Advertisement

ʼಈ ಸಲ ಕಪ್‌ ನಮಗಲ್ಲʼ ಎಂದ ಆರ್‌ಸಿಬಿ ಕ್ಯಾಪ್ಟನ್‌ ! : ವಿಡಿಯೋ ವೈರಲ್‌

08:10 PM Apr 01, 2023 | Team Udayavani |

ಬೆಂಗಳೂರು: ʻಈ ಸಲ ಕಪ್‌ ನಮ್ದೇʼ… ಇದು ಪ್ರತಿ ಬಾರಿ ಐಪಿಎಲ್‌ ಹತ್ತಿರವಾದಾಗಲೂ ಆರ್‌ಸಿಬಿ ಫ್ಯಾನ್ಸ್‌ ಬಾಯಿಯಿಂದ ಬರುವ ಘೋಷವಾಕ್ಯ. ಇದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಭಿಮಾನಿಗಳಿಗೆ ಎವರ್‌ಗ್ರೀನ್‌ ಸ್ಲೋಗನ್‌. ಇದೇ ಘೋಷಣೆ ಮೂಲಕ ಆರ್‌ಸಿಬಿ ಅಭಿಮಾನಿಗಳು ತಂಡಕ್ಕೆ ಜೋಷ್‌ ತುಂಬುತ್ತಲೇ ಬಂದಿಸದ್ದಾರೆ.

Advertisement

ಆದರೆ ʻಈ ಸಲ ಕಪ್‌ ನಹೀʼ ಎನ್ನುವ ಮೂಲಕ ಆರ್‌ಸಿಬಿ ಕ್ಯಾಪ್ಟನ್‌ ಪಾಫ್‌ ಡು ಪ್ಲೆಸಿಸ್‌ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಪ್ರಥಮ ಪಂದ್ಯವಾಡುವುದಕ್ಕೂ ಮೊದಲೇ ಆರ್‌ಸಿಬಿ ತಂಡದ ನಾಯಕ ಈ ರೀತಿ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಬಾಯಿತಪ್ಪಿ ಈ ರೀತಿ ಹೇಳಿದ್ದು ವೈರಲ್‌ ಆಗಿದೆ.

ಇದನ್ನೂ ಓದಿ: Photo Gallery: ಭರ್ಜರಿ ಅಭ್ಯಾಸದಲ್ಲಿ ಆರ್‌ ಸಿಬಿ ಆಟಗಾರರು; ಮುಂಬೈ ಸವಾಲಿಗೆ ರೆಡಿ

ಡು ಪ್ಲೆಸಿಸ್‌ ಅವರ ಈ ಹೇಳಿಕೆ ಕೇಳಿ ಅಲ್ಲೇ ಇದ್ದ ವಿರಾಟ್‌ ಕೊಹ್ಲಿ ಅವರು ನಗು ತಡಿಯಲಾರದೆ ಬಿದ್ದೂ ಬಿದ್ದೂ ನಕ್ಕಿದ್ಧಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next