ದೇವನಹಳ್ಳಿ: ಮಾನವ ಭೂಮಿ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಡೀಸಿ ಪಿ.ಎನ್.ರವೀಂದ್ರ ತಿಳಿಸಿದರು. ನಗರದ ಕೋಡಿಮಂಚೇನಹಳ್ಳಿ ಸಮೀಪದ ವೃಕ್ಷ ವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ನಿಮಿತ್ತ ಸಸಿ ನೆಡಲು ಚಾಲನೆ ನೀಡಿ ಮಾತನಾಡಿದರು.
ನಮಗೆ ಅಗತ್ಯವಿರುವ ಆಮ್ಲಜನಕ, ಆಹಾರ ಮತ್ತು ಆರೋಗ್ಯಕ್ಕಾಗಿ ಸಸಿ ನೆಡಬೇಕು. ದೇಶಾದ್ಯಂತ ಅರಣ್ಯ ಸಂಪತ್ತು ನಾಶವಾಗುತ್ತಿದ್ದು, ಉಳಿಸುವ ಕಾರ್ಯವಾಗ ಬೇಕು. ಪರಿಸರ ಸಂರಕ್ಷಣೆಯಾದರೆ ಮಾತ್ರ ಮನುಕುಲಕ್ಕೆ ಉಳಿವು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಪರಿಸರ ಸಂರಕ್ಷಣೆ ನಿರಂತರ ಪ್ರಕ್ರಿಯೆ.
ಪರಿಸರ ಬೆಳೆಸಿದಷ್ಟೂ ಮಾನವನಿಗೆ ಹೆಚ್ಚಿನ ಸಹಾಯ ಮಾಡುತ್ತದೆ. ಆದರೆ ಪರಿಸರ ನಾಶವಾದಂತೆ ಮನುಷ್ಯನ ಬುದುಕು ಕೂಡ ದುರ್ಬಲ ಗೊಳ್ಳುತ್ತದೆ ಎಂಬುವುದನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂದರು. ಜಿಲ್ಲಾ 5ನೇ ಅಪರ ಮತ್ತು ಸತ್ರ ಸಿವಿಲ್ ನ್ಯಾಯಧೀಶ ಎ.ಹರೀಶ್ ಮಾತನಾಡಿ, ಮರ ಕಡೆಯದೇ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.
ಪ್ರತಿಯೊಬ್ಬರೂ ಒಂದೊಂದು ಸಸಿ ದತ್ತು ಪಡೆದು ಬೆಳೆಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು. ಮುಂದಿನ ಪೀಳೀಗೆಗೆ ಪರಿಸರ ಉಳಿಸುವಂತೆ ಆಗಬೇಕು ಎಂದರು. ಜಿಲ್ಲಾ ವಲಯ ಅರಣ್ಯ ಅಧಿಕಾರಿ ಆ್ಯಂಟೋನಿ ಮರಿಯಪ್ಪ ಮಾತನಾಡಿ, 1,700 ಹೆಕ್ಟೇರ್ ಪ್ರದೇಶವನ್ನು ಅರಣ್ಯೀಕರಣ ಗೊಳಿಸಲಾಗುವು ದು. 125 ಎಕರೆಯಲ್ಲಿ ಹಸಿರು ಕರ್ನಾಟಕ ಯೋಜನೆ ಅಡಿಯಲ್ಲಿ ಗಿಡ ಬೆಳೆಸಲಾಗುವುದು.
ಖಾಲಿಯಿರುವ ಜಾಗ ಗುರುತಿಸಿ, ಗಿಡ ನೆಡಲಾಗುತ್ತಿದೆ. ರೈತರಿಗೆ ರಿಯಾಯಿತಿ ದರ ಸಸಿ ನೀಡಲಾಗುತ್ತಿದೆ ಎಂದರು. ಪುರಸಭಾ ಸದಸ್ಯ ಕೋಡಿಮಂಚೇನಹಳ್ಳಿ ನಾಗೇಶ್, ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಹರೀಶ್ ಪಾಟೀಲ್, 2ನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ರಾಜಶೇಖರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ, ಕಾರ್ಯದರ್ಶಿ ಆನಂದ್, ಖಜಾಂಚಿ ವೆಂಕಟೇಶ್, ತಾಲೂಕು ವಲಯ ಅರಣ್ಯ ಅಧಿಕಾರಿ ಧನಲಕ್ಷಿ¾à ಇದ್ದರು.