Advertisement

ಶ್ರೀಕೃಷ್ಣನಿಂದಲೇ ಬಂಡಾಯ ಪ್ರಾರಂಭ: ಓಂಪ್ರಕಾಶ

12:20 PM Aug 15, 2017 | |

ಬೀದರ: ಸತ್ಯವೇ ದೇವರು. ಆ ದೇವರೇ ಶ್ರೀಕೃಷ್ಣ. ಮಹಾಭಾರತದ ಕಾಲದಿಂದ ಶ್ರೀಕೃಷ್ಣನಿಂದಲೇ ಬಂಡಾಯ ಆರಂಭವಾಗಿದೆ ಎಂದು ಹಾಲಹಳ್ಳಿ ಕಾಲೇಜು ಉಪನ್ಯಾಸಕ ಓಂಪ್ರಕಾಶ ಧಡ್ಡೆ ಪ್ರತಿಪಾದಿಸಿದರು. ನಗರದ ರಂಗ ಮಂದಿರದಲ್ಲಿ ಸೋಮವಾರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಈ ಜಗತ್ತೇ ಶ್ರೀಕೃಷ್ಣಮಯವಾಗಿದೆ. ನಮ್ಮ ನಡೆ ನುಡಿಯಲ್ಲಿ ಶ್ರೀಕೃಷ್ಣನಿದ್ದಾನೆ. ಶ್ರೀಕೃಷ್ಣ ಅಂದರೆ ಒಂದು ಜಾತಿ, ಧರ್ಮ ಅಲ್ಲ. ಶಿಕ್ಷಕನಾಗಿ, ವೈದ್ಯನಾಗಿ, ಮಗುವಾಗಿ ಶ್ರೀಕೃಷ್ಣ ನಮ್ಮ ನಡುವಿದ್ದಾನೆ. ಸತ್ಯದ ಕಡೆ ಹೋಗುವ ದಿನವೇ ಜನ್ಮಾಷ್ಠಮಿ ಎಂದರು. ಸಮಾಜದಲ್ಲಿ ಕೃಷ್ಣನಂತೆ ಸತ್ಯ ಹಾಗೂ ಧರ್ಮದ ಮೇಲೆ ನಡೆಯುವ ಧರ್ಮ ಉಳಿಸುವ ಕೆಲಸ ಮಾಡಬೇಕಾಗಿದೆ. ಇಂತಹ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಅನ್ಯಾಯ, ಅತ್ಯಾಚಾರಗಳಿಂದ ದೂರ ಇರಬೇಕಾಗಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪಾಧ್ಯಕ್ಷ ಪ್ರಕಾಶ ಪಾಟೀಲ, ಜಿಲ್ಲಾ ಧಿಕಾರಿ ಡಾ|ಎಚ್‌.ಆರ್‌. ಮಹಾದೇವ ಮಾತನಾಡಿದರು. ನಗರ ಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ, ಬುಡಾ ಅಧ್ಯಕ್ಷ ಸಂಜಯ ಜಾಗಿರದಾರ, ಅಪರ ಜಿಲ್ಲಾಧಿಕಾರಿ ಡಾ| ಶಣ್ಮುಖ, ಸಹಾಯಕ ಆಯುಕ್ತ ಶಿವಕುಮಾರ
ಶೀಲವಂತ, ಎಎಸ್‌ಪಿ ಶ್ರೀಹರಿಬಾಬು, ನಗರಾಭಿವೃದ್ಧಿ ಕೋಶದ ಅ ಧಿಕಾರಿ ಬಲಭೀಮ ಕಾಂಬಳೆ, ಯಾದವ ಸಮಾಜದ ಅಧ್ಯಕ್ಷ ಜಗನ್ನಾಥ ಕೆ., ಶರಣು ಬಿರಾದಾರ, ತಹಶೀಲ್ದಾರ ಜಗನ್ನಾಥ ರೆಡ್ಡಿ ಮತ್ತಿತರರು ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಅ ಧಿಕಾರಿ ವೆಂಕಟೇಶ ಉಗಿಬಂಡಿ ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀ ಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಪ್ರಮುಖ ರಸ್ತೆ ಮೂಲಕ ಜಿಲ್ಲಾ ರಂಗಮಂದಿರಕ್ಕೆ ಬಂದು ಸೇರಿತು. ಶ್ರೀಕೃಷ್ಣ ವೇಷಧಾರಿ ಮಕ್ಕಳು, ಶ್ರೀಕೃಷ್ಣನ ಹಾಡುಗಳ ನೃತ್ಯ ಕಣ್ಮನ ತಣಿಸಿತು. ಬೆಳಗ್ಗೆ ಪೂಜೆ: ಬೆಳಗ್ಗೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ
ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ಮಹಾದೇವ ಅವರು ದೀಪ ಬೆಳಗಿಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

Advertisement

ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ ಹೆಚ್ಚಿರುವ ಇಂಥ ಸಂದರ್ಭದಲ್ಲಿ ಮತ್ತೆ ಶ್ರೀಕೃಷ್ಣನ ಅವತಾರದ ಅವಶ್ಯಕತೆ
ಇದೆ. ಶ್ರೀಕೃಷ್ಣ ಎಲ್ಲರಿಗೂ ಸ್ನೇಹಜೀವಿಯಾಗಿ, ಮಹಿಳೆಯರ ರಕ್ಷಣೆಗಾಗಿ ಅನೇಕ ಅವತಾರಗಳಲ್ಲಿ ಜನಿಸಿದ್ದಾನೆ. ಆದರೆ ಕೆಲವರು
ಶ್ರೀ ಕೃಷ್ಣನನ್ನು ಕುರಿತು ಮಹಿಳೆಯರ ಬಗ್ಗೆ ತಪ್ಪು ಕಲ್ಪನೆ ಹೊದಿದ್ದಾರೆ.

ಓಂಪ್ರಕಾಶ ಧಡ್ಡೆ, ಉಪನ್ಯಾಸಕ

Advertisement

Udayavani is now on Telegram. Click here to join our channel and stay updated with the latest news.

Next