Advertisement

ಕೇರಳದಲ್ಲಿ ಸಿಲುಕಿದ್ದ ಜಿಲ್ಲೆ ಯ 41 ಬೋಟ್‌ಗಳ ಬಿಡುಗಡೆ ಯಶಸ್ವಿ

11:48 PM May 14, 2020 | Team Udayavani |

ಕೋಟ: ಜಿಲ್ಲೆಯ 41 ಬೋಟುಗಳು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇರಳದ ಚರ್ವತ್ತೂರು, ಚೆಂಬಲ್‌ ಮತ್ತು ಕಣ್ಣೂರಿನಲ್ಲಿ ಸಿಲುಕಿದ್ದು ಸಂಕಷ್ಟದಲ್ಲಿದ್ದ ಮೀನುಗಾರರ ಮನವಿ ಮೇರೆಗೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರೊಂದಿಗೆ ಚರ್ಚಿಸಿ ಕೇರಳ‌ದೊಂದಿಗೆ ಸಂಪರ್ಕ ಬೆಳೆಸಿ ಬೋಟ್‌ಗಳನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಇದೀಗ ಎರಡೂ ರಾಜ್ಯಗಳ ನಡುವೆ ಒಪ್ಪಂದವಾಗಿದ್ದು ಬೋಟ್‌ಗಳನ್ನು ಮರಳಿ ತರಲು ಗುರುವಾರ ಅಪರಾಹ್ನ ಹಂಗಾರಕಟ್ಟೆ ಮೀನುಗಾರಿಕೆ ಜಟ್ಟಿಯಿಂದ ಸುಮಾರು 78 ಮಂದಿಯೊಳನ್ನೊಳಗೊಂಡ ಕಾರ್ಮಿಕರು ಮತ್ತು ಬೋಟುಗಳ ಮಾಲಕರ ನಿಯೋಗ ಮೂರು ವಿಶೇಷ ಯಾಂತ್ರೀಕೃತ ಬೋಟುಗಳ ಮೂಲಕ ಕೇರಳಕ್ಕೆ ಪ್ರಯಾಣ ಬೆಳೆಸಿತು. ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯಿಂದ ಮೀನುಗಾರರ ಪ್ರಯಾಣ ವೆಚ್ಚ ಭರಿಸಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಬೋಟ್‌ಗಳು ಮರಳಿ ಕರ್ನಾಟಕ ಸೇರಲಿವೆ. ಕರಾವಳಿ ಕಾವಲುಪಡೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ, ಪೇದೆ ಮೋನು, ಮೀನುಗಾರ ಪ್ರಮುಖರಾದ ಶಂಕರ ಮರಕಾಲ, ಶೇಖರ ರಘು ಕಾಂಚನ್‌, ನರಸಿಂಹ ಕಾಂಚನ್‌, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರವೀಶ್‌, ಕಾರ್ಯದರ್ಶಿ ರಾಘವೇಂದ್ರ , ಗೋಪಾಲ ಬಂಗೇರ ಕೋಟ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next