Advertisement

ಫಲ ಕಂಡಿದೆ ಮೋದಿಗೆ ಹಾಕಿದ ಮತ

02:41 PM Apr 20, 2019 | Team Udayavani |

ನರಗುಂದ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಶಕ್ತಿ ಮೋದಿಗಿದೆ ಎಂಬುದನ್ನು ಕಳೆದ ಐದು ವರ್ಷದಲ್ಲಿ ಸಾಬೀತುಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹಾಕಿದ ಮತ ಸಾಫಲ್ಯ ಕಂಡಿದೆ ಎಂಬ ಆತ್ಮ ಸಂತೋಷ ದೇಶದ ಪ್ರಜೆಗಳಲ್ಲಿದೆ. ಹೀಗಾಗಿ ಮತ್ತೂಮ್ಮೆ ಮೋದಿ ಪ್ರಧಾನ ಸೇವಕರಾಗಿ ಆಯ್ಕೆಗೊಳ್ಳುವುದು ನಿಶ್ಚಿತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಸಿ. ಪಾಟೀಲ ಭರವಸೆ ವ್ಯಕ್ತಪಡಿಸಿದರು.

Advertisement

ಬಾಗಲಕೋಟೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರವಾಗಿ ಪಟ್ಟಣದ ಗುಡ್ಡದಕೇರಿ ಓಣಿಯಲ್ಲಿ ಪ್ರಚಾರಾರ್ಥ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಇಂದು ಭಾರತದ ಚುನಾವಣೆ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆ ಎಂದರು.

ವಿ.ಎಸ್‌. ಢಾಣೆ, ಚಂದ್ರಶೇಖರ ಕೋಟಿ, ಕಿರಣ ಮುಧೋಳೆ, ಚಂದ್ರು ಪವಾರ, ಉಮೇಶ ಕುಡೇನವರ, ಹನಮಂತ ಬಿರಾದಾರ, ಹಸನಸಾಬ ಮಟಗೇರ, ವೆಂಕಪ್ಪ ಆಚಮಟ್ಟಿ, ವಿಠuಲ ಜಾಮದಾರ, ಕೃಷ್ಣಾ ಬೆಟಗೇರಿ, ವಾಸು ಕೊಟೋಳಿ, ವಿಠuಲ ಕಾಟಕಾರ, ಮೌಲಾಸಾಬ ಮುನವಳ್ಳಿ, ಬಿಬಿಜಾನ ಕುಡೇನವರ, ನೀಲವ್ವ ಮೋಹಿತೆ, ಬಾಳವ್ವ ಸೂರ್ಯವಂಶಿ, ರುಕ್ಮಿಣಿಬಾಯಿ ಜಾಧವ, ಸಾವಕ್ಕ ಸೂರ್ಯವಂಶಿ, ರೇಣುಕಾ ಭೋಸಲೆ, ಶಾಂತಾ ಜಾಮದಾರ, ಪದ್ಮವ್ವ ಕಾಟಗಾರ, ಪುಷ್ಪವ್ವ ಘಾಟಗೆ, ಯಲ್ಲವ್ವ ಕಲ್ಲೂರ, ಸಿದ್ಧೇಶ ಹೂಗಾರ, ಮಂಜು ಮೆಣಸಗಿ ಮುಂತಾದವರಿದ್ದರು.

ಮೈತ್ರಿ ಸರ್ಕಾರದಿಂದ ಆಗಿಲ್ಲ ಅಭಿವೃದ್ಧಿ
ಹೊಳೆಆಲೂರ:
ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದಿಂದ ಇದುವರೆಗೂ ಯಾವುದೇ ಜನಪರ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಒಂದು ವೇಳೆ ರಾಷ್ಟ್ರದಲ್ಲಿ ಮಹಾ ಘಟಬಂಧನ್‌ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶವು ಅಭಿವೃದ್ಧಿಯಿಂದ ವಂಚಿತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ ಹೇಳಿದರು. ಹೋಬಳಿಯ ಅಮರಗೋಳ, ಬಿ.ಎಸ್‌. ಬೇಲೆರಿ, ನೈನಾಪುರ, ಹಿರೇಹಾಳ ಗ್ರಾಮದಲ್ಲಿ ಶುಕ್ರವಾರ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಬಾಗಲಕೋಟ ಮತಕ್ಷೇತ್ರದ ಪಿ.ಸಿ. ಗದ್ದಿಗೌಡರ ಹಾಗೂ ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷ ರಮೇಶ ಬೇವಿನಗಿಡದ, ಸದಸ್ಯ ಭೀಮಪ್ಪ ಮಾದರ, ಬಸವರಾಜ ತೆಲಿಬಟ್ಟಿ, ಶಶಿಧರ ತೇಲಿ, ಆದನಗೌಡ ಕಲ್ಲನಗೌಡ್ರ, ಮಲ್ಲನಗೌಡ ಗೌಡರ, ಶಂಕರಗೌಡ ಬಾಲನಗೌಡ್ರ, ವೀರಸಂಗಯ್ಯ ಮಹಾಕಾಶಿಮಠ, ಪರಸಪ್ಪ ಮಾದರ ಇದ್ದರು.

2022ರಲ್ಲಿ ಗುಡಿಸಲು ಮುಕ್ತ ಭಾರತ ನಿರ್ಮಾಣ: ಪಾಟೀಲ

ನರಗುಂದ: 2022ಕ್ಕೆ ಗುಡಿಸಲು ಮುಕ್ತ ಭಾರತ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿಯವರ ಬಹುದೊಡ್ಡ ಚಿಂತನೆಯಾಗಿದೆ. ಮತ್ತೂಮ್ಮೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಪ್ರಮುಖ ನದಿಗಳ ಜೋಡಣೆಗೆ ಕಾಯಕಲ್ಪ ನೀಡುವ ಘೋಷಣೆ ಮಾಡಲಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು. ಬಾಗಲಕೋಟೆ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಪರವಾಗಿ ಪಟ್ಟಣದ ರಾಚಯ್ಯನಗರ ಜೋಗಣ್ಣವರ ಮನೆ ಆವರಣದಲ್ಲಿ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಸೋಲಿಸುವುದು ಮಹಾಘಟಬಂಧನ್‌ ಪ್ರಮುಖ ಗುರಿಯಾಗಿದೆ. ದೇಶದ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಎಂದು ಆರೋಪಿಸಿದರು. ಪುರಸಭೆ ಮಾಜಿ ಸದಸ್ಯ ವಸಂತ ಜೋಗಣ್ಣವರ ಮಾತನಾಡಿ, ಇದು ದೇಶದ ಐತಿಹಾಸಿಕ ಚುನಾವಣೆಯಾಗಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಚಂದ್ರು ಪವಾರ, ಕಿರಣ ಮುಧೋಳೆ, ಹನಮಂತ ಬಿರಾದಾರ, ಮಹಾದೇವ ಜೋಗಣ್ಣವರ, ಬಸಪ್ಪ ಹಿರೇಕೊಪ್ಪ, ಯಮನಪ್ಪ ಗುಡಿಸಲಮನಿ, ಪ್ರಶಾಂತ ಸೋಮಣ್ಣವರ, ಯಮನಪ್ಪ ಆಶೇದಾರ, ಮಹೇಶ ಆಶೇದಾರ, ಮಂಜುನಾಥ ಸೋಮಣ್ಣವರ, ಮರಿಯಪ್ಪ ಸೋಮಣ್ಣವರ, ಬಸವರಾಜ ಶೆಟ್ಟೆನ್ನವರ, ದತ್ತು ಜೋಗಣ್ಣವರ, ರಾಜು ಸುಬೇದಾರ, ಗೋಪಾಲ ದ್ಯಾವನ್ನವರ, ಅಮಿರ ಸುಬೇದಾರ, ಉಮೇಶ ಸುಬೇದಾರ ಇದ್ದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next