ಹೊಸದಿಲ್ಲಿ: ಚುನಾವಣ ಫಲಿತಾಂಶ ದೇಶದ ಜನರಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಜತೆಗೆ ಪ್ರಧಾನಿ ಮೋದಿ ಯವರ ವಿರುದ್ಧದ ಜನಾಭಿಪ್ರಾಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ.
ಫಲಿತಾಂಶದ ಬಳಿಕ ಎಐಸಿಸಿ ಕಚೇರಿಯಲ್ಲಿ ಮಾತನಾಡಿ, “ಚುನಾವಣ ಫಲಿತಾಂಶ ದೇಶದ ಜನರು ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಈ ಚುನಾ ವಣೆ ದೇಶದ ಜನ ಮತ್ತು ಮೋದಿ ನಡು ವಿನ ಹೋರಾಟವೆಂದು ನಾವು ಹೇಳುತ್ತಿ ದ್ದೆವು. ಜನರು ನೀಡಿದ ತೀರ್ಪನ್ನು ವಿನೀತರಾಗಿ ಸ್ವೀಕರಿಸುತ್ತೇವೆ’ ಎಂದಿದ್ದಾರೆ.
ಮತದಾರರು ಬಿಜೆಪಿ ಸೇರಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ. ಈ ಫಲಿತಾಂಶ ಪ್ರಧಾನಿ ಮೋದಿಯವರಿಗೆ ಉಂಟಾದ ನೈತಿಕ, ರಾಜಕೀಯ ಸೋಲು. ಪ್ರತಿಯೊಂದಕ್ಕೂ ನಾನು ನಾನು ಎನ್ನುತ್ತಿದ್ದ ಪ್ರಧಾನಿಗೆ ಉಂಟಾಗಿರುವ ಸೋಲು ಎಂದಿದ್ದಾರೆ. ರಾಹುಲ್ ಗಾಂಧಿಯ ಭಾರತ್ ಜೋಡೋ ಮತ್ತು ಭಾರತ್ ಜೋಡೋ ನ್ಯಾಯಯಾತ್ರೆ ದೇಶದ ಲಕ್ಷಾಂತರ ಮತದಾರರನ್ನು ಸಂಪರ್ಕಿಸು ವಲ್ಲಿ ನೆರವಾಯಿತು. ಅವರೆಲ್ಲರೂ ಪಕ್ಷವನ್ನು ಬೆಂಬಲಿಸಿದರು ಎಂದಿದ್ದಾರೆ.
ಪ್ರಧಾನಿಯಿಂದ ಸುಳ್ಳು ಪ್ರಚಾರ: ಕಾಂಗ್ರೆಸ್‌ನ ಪ್ರಣಾಳಿಕೆ ಬಗ್ಗೆ ಪ್ರಧಾನಿ ಮೋದಿ ಯಾವತ್ತೂ ಸುಳ್ಳು ಪ್ರಚಾರ ನಡೆಸಿದರು. ಅದು ದೇಶದ ಜನರಿಗೆ ಮನವರಿಕೆಯಾಗಿದೆ. ಇಂಡಿಯಾ ಕೂಟ ಜನರಿಗೆ ಉಂಟಾಗುತ್ತಿದ್ದ ನೈಜ ಸಮಸ್ಯೆ ಗಳಾಗಿರುವ ನಿರುದ್ಯೋಗ, ಹಣದು ಬ್ಬರ, ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿಯ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆವು ಎಂದರು.
ವಿರೋಧ ಮಾಡಿದ್ರೆ ಜೈಲು
ಬಿಜೆಪಿ ವಿರೋಧಿಸಿದವರನ್ನು ಜೈಲಿಗೆ ಹಾಕಲಾಯಿತು. ಒತ್ತಡ ತಾಳಲಾ ರದ ಕೆಲವು ಪಕ್ಷಗಳು ಸಹಕರಿಸಿದವು. ಮತ್ತೆ ಬಿಜೆಪಿಗೆ ಅಧಿಕಾರ ಕೊಟ್ಟರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿ ಎಂದು ಜನಕ್ಕೆ ಮನವರಿಕೆಯಾ ಗಿದೆ ಎಂದು ಖರ್ಗೆ ಹೇಳಿದರು.