Advertisement

ಚೇತರಿಸಿಕೊಂಡ ಮಾರುಕಟ್ಟೆ

12:50 AM Sep 05, 2019 | Team Udayavani |

ಮುಂಬಯಿ: ಈ ವಾರದ ಆರಂಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಉಂಟಾದ ಭಾರೀ ಕುಸಿತದ ನಂತರ ಬುಧವಾರ ಸ್ವಲ್ಪ ಚೇತರಿಕೆ ಕಂಡುಬಂದಿದೆ.

Advertisement

ದೇಶದ ಕುಸಿಯುತ್ತಿರುವ ಆರ್ಥಿಕ ಸನ್ನಿವೇಶವನ್ನು ನಿರ್ಲಕ್ಷಿಸಿ, ಜಾಗತಿಕ ಅಂಶಗಳನ್ನು ಪರಿಗಣಿಸಿ ಹೂಡಿಕೆದಾರರು ಷೇರುಗಳನ್ನೂ ಖರೀದಿಸಿದರು. ಬಿಎಸ್‌ಇ ಸೆನ್ಸೆಕ್ಸ್‌ ಬುಧವಾರ 367 ಅಂಕ ಏರಿಕೆ ಕಂಡಿದ್ದು, 36,724.74 ಅಂಕಕ್ಕೆ ತಲುಪಿದೆ. ದಿನದ ಮಧ್ಯದಲ್ಲಿ ಇದು 36,776.31 ಅಂಕಕ್ಕೂ ತಲುಪಿತ್ತು.

ಇದೇ ವೇಳೆ ನಿಫ್ಟಿ 46.75 ಅಂಕ ಏರಿಕೆ ಕಂಡು 10,844.65 ಅಂಕಕ್ಕೆ ತಲುಪಿತು. ಬ್ಯಾಂಕಿಂಗ್‌, ಟೆಲಿಕಾಂ ಮತ್ತು ಐಟಿ ಸ್ಟಾಕ್‌ಗಳು ಏರಿಕೆ ಕಂಡಿವೆ. ಹಾಂಕಾಂಗ್‌ನಲ್ಲಿ ಗಡೀಪಾರು ನಿಯಮವನ್ನು ಹಿಂಪಡೆದುಕೊಂಡಿರುವ ಹಾಂಕಾಂಗ್‌ ನಾಯಕ ಕ್ಯಾರಿ ಲ್ಯಾಮ್‌ ನಿರ್ಧಾರದಿಂದಾಗಿ ಹಾಂಕಾಂಗ್‌ ಹಾಗೂ ಚೀನಾ ಮಧ್ಯದ ಸಂಬಂಧ ಸುಧಾರಿಸುವ ಸಾಧ್ಯತೆಯಿದೆ. ಇದರಿಂದ ಈ ವಲಯದಲ್ಲಿ ವ್ಯಾಪಾರ ವಹಿವಾಟಿಗೆ ಉತ್ತೇಜನ ಲಭ್ಯವಾಗಲಿದೆ. ಕಳೆದ ಕೆಲವು ತಿಂಗಳಿಂದ ಈ ನಿರ್ಧಾರದ ವಿರುದ್ಧ ಹಾಂಕಾಂಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು.

ಈ ಮಧ್ಯೆ ಡಾಲರ್‌ ಎದುರು ರೂಪಾಯಿ ಮೌಲ್ಯ 27 ಪೈಸೆ ಏರಿಕೆ ಕಂಡು 72.12 ಕ್ಕೆ ತಲುಪಿದೆ. ಮಂಗಳವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 72.39 ಆಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಿಂದಾಗಿ ಬುಧವಾರ 10 ಗ್ರಾಂ ಚಿನ್ನಕ್ಕೆ 120 ರೂ. ಏರಿಕೆಯಾಗಿದ್ದು ಹೊಸದಿಲ್ಲಿಯಲ್ಲಿ 39,248 ರೂ. ಆಗಿದೆ. ಅಲ್ಲದೆ, ಬೆಳ್ಳಿ ಕಿಲೋಗೆ 2,070 ರೂ. ಏರಿ 50,125 ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next