Advertisement

ಅಂತರದ ದಾಖಲೆ ಬರೆದ ಅನಂತ

04:21 PM May 24, 2019 | pallavi |

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಡೆದ ಪೋಸ್ಟಲ್ ಮತಗಳಲ್ಲಿ ಸಹ ಬಿಜೆಪಿಗೆ ಹೆಚ್ಚು ಮತಗಳು ಬಂದವು. ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಹೆಗಡೆ 2831 ಮತಗಳನ್ನು ಪಡೆದರೆ, ಜೆಡಿಎಸ್‌ನ ಆನಂದ ಅಸ್ನೋಟಿಕರ್‌ 263 ಮತಗಳನ್ನು ಪಡೆದರು. ಸುಧಾಕರ ಜೋಗಳೇಕರ್‌ 40, ನಾಗರಾಜ ನಾಯ್ಕ 7, ನಾಗರಾಜ ಶೇಟ್ 4, ಮಂಜುನಾಥ ಸದಾಶಿವ 7, ಸುನೀಲ ಪವಾರ 6, ಅನಿತಾ ಶೇಟ್ 16, ಕುಂದಾಬಾಯಿ 7, ಚಿದಾನಂದ ಹರಿಜನ 4, ನಾಗರಾಜ ಶಿರಾಲಿ 5, ಬಾಲಕೃಷ್ಣ ಪಾಟೀಲ 3, ಮೊಹಮ್ಮದ್‌ ಖತೀಬಾ 6 ಮತಗಳನ್ನು ಪಡೆದರು.

Advertisement

ಉತ್ತರ ಕನ್ನಡ ಜಿಲ್ಲೆಯಲ್ಲಿ ನೋಟಾ ಮತಗಳು 18017

ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ 16017 ನೋಟಾ ಮತಗಳು ಚಲಾವಣೆಯಾಗಿವೆ. ಅಂಚೆ ಮತಗಳು 3199 ಸೇರಿ ಒಟ್ಟು ಚಲಾವಣೆಯಾದ ಮತಗಳು 11,54,390. ಇದರಲ್ಲಿ 5,90,734 ಪುರುಷರು, 5,58,871 ಮಹಿಳೆಯರು ಮತ ಚಲಾಯಿಸಿದ್ದರು. ಈ ಸಲ ಶೇ.74.07 ರಷ್ಟು ಮತದಾನವಾಗಿತ್ತು. 2014ರ ಚುನಾವಣೆಯಲ್ಲಿ 69.04 ರಷ್ಟು ಮತದಾನವಾಗಿತ್ತು.

ಲೋಕಸಭಾ ಚುನಾವಣೆ ಕಣದಲ್ಲಿದ್ದ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳ ವಿವರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಜೆಡಿಎಸ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಣದಲ್ಲಿದ್ದ ಅಭ್ಯರ್ಥಿಗಳು ಈ ಸಲ (2019) ಪಡೆದ ಮತಗಳ ವಿವರ ಇಂತಿದೆ.

ಬಿಜೆಪಿ ಸಿದ್ಧಾಂತ ಮೆಚ್ಚಿ ಬಂದ ಗೆಲುವು

Advertisement

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಭಾರೀ ಅಂತರದ ಗೆಲುವು ಸಿಗುತ್ತಿದ್ದಂತೆ ಕಾರ್ಯಕರ್ತರು ಮತ್ತು ಬಿಜೆಪಿ ಶಾಸಕರ ಸಮ್ಮುಖದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ ಸಂಸದ, ಹಾಲಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಅಂತರದಲ್ಲಿ ಸಂಸದರೊಬ್ಬರು ಗೆದ್ದ ಇತಿಹಾಸವಿಲ್ಲ. ಈ ಗೆಲುವು ಬಿಜೆಪಿ ಗೆಲುವಿನ ಹೊಸ ವ್ಯಾಖ್ಯಾನ ಎಂದರು.

ಬಿಜೆಪಿ ಸಿದ್ಧಾಂತವನ್ನು ಮತದಾರರು ಒಪ್ಪಿದ್ದಾರೆ ಎಂದು ಇದರ ಅರ್ಥ. ಇದರಲ್ಲಿ ಬಿಜೆಪಿ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ್ ನಾಯ್ಕ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶ್ರಮವಿದೆ. ಖಾನಾಪುರದಲ್ಲಿ ಬಿಜೆಪಿ ಶಾಸಕರು ಇಲ್ಲದಿದ್ದರೂ ಅಲ್ಲಿಂದ ನನಗೆ 113386 ಮತಗಳು ಬಂದಿವೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ. ಬಿಜೆಪಿಗೆ ಹೆಚ್ಚು ಮತ ತಂದ ಎರಡನೇ ಸ್ಥಾನ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. ಕಾರ್ಯಕರ್ತರ ಶ್ರಮವೂ ಇದೆ. ಎಲ್ಲರೂ ಶ್ರಮಿಸಿದರೆ ಎಂಥ ಗೆಲುವು ಸಾಧ್ಯ ಎಂಬುದಕ್ಕೆ ನನ್ನ ಗೆಲುವೇ ಸಾಕ್ಷಿ ಎಂದರು.

ಕಾಣಿಸದ ಆನಂದ: ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಕ್ಷೇತ್ರದಲ್ಲೇ ಕಾಣಿಸಿಕೊಂಡಿಲ್ಲ. ಮತ ಎಣಿಕೆ ದಿನವೂ ಸಹ ಅವರು ಕಾರವಾರಕ್ಕೂ ಬರಲಿಲ್ಲ. ಮತ ಎಣಿಕೆಯಾಗುತ್ತಿದ್ದ ಕುಮಟಾಕ್ಕೂ ಬರಲಿಲ್ಲ.

ಜೆಡಿಎಸ್‌ ಪಕ್ಷದ ಕೆಲ ಕಾರ್ಯಕರ್ತರು, ಮುಖಂಡರು, ನಾಲ್ಕು ಮತ ಎಣಿಕೆಯ ನಾಲ್ಕಾರು ಸುತ್ತು ಇದ್ದರು. ಮತಗಳ ಅಂತರ 1.50 ಲಕ್ಷ ದಾಟುತ್ತಿದ್ದಂತೆ ಅವರು ಸಹ ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು. ಕಾಂಗ್ರೆಸ್‌ ಪಕ್ಷದ ಯಾವ ನಾಯಕರು ಮತ ಎಣಿಕೆ ಕೇಂದ್ರದ ಹತ್ತಿರವೂ ಸುಳಿಯಲಿಲ್ಲ. ಇದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಡುವಿನ ದೊಡ್ಡ ಬಿರುಕನ್ನು ಸಾರಿ ಹೇಳಿತು. ಸೋಲಿನ ಬಗ್ಗೆ, ಮತದಾರರ ನಿಲುವಿನ ಬಗ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್‌, ಜೆಡಿಎಸ್‌ನವರೂ ಸೇರಿದಂತೆ ಯಾರೂ ಸಹ ಮುಂದಾಗಲಿಲ್ಲ.

•ಗೆಲುವಿನ ಹೊಸ ವ್ಯಾಖ್ಯಾನ

•ಕಾರ್ಯಕರ್ತರ ಶ್ರಮವೂ ಇದೆ

ನಡೆಯಲಿಲ್ಲ ಹಾವು ಏಣಿ ಆಟ
ಕಾರವಾರ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಹೆಗಡೆ ಮತಯಾತ್ರೆ ಹಾವು ಏಣಿ ಆಟ ಆಡಲೇ ಇಲ್ಲ. ಮೊದಲ ಸುತ್ತಿನಿಂದ ಕೊನೆಯ ಸುತ್ತಿನ ವರೆಗೂ ಬಿಜೆಪಿ ಮತ ಗಳಿಕೆ ಏರಿಕೆಯತ್ತ ಸಾಗುತ್ತಲೇ ಹೋಯಿತು. ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಹೆಗಡೆಗೆ 44511 ಮತಗಳು ಬಂದವು. ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ಗೆ 11289 ಮತಗಳು ಬಂದವು. ಮೊದಲ ಸುತ್ತಿನಲ್ಲೇ ಅಂತರ 33222 ಆಗಿತ್ತು.

ಎರಡನೇ ಸುತ್ತಿನಲ್ಲಿ 90625 ಬಿಜೆಪಿಗೆ ಬಂದರೆ, ಜೆಡಿಎಸ್‌ 24960. ಮತಗಳಿಕೆಯ ಮುನ್ನಡೆ ಬಿಜೆಪಿ ಅಭ್ಯರ್ಥಿಗೆ 56665 ಆಗಿತ್ತು. ಮೂರನೇ ಸುತ್ತಿನಲ್ಲಿ 133833 ಬಿಜೆಪಿಗೆ, ಜೆಡಿಎಸ್‌ಗೆ 40047. ಅಂತರ 93766 ರಷ್ಟಿತ್ತು.

ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಜೆಡಿಎಸ್‌ ಅಭ್ಯರ್ಥಿಗಿಂತ 121772 ಮತಗಳಿಕೆಯಲ್ಲಿ ಮುನ್ನಡೆಯಲ್ಲಿದ್ದರು. ಐದನೇ ಸುತ್ತಿಗೆ 154585, ಆರನೇ ಸುತ್ತಿಗೆ 183343, ಏಳನೇ ಸುತ್ತಿಗೆ 209391 ಮತಗಳ ಮುನ್ನಡೆಯಿತ್ತು. ಬಿಜೆಪಿ ಅಭ್ಯರ್ಥಿ ಈ ಮುನ್ನಡೆಯನ್ನು ಒಂದೊಂದು ಸುತ್ತಿಗೂ ಏರಿಸಿಕೊಳ್ಳುತ್ತಲೇ ಹೋದರು. ಎಂಟನೇ ಸುತ್ತಿಗೆ ಅನಂತಕುಮಾರ್‌ ಹೆಗಡೆ 2,33,997 ಮತಗಳ ಮುನ್ನಡೆ ಗಳಿಸಿದ್ದರು. ಒಂಬತ್ತನೇ ಸುತ್ತಿಗೆ 2,58,220, ಹತ್ತನೇ ಸುತ್ತಿಗೆ 2,90,016, ಹನ್ನೊಂದನೇ ಸುತ್ತಿಗೆ 3,21,024, ಹನ್ನೆರಡನೇ ಸುತ್ತಿಗೆ 3,52,121, ಹದಿಮೂರನೇ ಸುತ್ತಿಗೆ 3,77,058, ಹದಿನಾಲ್ಕನೇ ಸುತ್ತಿಗೆ 4,06,363, ಹದಿನೈದನೇ ಸುತ್ತಿಗೆ 4,24,588, ಹದಿನಾರನೇ ಸುತ್ತಿಗೆ 4,39,539, ಹದಿನೇಳನೆ ಸುತ್ತಿಗೆ 4,56, 413, ಹದಿನೆಂಟನೇ ಸುತ್ತಿಗೆ 4,70,330, ಹತ್ತೂಂಬೊತ್ತನೇ ಸುತ್ತಿಗೆ 4,76,657 ಮತಗಳ ಮುನ್ನಡೆ ಸಾಸಿತ್ತು. ಕೊನೆಯ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 4,77,081 ಮತಗಳ ಮುನ್ನಡೆ ಪಡೆಯಿತು. ಇದಕ್ಕೆ ಬಿಜೆಪಿಗೆ ಬಂದ ಅಂಚೆ ಮತಗಳು 2831 ಸಹ ಸೇರಿದಾಗ ಅಂತಿಮವಾಗಿ 4,79,649 ಮತಗಳು ಬಂದಿದ್ದವು. ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಲೀಡ್‌ ಎಂಬುದು ದಾಖಲಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ದಾಖಲೆ ಬರೆದಿದೆ. ದೇಶದಲ್ಲಿ ಅತೀ ಹೆಚ್ಚು ಲೀಡ್‌ನ‌ಲ್ಲಿ ಗೆದ್ದ ಬಿಜೆಪಿಯ ಎರಡನೇ ಅಭ್ಯರ್ಥಿ ಎಂದು ಅನಂತಕುಮಾರ್‌ ಹೆಗಡೆ ಹೊಸ ದಾಖಲೆ ಬರೆದರು.

Advertisement

Udayavani is now on Telegram. Click here to join our channel and stay updated with the latest news.

Next