Advertisement

ಸಕ್ರಮಗೊಂಡಿರುವುದಕ್ಕಿಂತ ತಿರಸ್ಕೃತ ಅರ್ಜಿಗಳೇ ಜಾಸ್ತಿ

01:01 AM Feb 17, 2022 | Team Udayavani |

ಉಡುಪಿ: ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಭೂಕಂದಾಯ ಕಾಯ್ದೆಯ 1964ರ ವಿವಿಧ ಕಾಲಂ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸ್ಥಳೀಯ ಶಾಸಕರ ನೇತೃತ್ವದ ಅಕ್ರಮ -ಸಕ್ರಮ ಅರ್ಜಿ ವಿಲೇವಾರಿ ಸಮಿತಿ ಆಗಿಂದಾಗ್ಗೆ ಸಭೆ ನಡೆಸಿ, ವಿಲೇವಾರಿ ಪ್ರಕ್ರಿಯೆ ನಡೆಸುತ್ತಿದೆ.

Advertisement

ಉಡುಪಿ ಜಿಲ್ಲೆಯಲ್ಲಿ 94-ಸಿಯಂತೆ ನಮೂನೆ 50ರ ಅಡಿಯಲ್ಲಿ 50,358 ಅರ್ಜಿ ಸಲ್ಲಿಕೆಯಾಗಿದ್ದು, 11,916 ಸಕ್ರಮಗೊಳಿಸಿ, 38,100 ತಿರಸ್ಕರಿಸಿ, 342 ಅರ್ಜಿ ಬಾಕಿ ಉಳಿಸಲಾಗಿದೆ. 94-ಬಿಯಂತೆ ನಮೂನೆ 53ರ ಅಡಿಯಲ್ಲಿ ಜಿಲ್ಲೆಯಲ್ಲಿ 58,382 ಅರ್ಜಿ ಬಂದಿದ್ದು, 13,193 ಸಕ್ರಮಗೊಳಿಸಿ 34,487 ತಿರಸ್ಕರಿಸಲಾಗಿದೆ. 10702 ವಿಲೇವಾರಿಗೆ ಬಾಕಿಯಿದೆ.

94-ಎ(4)ಸಿಯಂತೆ ನಮೂನೆ 57ರ ಅಡಿಯಲ್ಲಿ ಜಿಲ್ಲೆಯಲ್ಲಿ 38,993 ಅರ್ಜಿ ಬಂದಿದ್ದು, 38 ತಿರಸ್ಕರಿಸಿ, 38,955 ವಿಲೇವಾರಿಗೆ ಬಾಕಿಯಿದೆ. 94-ಸಿ (ಗ್ರಾಮೀಣ) ಅಡಿ ಬಂದಿರುವ 36,013 ಅರ್ಜಿಯಲ್ಲಿ 8,373 ಸಕ್ರಮಗೊಳಿಸಿ, 24,344 ತಿರಸ್ಕರಿಸಲಾಗಿದೆ. 7,666 ವಿಲೇವಾರಿಗೆ ಬಾಕಿಯಿದೆ. 94-ಸಿಸಿ (ನಗರ)ಯಡಿ 10153 ಅರ್ಜಿ ಸ್ವೀಕರಿಸಿದ್ದು, 2,397 ಸಕ್ರಮಗೊಳಿಸಿ, 6,647 ತಿರಸ್ಕರಿಸಲಾಗಿದೆ. 2,149 ಅರ್ಜಿ ವಿಲೇವಾರಿಗೆ ಬಾಕಿಯಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾಹಿತಿ ನೀಡಿದ್ದಾರೆ.

ವಿವಿಧ ವಿಭಾಗಗಳಲ್ಲಿ ಒಟ್ಟು 1,93,899 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 35,924 ಅರ್ಜಿ ಸಕ್ರಮ ಗೊಳಿಸಲಾಗಿದೆ. 1,03,616 ಅರ್ಜಿಗಳನ್ನು ಕಾನೂನಿನ ಅಡಿಯಲ್ಲಿ ತಿರಸ್ಕೃತಗೊಳಿಸಲಾಗಿದ್ದು, 59,814 ಅರ್ಜಿಗಳ ವಿಲೇವಾರಿ ಬಾಕಿಯಿದೆ.

ಇದನ್ನೂ ಓದಿ:ಪದವಿ ಪರೀಕ್ಷೆ: ಒಂದು ತಿಂಗಳು ಮುಂದೂಡಲು ವಿವಿಗಳಿಗೆ ಸೂಚನೆ

Advertisement

ಸಕ್ರಮ ಕಡಿಮೆ
ಒಟ್ಟು ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಸಕ್ರಮಗೊಂಡಿರುವುದಕ್ಕಿಂತ ತಿರಸ್ಕೃತ ಅರ್ಜಿಗಳೇ ಹೆಚ್ಚಿವೆ. ಜಿಲ್ಲೆಯಲ್ಲಿ ಕೇವಲ 35,924 ಅರ್ಜಿಗಳು ಮಾತ್ರ ಸಕ್ರಮವಾಗಿವೆ. ಇದರಲ್ಲಿ 94 ಸಿ ಅಡಿಯಲ್ಲಿ 8,373 ಹಾಗೂ 94ಸಿಸಿ ಅಡಿಯಲ್ಲಿ 2,397 ಅರ್ಜಿ ಸಕ್ರಮಗೊಂಡಿವೆ.

ಅಕ್ರಮ-ಸಕ್ರಮದಡಿ ಬಂದಿರುವ ಅರ್ಜಿಗಳನ್ನು ಆಯಾ ವಿಧಾನಸಭಾವಾರು ಶಾಸಕರ ನೇತೃತ್ವದಲ್ಲಿ ಇರುವ ಸಮಿತಿಯ ಪರಿಶೀಲಿಸಿ, ಇತ್ಯರ್ಥಗೊಳಿಸಲಿದೆ. ನಿಯಮಾನುಸಾರ ಯಾವುದನ್ನು ಸಕ್ರಮಗೊಳಿಸಲು ಸಾಧ್ಯವಿದೆಯೋ ಅದನ್ನು ಸಕ್ರಮಗೊಳಿಸಿ ಉಳಿದವುಗಳನ್ನು ತಿರಸ್ಕರಿಸಲಾಗುತ್ತದೆ. ತಾಂತ್ರಿಕ ಕಾರಣಕ್ಕೆ ಕೆಲವು ವಿಲೇವಾರಿಯಾಗದೆ ಉಳಿಯುತ್ತವೆ.
– ಕೂರ್ಮಾರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next