Advertisement

ಅವಳ ಅಂತರಂಗ ಹೇಳದೆ ಉಳಿದ ಮಾತುಗಳು…

03:45 AM Mar 29, 2017 | Harsha Rao |

ಕಲಿತರೂ ಕಷ್ಟ, ಕಲಿಯದಿದ್ದರೂ ಕಷ್ಟ… ಇಂಥದ್ದೊಂದು ಸಂಕಟದ ವರ್ತುಲದೊಳಗೆ ಹೆಣ್ಣು ಬದುಕುತ್ತಿದ್ದಾಳೆ. ಈ ಸಮಾಜ, ಅಲ್ಲಿರುವ ಕೇಡಿ ಮನಸ್ಸುಗಳು ಅವಳನ್ನು ಬಗೆಬಗೆಯಲ್ಲಿ ಪೀಡಿಸುತ್ತದೆ. ಅಂಥವರ ವಿರುದ್ಧ ಹೋರಾಡಿ ಗೆದ್ದಿರುವ, ಈಗಲೂ ಹೋರಾಟದೊಂದಿಗೇ ಬಾಳುತ್ತಿರುವ ದಿಟ್ಟೆಯೊಬ್ಬಳ ಅಂತರಂಗದ ಮಾತುಗಳು ಇಲ್ಲಿವೆ…

Advertisement

ಪ್ರಪಂಚದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಡತನ, ಅನಕ್ಷರತೆ, ಮೂಢನಂಬಿಕೆ, ನಿರುದ್ಯೋಗ… ಈ ರೀತಿಯ ಅನೇಕ ತೊಂದರೆಗಳಿಗೆ ಮಹಿಳೆ ಬಲಿಯಾಗುತ್ತಿ¨ªಾಳೆ. ಇತ್ತೀಚಿನ ದಿನಮಾನದಲ್ಲಂತೂ ಮಹಿಳೆ ಎಷ್ಟು ಎತ್ತರಕ್ಕೆ ಬೆಳೆಯುತ್ತಿ¨ªಾಳ್ಳೋ ಅಷ್ಟೇ ತೊಂದರೆಗಳಿಗೂ ಸಿಲುಕಿಕೊಳ್ಳುತ್ತಿ¨ªಾಳೆ. ಕೌಟುಂಬಿಕ ದೌರ್ಜನ್ಯ, ಕಾಮುಕರ ಹಿಂಸೆ
ದಿನೇ ದಿನೇ ಹೆಚ್ಚುತ್ತಲೇ ಇದೆ. ಆದರೆ ನಾನು ಹೇಳದೆ ಉಳಿದ ಮಾತುಗಳು, ತಪ್ಪೇ ಮಾಡದೆ ಅನುಭವಿಸಿದ ನೋವುಗಳ ಬಗ್ಗೆ ಈಗ ಹೇಳಿಕೊಳ್ಳುತ್ತಿದ್ದೇನೆ.

ಚಿಕ್ಕ ವಯಸ್ಸಿನಲ್ಲೇ ನನಗೆ ಬಾಲ್ಯ ವಿವಾಹ ಮಾಡಿದ್ರು. ಅನಂತರ ಶಾಲೆಗೆ ಸೇರಿದೆ. ಓದಿನಲ್ಲಿ ಜೊತೆಗಾರರನ್ನು ಮೀರಿಸುತ್ತಿ¨ªೆ. ಆದ್ರೆ ಮುಗ್ಧ ಮನಸ್ಸೆಂದು ನೋಡದೇ, ಮನಸ್ಸಿನ ತುಂಬಾ ಬಿಳಿ ಹೊಳಪು ಒಂಚೂರೂ ಕಾಣದ್ಹಂಗೆ ಕಪ್ಪು ಮಸಿ ಹಚಾ¤ನೆ ಇದ್ರು. ಪ್ರತಿ ವರ್ಷ ಜೂನ್‌ ತಿಂಗಳ ಶಾಲಾ ತರಗತಿ ಶುರುವಾಗುವಾಗ, ಪಾಠಿ ಚೀಲಾನ ಮೆಲ್ಲಗೆ ಹೆಗಲಿಗೆ ಹಾಕ್ತಿ¨ªೆ. ಅಷ್ಟಕ್ಕೇ ಗಂಡನ ಮನೆಯಲ್ಲಿದ್ದ ಹಿರಿಯರಿಂದ ಸುಪ್ರಭಾತ ಶುರು. ಅವರ ಮಾತು ಹೇಗಿರ್ತಿತ್ತು ಗೊತ್ತಾ…? “ನಿನ್ನ ಗಂಡ ಓದಿಲ್ಲ, ನೀನೂ ಓದಬೇಡ, ಅವನು ಕಲೀದಿರೊ ಶಾಲೆ ನಿನಗ್ಯಾಕೆ? ಸುಮ್ನೆ ನನ್ನ ಜೊತೆ ಹೊಲಕ್ಕ ನಡಿ. ಎಷ್ಟು ಸಾಲಿ ಕಲಿತ್ರು ಮುಸುರೆ ತೊಳೆಯೋದು ತಪ್ಪೋಲ್ಲ. ನಮುª ರೈತರ ಕುಟುಂಬ ಹೊಲದ ಕೆಲ್ಸ ಕಲಿತ್ರ ನಾಳೆ ನಾಕು ಮಂದ್ಯಾಗ ಹೌದು ಅನ್ನಿಸಿಕೊಂತಿದಿ.’

ಈ ರೀತಿ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು. ಪ್ರತಿಭಟಿಸಬೇಕು ಅಂತ ದುಃಖ ಉಮ್ಮಳಿಸಿ ಬರ್ತಿತ್ತು. ಧೈರ್ಯ ಇರಲಿಲ್ಲ. ಭಯ, ಮತ್ತೂಂದೆಡೆ ಮುಂದುವರೆಯೋಕೆ ಮಾಹಿತಿ ಕೊರತೆ. ಆದರೆ ಆರನೆಯ ತರಗತಿ ಓದುವಾಗ ಮನಸಲ್ಲಿ ಒಂದು ಗಟ್ಟಿಯಾದ ನಿರ್ಧಾರ ಮಾಡಿದೆ. ಅದು ನನ್ನ ಭವಿಷ್ಯಕ್ಕೆ ಮುಳ್ಳಾದ ಈ ಗಂಡನನ್ನ ಯಾವುದೇ ಕಾರಣಕ್ಕೂ ನನ್ನ ಜೀವನ ಸಂಗಾತಿ ಅಂತ ಒಪ್ಪಲ್ಲ ಅನ್ನೋ ನಿರ್ಧಾರ. ಶಾಲೆ ಮುಗೀತು. ಹೈಸ್ಕೂಲ…ಗೆ ಪಕ್ಕದೂರಿಗೆ ಹೋಗಬೇಕು. ಗೆಳೆತಿಯರಿದ್ರು. ವಾಹನ ಸೌಕರ್ಯ ಇತ್ತು. ಹೀಗಿ¨ªಾಗ್ಲೂ ಮತ್ತೂಂದು ರೀತಿಯ ರಗಳೆ. “ಮೈ ನೆರೆದ ಹೆಣ್ಮಕ್ಕಳು ದೂರದ ಸಾಲಿಗೆ ಹೋಗೋದು ನಮಗ ಸರಿ ಬರಂಗಿಲ್ಲ’ ಎಂದು, ಯಾವುದೋ ಕಾಲದಲ್ಲಿ ಶಾಲೆಗೆಂದು ಹೋಗಿ ಕದ್ದು ಮದುವೆಯಾಗಿ ಬಂದವಳ ಒಂದು ಕಥೆಯನ್ನ ಸುಮಾರು ಸಾರಿ ನನ್ನ ಮುಂದೆ ಹೇಳಿದ್ರು. ಮಗುವಿನ ಮನಸ್ಸಲ್ಲಿ ತುಂಬುವ ವಿಷಯ ಇಂಥ¨ªಾ? ಆ ಘಳಿಗೇನ ನಾನು ಎಂದೂ ಮರಿಯಾಕ ಆಗದಷ್ಟು ಅಂಟಿಸಿಬಿಟ್ಟಾರ.

ಹಾಗೂ ಹೀಗೂ ಮಾಡಿ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬುದ್ದಿ ಹೇಳಿಸಿಕೊಂಡು ಪ್ರೌಢಶಾಲೆ ಸೇರಿಕೊಂಡೆ. ನನ್ನ ಗಂಡನ ಅಪ್ಪ ನಮ್ಮನೆಗೆ ಬಂದು ನನ್ನ ತಾಯಿ ಬಳಿ ಹೇಳ್ತಿದ್ದ ಮಾತುಗಳು “ಅಲ್ಲವಾ… ಗೌಡ ಶ್ಯಾನಿ, ನಿನ್ನ ಮಗಳು ಸಾಲಿ ಕಲಿಯಾಕತ್ತಿದುÉ. ಹೀಗಾದ್ರ ನಾಳೆ ನನ್ನ ಮಗ ಆಕೀಯಿಂದ ಬ್ಯಾಗ್‌ ಹೊತಗೊಂಡು ಅಡ್ಡಾಡಬೇಕೇನು?’
ಅಂತ ಉರಿಯೋ ಬೆಂಕಿಗೆ ತುಪ್ಪ ಸುರೀತಾನೆ ಇದ್ರು. ಇದೆಲ್ಲದರ ಮಧ್ಯ ನಾ ಮಾಡಿರೋ ತಪ್ಪೇನು? ನನಗಾಗ್ತಿರೋದು ಅನ್ಯಾಯ ಎಂದು ನನ್ನ ಪರ ಇರೋರು ಯಾರು? ನಾನು ಯಾರ ಬಳಿ ನನ್ನ ಆಸೆ ಆಕಾಂಕ್ಷೆಯನ್ನು ಹೇಳಿಕೊಳ್ಳಬೇಕು? ಇಂದಿಗೂ ಸಹ ಹೇಳಬೇಕಾದ ಮಾತುಗಳನ್ನು ಹೇಳದೆ ಜೀವಂತ ಶವವಾಗಿ ಬದುಕಿದ್ದೀನಿ. ಹಾಗಂತ ನನ್ನ ಹೆತ್ತವರು
ಕೆಟ್ಟವರಲ್ಲ, ನಮ್ಮ ಮನೆಯಲ್ಲಿದ್ದ ಬಡತನ ಅನ್ನೋ ಬೆಂಕಿ ಹೀಗೆ ಮಾಡಿರಬಹುದು ಅನ್ನೋ ಒಂದು ಸಣ್ಣ ನಂಬಿಕೆ ನನ್ನದು. ನಮ್ಮ ಕುಟುಂಬದ ಆವಾಗಿನ ಪರಿಸ್ಥಿತಿಗೆ ನಾನು ಯಾವ ಮಾತನ್ನೂ ಹೇಳದೇ, ಯಾವ ಪ್ರಶ್ನೆಯನ್ನು ಮಾಡದೇ, ದೇವರು ಇಟ್ಟ ಹಾಗೇ ನನ್ನ ಜೀವನ ಸಾಗಲಿ ಎಂದು ಸಾಗಿರುವುದೇ ನನ್ನ ಹೆತ್ತವರಿಗೆ ನಾನು ಕೊಟ್ಟ ಗೌರವ.
– ಸುವರ್ಣ ಜೆ. ಕೆ., ಕುಷ್ಟಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next