Advertisement

ಪ್ರಾದೇಶಿಕ ಪಕ್ಷ ಮುಗಿಸಲು ಹುನ್ನಾರ

01:05 PM May 10, 2018 | Team Udayavani |

ದೇವನಹಳ್ಳಿ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ರಾಷ್ಟ್ರೀಯ ಪಕ್ಷಗಳು ಹುನ್ನಾರ ನಡೆಸುತ್ತಿದೆ. ಆದರೆ ಅದು ಫ‌ಲಿಸುವುದಿಲ್ಲ. ಈ ಹಿಂದೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದ್ದರಿಂದ ದೇಶ
ವಿದೇಶಗಳಲ್ಲಿ ತಮಗೆ ಮುಜುಗರ ಉಂಟಾಗಿತ್ತು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

Advertisement

ನಗರದ ಹಳೇ ಬಸ್‌ ನಿಲ್ದಾಣದಲ್ಲಿ ತಾಲೂಕು ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಜೆಡಿಎಸ್‌ ಅಭ್ಯರ್ಥಿ ನಿಸರ್ಗ ಎಲ್‌.ಎನ್‌. ನಾರಾಯಣಸ್ವಾಮಿ ಪರವಾಗಿ ಮತಯಾಚನೆ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇವನಹಳ್ಳಿ ಟಿಕೆಟ್‌
ಹಂಚಿಕೆಯಲ್ಲಿ ಗೊಂದಲಗಳು ಉಂಟಾಯಿತು. ಶಾಸಕರಾಗಿದ್ದ ಪಿಳ್ಳಮುನಿಶಾಮಪ್ಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.

ನೀವು ಯಾರನ್ನೇ ಕಣಕ್ಕೆ ಇಳಿಸಿದರು ನಾನು ಪಕ್ಷಕ್ಕೆ ದ್ರೋಹ ಮಾಡಲ್ಲ ಎಂದು ಹೇಳಿದ್ದರಿಂದ ನಿಸರ್ಗ ನಾರಾಯಣಸ್ವಾಮಿ ಅವರನ್ನು ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದ ಮೇಲೆ ಇಲ್ಲಿನ ಮುಖಂಡರ ಅಪೇಕ್ಷದಂತೆ ನಾರಾಯಣಸ್ವಾಮಿಗೆ ಟಿಕೆಟ್‌ ನೀಡಲಾಯಿತು. ಶಾಸಕ ಪಿಳ್ಳಮುನಿಶಾಮಪ್ಪ ಪಕ್ಷ ನಿಷ್ಠೆಗೆ ಬದ್ಧರಾಗಿದ್ದಾರೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭಾಷಣಗಳನ್ನು ಮಾಡುವಾಗ ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ-ಟೀಂ ಎಂದು ಅಪಪ್ರಚಾರ ಮಾಡುತ್ತಾರೆ. ಆದರೆ ನನ್ನ ರಾಜಕೀಯ 57 ವರ್ಷ, ನನ್ನ ಇತಿಹಾಸವನ್ನು ತಿಳಿಯದೆ ನನಗಾಗಿರುವ ವಯಸ್ಸು ಅವರಿಗೆ ರಾಜಕೀಯದಲ್ಲಿ ಆಗಿಲ್ಲ. ಬಾಯಿಗೆ ಬಂದ ರೀತಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನ ಉತ್ತರ ಕೊಡ್ತಾರೆ: ಮೊದಲು ತಿಳಿದುಕೊಳ್ಳಲಿ ಯಾರೋ ಬರೆದುಕೊಟ್ಟ ಪತ್ರವನ್ನು ನೋಡಿಕೊಂಡು ಮಾತನಾಡಿದರೆ ಸಾಲದು. ಬಿ.ಟೀಮ್‌ ಪಕ್ಷ ಎಂದು ಹೇಳುವವರಿಗೆಲ್ಲಾ ಜನ ಸರಿಯಾದ ಉತ್ತರ ನೀಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ನ್ನು ಮುಗಿಸುತ್ತೇನೆಂದು ಹೇಳುತ್ತಾರೆ. ಆತ ಎಲ್ಲಿಂದ ಬಂದವನು ಮಾತೃ ಪಕ್ಷ ಯಾವುದು ಅವರನ್ನು ಈ ಮಟ್ಟಕ್ಕೆ ಬೆಳೆಸಿದವರು ಯಾರು ಎಂಬುವುದು ಮೊದಲು ತಿಳಿದುಕೊಳ್ಳಲಿ ಎಂದರು.

Advertisement

ಬಿಜೆಪಿಯವರು ಬೆಂಗಳೂರಿಗೊಸ್ಕರ ಪ್ರತ್ಯೇತಕ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ. ಮೆಟ್ರೋ ರೈಲು, ವರ್ತುಲ ರಸ್ತೆ, ಹೀಗೆ ಹತ್ತು ಹಲವಾರು ಯೋಜನೆಗಳಿದ್ದು, ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಇವೆಲ್ಲಾ ಮಾಡಿಲ್ಲ ಎಂದು ಪ್ರಶ್ನಿಸಿದರು. ಜೆಡಿಎಸ್‌ ಅಭ್ಯರ್ಥಿ ನಿಸರ್ಗ ಎಲ್‌. ಎನ್‌. ನಾರಾಯಣಸ್ವಾಮಿ ಮಾತನಾಡಿ, ದೇವೇಗೌಡರು, ಕುಮಾರಸ್ವಾಮಿ, ಶಾಸಕ ಪಿಳ್ಳಮುನಿಶಾಮಪ್ಪ ಆಶೀರ್ವಾದವಿದೆ. ಈಗ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ. ಐದು ವರ್ಷ ತಮಗೆ ಶಾಸಕ ಸ್ಥಾನದ ಅಧಿಕಾರವನ್ನು ನೀಡಿದರೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಶ್ರೀನಿವಾಸ್‌, ಕಾರ್ಯಾಧ್ಯಕ್ಷ ಆರ್‌.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪ್ರಚಾರ ಸಮಿತಿ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್‌, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಅಪ್ಪಣ್ಣಯ್ಯ, ರಾಜ್ಯ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್‌.ಎನ್‌.ಕೃಷ್ಣಮೂರ್ತಿ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ, ಎಪಿಎಂಸಿ ನಿರ್ದೇಶಕ ಕೆ.ವಿ.ಮಂಜುನಾಥ್‌, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಬೀರಪ,³ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್‌, ತಾಲೂಕು ಬಿಎಸ್‌ಪಿ ಅಧ್ಯಕ್ಷ ನರಸಿಂಹ ಮೂರ್ತಿ, ಹಾಪ್‌ಕಾಮ್ಸ್‌ ನಿರ್ದೇಶಕ ಹುರಳಗುರ್ಕಿ ಶ್ರೀನಿವಾಸ್‌ ಇದ್ದರು.

ಎಲ್ಲರಿಗೂ ಪ್ರಾತಿನಿಧ್ಯ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಪಂಚಾಯತ್‌ರಾಜ್‌, ಸ್ಥಳೀಯ ಸಂಸ್ಥೆಗಳಲ್ಲಿ ತಿದ್ದುಪಡಿ ಮಸೂದೆ ಮಾಡಿದ್ದರಿಂದ ಎಲ್ಲಾ ಜಾತಿ ಸಮುದಾಯಗಳಿಗೆ ಮೀಸಲಾತಿಯ ಹಕ್ಕನ್ನು ನೀಡಿ ಎಲ್ಲಾ ಸಮುದಾಯದವರು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಆಗಲು ಅನುಕೂಲವಾಗಿದೆ. ಡಾ.ಅಂಬೇಡ್ಕರ್‌ ಅವರ ಸಂವಿಧಾನದಂತೆ ಎಲ್ಲಾ ರಾಜಕೀಯದವರಿಗೆ ಪ್ರಾತಿನಿಧ್ಯ ನೀಡಿದ್ದು, ಮಾಯಕೊಂಡದಲ್ಲಿ ಬುಡಬುಡಕಿಯವರು ಜಿಪಂ
ಸದಸ್ಯರಾಗಿದ್ದಾರೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next