Advertisement
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ 31 ಉತ್ತಮ ಶಿಕ್ಷಕ ಸೇರಿ ವಿವಿಧ ವಿಭಾಗದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಿ ಅವರು ಮಾತನಾಡಿದರು.
Related Articles
Advertisement
ಶಿಕ್ಷಕ, ಶಿಕ್ಷಕನಾಗಿ ವಿದ್ಯಾರ್ಥಿಯಾಗಿಯೂ ಇರಬೇಕು. ಚಿಂತನ ಶೀಲರಾಗಿ, ಅಧ್ಯಯನ, ಸಂಶೋಧನೆಯೊಂದಿಗೆ ಆಧುನಿಕ ಬದುಕಿಗೆ ಬೇಕಾದ ಎಲ್ಲ ಜ್ಞಾನ ಪಡೆದು, ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. 50 ಸಾವಿರ ಶಿಕ್ಷಕರಿಗೆ ಹತ್ತು ದಿನದ ತರಬೇತಿ ನೀಡಲು ಗುರುಚೇತನ ಯೋಜನೆ ಆರಂಭಿಸಿದ್ದು, ಶಿಕ್ಷಕರ ವಿಕಾಸದಿಂದ ವಿದ್ಯಾರ್ಥಿಗಳ ವಿಕಾಸ ಸಾಧ್ಯ. ಶಿಕ್ಷಣ ಒಂದು ಪ್ರೊಫೆಷನ್ ಆಗಿದ್ದು, ಶಿಕ್ಷಕರು ಅನೇಕ ಪ್ರೊಫೆಷನ್ ಸೃಷ್ಟಿಸುತ್ತಾರೆ ಎಂದು ಹೇಳಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ನಾಡಿನ ಏಳಿಗೆಗೆ, ಸಮುದಾಯದ ಬದಲಾವಣೆ ಹಾಗೂ ನಾಗರಿಕ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಶಿಕ್ಷಣ ವ್ಯವಸ್ಥೆಯ ವರ್ಗೀಕರಣದಿಂದ ಬಡವರ ಮಕ್ಕಳು ಸರ್ಕಾರಿ ಶಾಲೆಗೆ, ಮಧ್ಯಮ ವರ್ಗದ ಮಕ್ಕಳು ಅನುದಾನಿತ ಶಾಲೆಗೆ ಹಾಗೂ ಶ್ರೀಮಂತರ ಮಕ್ಕಳು ಖಾಸಗಿ ಶಾಲೆ ಸೇರಿಕೊಳ್ಳುವತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣದಲ್ಲಿ ಸಮಾನತೆ ತರಲು ಸರ್ಕಾರದಿಂದ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೇ 7905 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಮಾಡಿದ್ದೇವೆ, 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಭಾಷಾ ಹಾಗೂ ವಿಷಯ ಶಿಕ್ಷಕರ ನೇಮಕಕ್ಕೂ ಚಾಲನೆ ನೀಡಿದ್ದೇವೆ. ಗ್ರಂಥಪಾಲಕ ಹಾಗೂ ದೈಹಿಕ ಶಿಕ್ಷಕರ ಜತೆಗೆ ಡಿ ದರ್ಜೆ ನೌಕರರ ಭರ್ತಿಗೂ ಚಿಂತನೆ ನಡೆಯುತ್ತಿದೆ. ಶಾಲೆಗಳ ಉನ್ನತೀಕರಣ ಮಾಡುತ್ತಿದ್ದೇವೆ ಎಂದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಟಿ.ಎ.ಶರವಣ, ಶರಣಪ್ಪ ಮಟ್ಟೂರ, ರಾಮಚಂದ್ರಗೌಡ, ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅಜೆಯ ಸೇಠ್, ಇಲಾಖೆ ಆಯುಕ್ತೆ ಸೌಜನ್ಯ, ಪಿಯು ಇಲಾಖೆ ಆಯುಕ್ತೆ ಶಿಖಾ ಮೊದಲಾದವರು ಉಪಸ್ಥಿತರಿದ್ದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಶಾಲೆಗೆ ಪ್ರತಿವರ್ಷ ಇಲಾಖೆಯಿಂದ ವಿಶೇಷ ಬಹುಮಾನ ನೀಡಲಾಗುತ್ತದೆ. ಈ ಹಿಂದೆ ಕಂಪ್ಯೂಟರ್, ಪುಸ್ತಕ ಇತ್ಯಾದಿ ನೀಡುತ್ತಿದ್ದೆವು. ಈ ವರ್ಷ ಆ ಶಾಲೆಯ ಅಭಿವೃದ್ಧಿಗೆ 2.50 ಲಕ್ಷ ನೀಡಲಿದ್ದೇವೆ.-ತನ್ವೀರ್ ಸೇಠ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ರಾಜಪ್ಪ ಮೇಸ್ಟ್ರೆ ನಮ್ಮೂರಿಗೆ ಮುಖ್ಯಶಿಕ್ಷಕರಾಗಿ ಬಾರದೇ ಇದ್ದಿದ್ದರೆ, ನಾನು ಓದುತ್ತಿರಲಿಲ್ಲ, ಮಂತ್ರಿ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ನೇರವಾಗಿ ನಾಲ್ಕನೇ ತರಗತಿಗೆ ಸೇರಿದ ನಾನು ಕಾಗುಣಿತ, ಮಗ್ಗಿ, ಲೆಕ್ಕವನ್ನು ಮರಳಿನಲ್ಲಿ ಬರೆದು ಅಭ್ಯಾಸ ಮಾಡಿದ್ದೆ. ಅಂದು ಪ್ರೌಢಶಾಲೆಯಲ್ಲಿ ಕಲಿಸಿದ ಕನ್ನಡ ವ್ಯಾಕರಣ ಇಂದಿಗೂ ಮೆದುಳಿನಲ್ಲಿ ಅಚ್ಚಾಗಿ ಉಳಿಸಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ