕಾಂಕ್ಷೆಯೊಂದಿಗೆ ಮುಖ್ಯ ಪರೀಕ್ಷೆ ಬರೆದ 8 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಫ‌ಲಿತಾಂಶಕ್ಕಾಗಿ ಬಕಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಈ ಬಗ್ಗೆ ವಿಚಾರಿಸಲು ಅಭ್ಯರ್ಥಿಗಳು ಪ್ರತಿನಿತ್ಯ ಕೆಪಿಎಸ್‌ಸಿ ಕಚೇರಿಗೆ ಎಡತಾಕುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ 2017ರ ಆಗಸ್ಟ್‌ನಲ್ಲಿ ಪೂರ್ವ ಭಾವಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಫ‌ಲಿತಾಂಶದ ಬಳಿಕ 8 ಸಾವಿರ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಅದರಂತೆ 2017ರ ಡಿಸೆಂಬರ್‌ನಲ್ಲಿ ಬೆಂಗಳೂರು ಮತ್ತು ಧಾರವಾಡ ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ನಡೆಸಲಾಯಿತು.

ಸಮಿತಿ ಶಿಫಾರಸು ಲೆಕ್ಕಕ್ಕಿಲ್ಲ
ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗೆ ಕಾಯಕಲ್ಪ ನೀಡಲು ಸರ್ಕಾರವೇ ರಚಿಸಿದ ಹೂಟಾ ಸಮಿತಿಯ ಶಿಫಾರಸುಗಳೇ
ಲೆಕ್ಕಕ್ಕಿಲ್ಲ ದಂತಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಪ್ರತಿ ವರ್ಷ ಅಧಿಸೂಚನೆ ಹೊರಡಿಸಬೇಕು. ಎಲ್ಲ ಇಲಾಖೆಗಳು ಪ್ರತಿ ವರ್ಷ ನವೆಂಬರ್‌ ಅಥವಾ ಡಿಸೆಂಬರ್‌ನೊಳಗೆ ಖಾಲಿ ಹುದ್ದೆಗಳ ಪಟ್ಟಿಯನ್ನು ಆಡಳಿತ ಮತ್ತು ಸಿಬ್ಬಂದಿ ಇಲಾಖೆಗೆ ಕಳುಹಿಸಿಕೊಡ ಬೇಕು. ಜನವರಿ ವೇಳೆಗೆ ಈ ಪಟ್ಟಿ ಕೆಪಿಎಸ್‌ಸಿಗೆ ರವಾನೆಯಾಗ ಬೇಕು. ಫೆಬ್ರವರಿಗೆ ಅಧಿಸೂಚನೆ ಹೊರಡಿಸಿ, 6 ತಿಂಗಳಲ್ಲಿ ನೇಮ ಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಹೂಟಾ ಸಮಿತಿ ಶಿಫಾರಸು ಮಾಡಿದೆ. ಇದಕ್ಕೆ ಪೂರಕವಾಗಿ ಕೆಪಿಎಸ್‌ಸಿ ವಾರ್ಷಿಕ ವೇಳಾ ಪಟ್ಟಿ ಸಿದ್ಧಪಡಿಸುತ್ತದೆ. ಆದರೆ, ಅದು ಪಾಲನೆ ಆಗುವುದಿಲ್ಲ. 2011ರಿಂದ ಇಲ್ಲಿವರೆಗೆ ಕೇವಲ ಎರಡು ಬಾರಿ ಮಾತ್ರ ಕೆಎಎಸ್‌ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸ ಲಾಗಿದೆ. 2015ನೇ ಸಾಲಿನ ನೇಮಕಾತಿ ನೆನೆಗುದಿಗೆ ಬಿದ್ದಿದೆ. ಇವೆಲ್ಲದರ ನಡುವೆ, 2016 ಮತ್ತು 2107ನೇ ಸಾಲಿನ ಹುದ್ದೆಗಳ ಭರ್ತಿಗೆ ಅಧಿಸೂಚನೆ ಯಾವಾಗ ಎಂದು ಕೇಳುವಂತಾಗಿದೆ.

Advertisement

2015ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯ ಫ‌ಲಿತಾಂಶ ಜುಲೈ 15ರ ಬಳಿಕ ಪ್ರಕಟಗೊಳ್ಳುವ ಸಾಧ್ಯತೆ ಇದೆ.
– ಟಿ. ಶ್ಯಾಂ ಭಟ್‌, ಕೆಪಿಎಸ್‌ಸಿ ಅಧ್ಯಕ್ಷ

ಖಾಲಿ ಹುದ್ದೆಗಳ ಭರ್ತಿಗೆ ಇರುವ ಕಾಲ ಮಿತಿಯನ್ನು ಕೆಪಿಎಸ್‌ಸಿ ಪಾಲಿಸುತ್ತಿಲ್ಲ. ಫ‌ಲಿತಾಂಶ ಪ್ರಕಟಕ್ಕೆ ತಿಂಗಳುಗಟ್ಟಲೇ ವಿಳಂಬ ಮಾಡಿದರೆ ವಯೋಮಿತಿ ಮುಗಿದು ಹೋಗುತ್ತದೆ. ಉದ್ಯೋಗಕಾಂಕ್ಷಿಗಳ ಜೀವನದ ಜತೆಗೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದೆ.
– ಎಸ್‌. ಕುಮಾರ, ನೊಂದ ಅಭ್ಯರ್ಥಿ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next