Advertisement

36 ಬ್ಯಾಂಕ್‌ಗಳಿಗೆ ಆರ್‌ಬಿಐ 71 ಕೋಟಿ ದಂಡ

12:30 AM Mar 10, 2019 | |

ಹೊಸದಿಲ್ಲಿ: ತನ್ನ ಸೂಚನೆಯ ಹೊರತಾಗಿಯೂ, ಸ್ವಿಫ್ಟ್ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಿಸದ ಕಾರಣಕ್ಕೆ, ಬ್ಯಾಂಕ್‌ ಆಫ್ ಬರೋಡಾ, ಸಿಟಿ ಯೂನಿಯನ್‌ ಬ್ಯಾಂಕ್‌, ಎಚ್‌ಎಸ್‌ಬಿಸಿ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ ಮತ್ತು ಯೆಸ್‌ ಬ್ಯಾಂಕ್‌ ಸೇರಿದಂತೆ 36 ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ 71 ಕೋಟಿ ರೂ. ದಂಡ ವಿಧಿಸಿದೆ. ಹಣಕಾಸು ಸಂಸ್ಥೆಗಳ ಮಧ್ಯೆ ವಹಿವಾಟುಗಳಿ ಗಾಗಿ ಸ್ವಿಫ್ಟ್ ಜಾಗತಿಕ ಸಂದೇಶ ರವಾನೆ ಸಾಫ್ಟ್ವೇರ್‌ ಅನ್ನು ಬಳಸಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ದುರ್ಬಳಕೆ ಮಾಡಿ ಕೊಂಡಿದ್ದ ಉದ್ಯಮಿ ನೀರವ್‌ ಮೋದಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಮೋಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಆರ್‌ಬಿಐ ಸೂಚಿಸಿತ್ತು. 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next