Advertisement

ಯುಪಿ ಫ‌ಲಿತಾಂಶ ಬೇರೆ ಚುನಾವಣೆ ಮೇಲೆ ಪರಿಣಾಮ ಬೀರಲ್ಲ: ಖರ್ಗೆ

06:55 AM Dec 03, 2017 | |

ಬೆಂಗಳೂರು: ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫ‌ಲಿತಾಂಶ ರಾಷ್ಟ್ರೀಯ ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಗೆ ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಚಕರಾಗಿ ಸಹಿ ಹಾಕಲು ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ನಾವು ಐವತ್ತು ವರ್ಷದಿಂದ ನೋಡುತ್ತಾ¤ ಬಂದಿದ್ದೇವೆ. ಅನೇಕ ಸ್ಥಳೀಯ ಚುನಾವಣೆಗಳಲ್ಲಿ ಬಂದ ಫ‌ಲಿತಾಂಶ  ಲೋಕಸಭೆ ಚುನಾವಣೆ ಯಲ್ಲಿ ಬರುವುದಿಲ್ಲ ಎಂದು ಹೇಳಿದರು.

ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾಗುತ್ತಿರುವುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತ್ರ ನಾವು ಚುನಾವಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಲಿಪ್ಟ್ ನಲ್ಲಿ ಸಿಲುಕಿದ ಖರ್ಗೆ
ರಾಹುಲ್‌ ಗಾಂಧಿಯನ್ನು ಎಐಸಿಸಿ ಅಧ್ಯಕ್ಷ  ಸ್ಥಾನಕ್ಕೆ  ಸ್ಫರ್ಧಿಸಲು ಸೂಚಕರಾಗಿ ಸಹಿ ಹಾಕಲು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಕಚೇರಿಯಲ್ಲಿನ ಲಿಪ್ಟ್ನಲ್ಲಿ ಐದು ನಿಮಿಷ ಸಿಲುಕಿ ಆತಂಕಕ್ಕೆ ಕಾರಣವಾಗಿತ್ತು. ಸೂಚಕರಾಗಿ ಸಹಿ ಹಾಕಿ ಕಚೇರಿಯ ಮೊದಲ ಮಹಡಿಯಿಂದ ಲಿಫ್ಟ್ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್‌ ಪಾಟೀಲರೊಂದಿಗೆ ಆಗಮಿಸುತ್ತಿರುವಾಗ ಅರ್ಧ ದಲ್ಲಿಯೇ ಲಿಫ್ಟ್ ಸ್ಥಗಿತಗೊಂಡಿದೆ. ತಕ್ಷಣ ಸೈರನ್‌ ಬಟನ್‌ ಹೊಡೆ ದಿದ್ದು, ಕಚೇರಿ ಸಿಬಂದಿ ಎಚ್ಚೆತ್ತು ಕೊಂಡು ಮೊದಲನೇ ಮಹಡಿ ಯಿಂದಲೇ ಲಿಫ್ಟ್ ಬಾಗಿಲು ತೆರೆೆದು, ಖರ್ಗೆ ಮತ್ತು ಶರಣ ಪ್ರಕಾಶ್‌ ಪಾಟೀಲರನ್ನು ಹೊರಗೆ ತಂದರು. ನಂತರ ಮೆಟ್ಟಿಲುಗಳ ಮೂಲಕವೇ ಖರ್ಗೆ ಕೆಳಗಿಳಿದು ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next